ಗೌಡ ನಗರ
ಭಾರತ ಮತ್ತು ಬಾಂಗ್ಲಾದೇಶದ ಪ್ರಾಚೀನ ನಗರ / From Wikipedia, the free encyclopedia
ಗೌಡ ನಗರಪಶ್ಚಿಮ ಬಂಗಾಲದ ಮಾಲ್ಡಾ ಜಿಲ್ಲೆಯಲ್ಲಿದ್ದ ಒಂದು ಪ್ರಾಚೀನ ನಗರ. ಇದನ್ನು ಲಕ್ಷ್ಮಣಾವತಿ, ಲಖ್ನೌತಿ, ನಿರ್ವಿತಿ, ವಿಜಯಪುರ, ಪುಂಡ್ರವರ್ಧನ, ಬರೇಂದ್ರ ಎಂದೂ ಕರೆಯುತ್ತಿದ್ದರು. ಮಾಲ್ದಾದಿಂದ 16 ಕಿಮೀ ದೂರದಲ್ಲಿದ್ದ ಈ ನಗರ ಗಂಗಾ ಮತ್ತು ಮಹಾನಂದಾ ನದಿಗಳ ಸಂಗಮ ಸ್ಥಾನದಲ್ಲಿತ್ತು.