![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/3/37/Gobindgarh_fort%252C_Amritsar%252C_Punjab%252C_India.jpg/640px-Gobindgarh_fort%252C_Amritsar%252C_Punjab%252C_India.jpg&w=640&q=50)
ಗೋಬಿಂದ್ಗಢ್ ಕೋಟೆ
From Wikipedia, the free encyclopedia
ಗೋಬಿಂದ್ಗಢ್ ಕೋಟೆಯು ಒಂದು ಐತಿಹಾಸಿಕ ಸೇನಾ ಕೋಟೆಯಾಗಿದ್ದು ಭಾರತದ ರಾಜ್ಯ ಪಂಜಾಬ್ನ ಅಮೃತಸರ ನಗರದ ಮಧ್ಯದಲ್ಲಿದೆ. ಈ ಕೋಟೆಯನ್ನು ಇತ್ತೀಚಿನವರೆಗೆ ಸೇನೆಯು ಆಕ್ರಮಿಸಿಕೊಂಡಿತ್ತು ಆದರೆ 10 ಫೆಬ್ರವರಿ 2017 ರಿಂದ ಸಾರ್ವಜನಿಕರಿಗೆ ತೆರೆಯಲಾಯಿತು. ಇಂದು ಕೋಟೆಯನ್ನು ಪಂಜಾಬ್ನ ಇತಿಹಾಸದ ಭಂಡಾರವಾಗಿ ವಸ್ತುಸಂಗ್ರಹಾಲಯ ಮತ್ತು ಥೀಮ್ ಪಾರ್ಕ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ.
![Thumb image](http://upload.wikimedia.org/wikipedia/commons/thumb/3/37/Gobindgarh_fort%2C_Amritsar%2C_Punjab%2C_India.jpg/640px-Gobindgarh_fort%2C_Amritsar%2C_Punjab%2C_India.jpg)
ಇದನ್ನು ಜನಪ್ರಿಯವಾಗಿ ಭಂಗಿಯನ್ ದಾ ಕಿಲ್ಲಾ (ಭಂಗಿಗಳ ಕೋಟೆ) ಎಂದು ಕರೆಯಲಾಗುತ್ತದೆ.
ಇದು ಒಂದು ಚೌಕಾಕಾರದ ಮಾದರಿಯಲ್ಲಿದ್ದು 1,000 ಮೀಟರ್ ಪರಿಧಿಯನ್ನು ಹೊಂದಿದೆ ಮತ್ತು ಸಂಪೂರ್ಣವಾಗಿ ಇಟ್ಟಿಗೆ ಹಾಗೂ ಸುಣ್ಣದಿಂದ ನಿರ್ಮಿಸಲ್ಪಟ್ಟಿದೆ. ಈ ಕೋಟೆಯಲ್ಲಿ 25 ಫಿರಂಗಿಗಳನ್ನು ಅದರ ಆಳುವೇರಿಗಳಲ್ಲಿ ಅಳವಡಿಸಲಾಗಿತ್ತು ಮತ್ತು ಇದು 1805 ರವರೆಗೆ ಭಂಗಿ ಆಡಳಿತಗಾರರ ಬಳಿ ಇತ್ತು. 19 ನೇ ಶತಮಾನದ ಮಧ್ಯಭಾಗದಿಂದ 1947 ರಲ್ಲಿ ಭಾರತೀಯ ಸ್ವಾತಂತ್ರ್ಯದವರೆಗೆ, ಇದನ್ನು ಬ್ರಿಟಿಷ್ ಸೈನ್ಯವು ಆಕ್ರಮಿಸಿಕೊಂಡಿತ್ತು. ಅವರು ಶಸ್ತ್ರಾಸ್ತ್ರಗಳಲ್ಲಿನ ತಾಂತ್ರಿಕ ಪ್ರಗತಿಯನ್ನು ಗಣನೆಗೆ ತೆಗೆದುಕೊಳ್ಳಲು ಕೋಟೆಗೆ ಹಲವಾರು ರಕ್ಷಣಾತ್ಮಕ ಸುಧಾರಣೆಗಳನ್ನು ಮಾಡಿದರು.