From Wikipedia, the free encyclopedia
ಗುಳ್ಳೆಮಂದಿರ ವಿದ್ಯುದಾವಿಷ್ಟ ಉಪ ಪರಮಾಣು ಕಣಗಳನ್ನು ಕಂಡು ಹಿಡಿಯಲು ಉಪಯೋಗಿಸುವ ಸಾಧನ ಅಥವಾ ಉಪಕರಣ (ಬಬಲ್ ಚೇಂಬರ್). 1952 ರಲ್ಲಿ ಡೊನಾಲ್ಡ್ ಎ. ಗ್ಲೇಸರ್ ಎಂಬ ಅಮೆರಿಕದ ವಿಜ್ಞಾನಿ ಮಿಷಿಗನ್ ವಿಶ್ವವಿದ್ಯಾಲಯದಲ್ಲಿ ಗುಳ್ಳೆಮಂದಿರವನ್ನು ನಿರ್ಮಿಸಿದ. ಈ ಉಪಕರಣವನ್ನು ಉಪಯೋಗಿಸಿ ವಿದ್ಯುದಾವಿಷ್ಟ ಕಣಗಳ ಪಥಗಳನ್ನು ಕಣ್ಣಿಗೆ ಕಾಣುವಂತೆ ಮಾಡಬಹುದು. ಪಥಗಳ ಛಾಯಾಚಿತ್ರವನ್ನು ತೆಗೆದುಕೊಂಡು ಪರೀಕ್ಷೆಮಾಡಿ ಕಣಗಳ ಗುಣಲಕ್ಷಣಗಳನ್ನು ಗೊತ್ತು ಮಾಡಿಕೊಳ್ಳಬಹುದು. ಕೆಲವು ವಿಧಗಳಲ್ಲಿ ಗುಳ್ಳೆ ಮಂದಿರ ಸಿ.ಟಿ. ಆರ್. ವಿಲ್ಸನ್ ರಚಿಸಿದ ಮೇಘಮಂದಿರವನ್ನು ಹೋಲುತ್ತದೆ ಈ ಮೇಘಮಂದಿರ.
ಶುಚಿಯಾದ ಮತ್ತು ನಯವಾದ ಮೈಉಳ್ಳ ಪಾತ್ರೆಗಳಲ್ಲಿ ದ್ರವಗಳನ್ನು ಸಾಮಾನ್ಯ ಕುದಿಯುವ ಬಿಂದುವಿಗಿಂತಲೂ ಹೆಚ್ಚು ಉಷ್ಣತೆಗೆ ಕಾಯಿಸಬಹುದು. ಈ ಸ್ಥಿತಿಯಲ್ಲಿರುವ ಒಂದು ದ್ರವಕ್ಕೆ ಅತಿತಪ್ತ (ಸೂಪರ್ ಹೀಟೆಡ್) ದ್ರವವೆಂದು ಹೆಸರು. ಅತಿತಪ್ತ ದ್ರವಗಳು ಅಸ್ಥಿರ. ಯಾವುದಾದರೂ ಒರಟಾದ ಪದಾರ್ಥಗಳನ್ನು ದ್ರವದೊಳಗೆ ಹಾಕಿದರಾಗಲೀ ಹೆಚ್ಚಿಗೆ ಉಷ್ಣವನ್ನು ಒದಗಿಸಿದರಾಗಲೀ ದ್ರವ ರಭಸದಿಂದ ಕುದಿಯಲು ಪ್ರಾರಂಭಿಸುತ್ತದೆ. ಅತಿತಪ್ತ ದ್ರವಗಳ ಮೂಲಕ ವಿದ್ಯುದಾವೇಶವಿರುವ ಮತ್ತು ವೇಗವಾಗಿ ಚಲಿಸುವ ಕಣಗಳು ಸಾಗಿದರೆ ಅವು ಹೋದ ಜಾಡಿ ನಲ್ಲಿ ಕಣಗಳು ದ್ರವದ ಪರಮಾಣುಗಳೊಡನೆ ಸಂಘಟಿಸಿ ಆಗುವ ಅಂತರ ಕ್ರಿಯೆಯಿಂದ ಶಕ್ತಿ ಉತ್ಪತ್ತಿಯಾಗಿ ಅಣುಗಳನ್ನು ಅಯಾನುಗಳನ್ನಾಗಿ ಪರಿವರ್ತಿಸುತ್ತವೆ ಕಿಡಿಮಂದಿರ. ಇಂಥ ಸ್ಥಳಗಳಲ್ಲಿ ದ್ರವ ಕುದಿಯಲು ಪ್ರಾರಂಭಿಸುತ್ತದೆ. ಇದೇ ಸಮಯದಲ್ಲಿ ಛಾಯಾಚಿತ್ರವನ್ನು ತೆಗೆದುಕೊಂಡರೆ ಕಣಗಳು ಹೋದ ಹಿಂಜಾಡಿನಲ್ಲೇ ಸಣ್ಣಪುಟ್ಟ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಹೀಗೆ ಕಣಗಳ ಪಥಗಳನ್ನು ಕಣ್ಣಿನಿಂದ ನೋಡಲು ಸಾಧ್ಯವಾಗುತ್ತದೆ.
ಗುಳ್ಳೆ ಮಂದಿರವನ್ನು ಗಾಜಿನ ಪಾತ್ರೆಯನ್ನು ಉಪಯೋಗಿಸಿ ನಿರ್ಮಾಣ ಮಾಡಬಹುದು. ಲೋಹದ ಪಾತ್ರೆಯನ್ನು ಉಪಯೋಗಿಸಿದರೆ ಗಾಜಿನ ಕಿಟಕಿಗಳನ್ನು ಲೋಹಕ್ಕೆ (ಗ್ಯಾಸ್ಕೆಟ್ಟುಗಳನ್ನು ಉಪಯೋಗಿಸಿಕೊಂಡು) ಬೆಸೆಯಬೇಕು. ಈಥರ್, ಪೆಂಟೀನ್, ಬ್ಯೂಟೀನ್ ಅಥವಾ ಪ್ರೊಪೇನ್ ಮುಂತಾದ ಹಲವಾರು ದ್ರವಗಳನ್ನು ಗುಳ್ಳೆಮಂದಿರದಲ್ಲಿ ಉಪಯೋಗಿಸಬಹುದು. ದ್ರವ ಹೀಲಿಯಮ್ ಅಥವಾ ದ್ರವ ಹೈಡ್ರೋಜನ್ಗಳನ್ನು ಉಪಯೋಗಿಸಿದರೆ ಗುಳ್ಳೆಮಂದಿರವನ್ನು ಅತಿ ಕಡಿಮೆ ಉಷ್ಣತೆಯಲ್ಲಿ ಇಡಬೇಕು. ಈ ದ್ರವಗಳನ್ನು ಅವುಗಳ ಕುದಿಯುವ ಬಿಂದು ವಿಗಿಂತಲೂ ಹೆಚ್ಚು ಉಷ್ಣತೆಯಲ್ಲಿ ಇಟ್ಟಿದ್ದು, ಹೆಚ್ಚು ಒತ್ತಡವನ್ನು ಏರ್ಪಡಿಸಿ ದ್ರವ ಕುದಿಯದಂತೆ ಮಾಡಬೇಕು. ದ್ರವ ಈಥರನ್ನು ಉಪಯೋಗಿಸಿದರೆ ದ್ರವವನ್ನು ಸುಮಾರು 20 ವಾಯು ಮಂಡಲಗಳಲ್ಲಿ ಮತ್ತು 135 ಸೆಂ. ಉಷ್ಣತೆಯಲ್ಲಿ ಇಡಬೇಕು. ಒತ್ತಡವನ್ನು ಬಿಡುಗಡೆ ಮಾಡಿದ ಹಲವಾರು ಮಿಲೆಸೆಕೆಂಡುಗಳಲ್ಲಿ ದ್ರವ ಅತಿತಪ್ತವಾಗಿ ಅಸ್ಥಿರಗೊಳ್ಳುತ್ತದೆ. ಇಂಥ ವೇಳೆಯಲ್ಲಿ ವಿದ್ಯುದಾವಿಷ್ಟ ಕಣಗಳ ಕಿರಣಾವಳಿಯೊಂದು ಮಂದಿರದ ಮೂಲಕ ಹಾದುಹೋದರೆ ಅದು ಹೋದ ಜಾಗದಲ್ಲಿ ದ್ರವ ಕುದಿಯಲು ಪ್ರಾರಂಭಿಸಿ, ಹೀಗೆ ಉಂಟಾದ ಗುಳ್ಳೆಗಳು ಸಾಕಷ್ಟು ಬೆಳೆದು ಛಾಯಾ ಚಿತ್ರದಲ್ಲಿ ಕಣಗಳ ಪಥಗಳು ಕಾಣಿಸಿಕೊಳ್ಳುತ್ತವೆ. ಮತ್ತೆ ಒತ್ತಡವನ್ನು ಉಪಯೋಗಿಸಿದರೆ ಗುಳ್ಳೆಗಳು ಥಟ್ಟನೆ ಅಳಿದುಹೋಗಿ ಮಂದಿರ ಎಂದಿನಂತೆ ಉಪಯೋಗಿಸಲು ಸಿದ್ಧವಾಗುತ್ತದೆ. ಹೀಗೆ ಒತ್ತಡವನ್ನು ಬಿಡುಗಡೆ ಮಾಡಿ ಮತ್ತೆ ಪ್ರಯೋಗಿಸುವ ಒಂದು ಚಕ್ರಕ್ಕೆ ಸುಮಾರು 1 ಅಥವಾ 2 ಸೆಕೆಂಡುಗಳು ಬೇಕಾಗುತ್ತವೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.