ಗ್ಯಾರಿ ಕರ್ಸ್ಟೈನ್
From Wikipedia, the free encyclopedia
ಗ್ಯಾರಿ ಕರ್ಸ್ಟೈನ್ (ಕೇಪ್ ಟೌನ್ ನಲ್ಲಿ 1967 ರ ನವೆಂಬರ್ 23 ರಂದು ಜನನ) ಅವರು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗರು, ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದ ತರಬೇತುದಾರರಾಗಿದ್ದಾರೆ. ಇವರು ಪ್ರಮುಖವಾಗಿ ಆರಂಭಿಕ ಬ್ಯಾಟ್ಸ್ಮನ್ ಆಗಿ 1993 ರಿಂದ 2004 ನೇ ಸಾಲಿನ ನಡುವೆ ದಕ್ಷಿಣ ಆಫ್ರಿಕದ ಪರವಾಗಿ 101ಟೆಸ್ಟ್ ಪಂದ್ಯಗಳು ಮತ್ತು 185 ಒಂದು ದಿನದ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇವರ ಕಿರಿಯ ಸಹೋದರರಾದ ಪೀಟರ್ ಅವರೂ ಸಹ ಪಶ್ಚಿಮ ಪ್ರಾಂತ್ಯದ ಪರವಾಗಿ ಪ್ರಾಂತೀಯ ಕ್ರಿಕೆಟ್ ಅನ್ನು ತದನಂತರ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಪರವಾಗಿಯೂ ಆಟವಾಡಿದ್ದು ಇದರಲ್ಲಿ 1992 ರಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ನ ಪ್ರಮುಖ ಕ್ಷಣವೂ ಒಳಗೊಂಡಿತ್ತು.
![Thumb image](http://upload.wikimedia.org/wikipedia/commons/thumb/1/1c/GaryKirsten.jpg/220px-GaryKirsten.jpg)
ವಯಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | Gary Kirsten | |||||||||||||||||||||||||||||||||||||||||||||||||||||||||||||||||
ಬ್ಯಾಟಿಂಗ್ | Left-handed | |||||||||||||||||||||||||||||||||||||||||||||||||||||||||||||||||
ಬೌಲಿಂಗ್ | Right arm off break | |||||||||||||||||||||||||||||||||||||||||||||||||||||||||||||||||
ಸಂಬಂಧಗಳು | Paul Kirsten (brother) Peter Kirsten (half-brother) | |||||||||||||||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ರಾಷ್ಟೀಯ ತಂಡ |
| |||||||||||||||||||||||||||||||||||||||||||||||||||||||||||||||||
ಟೆಸ್ಟ್ ಚೊಚ್ಚಲ (ಕ್ಯಾಪ್ 257) | 26 December 1993 v Australia | |||||||||||||||||||||||||||||||||||||||||||||||||||||||||||||||||
ಕೊನೆಯ ಟೆಸ್ಟ್ | 30 March 2004 v New Zealand | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ 28) | 14 December 1993 v Australia | |||||||||||||||||||||||||||||||||||||||||||||||||||||||||||||||||
ಕೊನೆಯ ಅಂ. ಏಕದಿನ | 3 March 2003 v Sri Lanka | |||||||||||||||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||||||||||||||||||||||||||||||||
1987–2004 | Western Province | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಮೂಲ: Cricinfo, 28 December 2009 |
ಕರ್ಸ್ಟನ್ ಅವರು 1993 ರಲ್ಲಿ ಮೆಲ್ಬೋರ್ನ್ನಲ್ಲಿ ಆಸ್ಟ್ರೇಲಿಯ ತಂಡ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದರು. ಇವರು 2004 ರಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಪಂದ್ಯ ಗೆಲ್ಲಿಸಿದ ಆಟವಾಡಿ, ಪ್ರಥಮ ಇನ್ನಿಂಗ್ಸ್ನಲ್ಲಿ 76 ರನ್ ಬಾರಿಸುವುದರೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯನ್ನು ಹೊಂದಿದರು. ಅದೇ ತಂಡದ ವಿರುದ್ಧ ಪಂದ್ಯವನ್ನಾಡುವ ಮೂಲಕ 100 ಟೆಸ್ಟ್ ಪಂದ್ಯಗಳನ್ನಾಡಿದ ಏಕೈಕ ದಕ್ಷಿಣ ಆಫ್ರಿಕಾ ಆಟಗಾರ ಎಂಬ ಇತಿಹಾಸವನ್ನು ರಚಿಸಿದರು.
ವೃತ್ತಿ ಜೀವನ ಕಾಲದಲ್ಲಿ, ಕಸ್ಟೈರ್ನ್ ಅವರು ಟೆಸ್ಟ್ ಮತ್ತು ಒಂದು ದಿನದ ಕ್ರಿಕೆಟ್ಗಳೆರಡರಲ್ಲೂ ಬಲಿಷ್ಠ ಬ್ಯಾಟ್ಸ್ಮನ್ ಎಂಬ ಪ್ರಖ್ಯಾತಿಯನ್ನು ಗಳಿಸಿದ್ದರು. ಇವರು ಅಗತ್ಯಬಿದ್ದರೆ ಇನ್ನಿಂಗ್ಸ್ ವೇಗವನ್ನು ಹೆಚ್ಚಿಸುತ್ತಿದ್ದರಲ್ಲದೇ ಆಗಾಗ್ಗೆ ಸ್ಟೀವ್ ವಾ ಮತ್ತು ಜಸ್ಟಿನ್ ಲ್ಯಾಂಗರ್ ಅವರಂತೆ ಚೆಂಡಿಗಾಗಿ ನಿರೀಕ್ಷಿಸಿ ಆಟವಾಡುತ್ತಿರಲಿಲ್ಲ. ಇವರು ನಂಬಿಗಾರ್ಹ ಕ್ಷೇತ್ರರಕ್ಷಕರೂ ಸಹ ಆಗಿದ್ದರು.
ಜಾಕ್ವೆಸ್ ಕಾಲಿಸ್ ಅವರು ದಕ್ಷಿಣ ಆಫ್ರಿಕದ ಪರವಾಗಿ ಟೆಸ್ಟ್ ಪಂದ್ಯಗಳಲ್ಲಿ ಅತ್ಯಧಿಕ ರನ್ಗಳು ಮತ್ತು ಶತಕಗಳನ್ನು ಬಾರಿಸಿದ ದಾಖಲೆಯನ್ನು ಹೊಂದುವುದಕ್ಕೂ ಮೊದಲು ಕರ್ಸೈನ್ ಅವರು ಈ ದಾಖಲೆಯನ್ನು ತಮ್ಮ ಪರವಾಗಿ ಹೊಂದಿದ್ದರು. ಕರ್ಸ್ಟೈನ್ ಅವರು 9 ಟೆಸ್ಟ್ ರಾಷ್ಟ್ರಗಳ ವಿರುದ್ಧವೂ ಶತಕಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್ಮನ್ ಆಗಿದ್ದಾರೆ. ದಕ್ಷಿಣ ಆಫ್ರಿಕಾ ತಂಡವು ಇಂಗ್ಲೆಂಡ್ ತಂಡದ ವಿರುದ್ಧ ಫಾಲೋ ಆನ್ ಆದ ನಂತರ ಬ್ಯಾಟ್ ಮಾಡಲ್ಪಟ್ಟಾಗ ಕರ್ಸ್ಟೈನ್ ಅವರು ಹದಿನಾಲ್ಕುವರೆ ಗಂಟೆಗಳಷ್ಟು ದೀರ್ಘಕಾಲ ಬ್ಯಾಟಿಂಗ್ ಮಾಡಿ 275 ರನ್ ಗಳಿಸಿದರು ಮತ್ತು ಇದು ಟೆಸ್ಟ್ ಇತಿಹಾಸದಲ್ಲಿ ಎರಡನೆಯ ಅತೀ ದೀರ್ಘಾವಧಿಯ ಇನ್ನಿಂಗ್ಸ್ (ಕಾಲಾವಧಿಯ ಲೆಕ್ಕದಲ್ಲಿ) ಎಂದು ದಾಖಲಿಸಲ್ಪಟ್ಟಿದೆ.[1] ಈ ಅತ್ಯಧಿಕ ರನ್ ಗಳಿಕೆಯನ್ನು 2003 ರಲ್ಲಿ ಗ್ರೇಮ್ ಸ್ಮಿತ್ ಅವರು ಇಂಗ್ಲೆಂಡ್ ವಿರುದ್ಧ 277 ರನ್ ಬಾರಿಸುವುದರ ಮೂಲಕ ಹಿಂದಿಕ್ಕಿದರು. ಕರ್ಸ್ಟೈನ್ ಅವರು ಇಂದಿಗೂ ಸಹ ಒಂದು ದಿನದ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾದ ಪರವಾಗಿ ಅತ್ಯಧಿಕ ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ; ಇವರು 1996 ವಿಶ್ವ ಕಪ್ ಸಂದರ್ಭದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ಔಟಾಗದೇ 188 ರನ್ ಬಾರಿಸಿದರು ಮತ್ತು ಇದು ಒಂದು ದಿನದ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯದ ಇತಿಹಾಸದಲ್ಲಿ ನಾಲ್ಕನೇ ಅತ್ಯಧಿಕ ಮೊತ್ತವಾಗಿದೆ.