ಗಿರೀಶ್ ಕಾಸರವಳ್ಳಿ
ಭಾರತೀಯ ಚಿತ್ರ ನಿರ್ದೇಶಕ / From Wikipedia, the free encyclopedia
ಗಿರೀಶ್ ಕಾಸರವಳ್ಳಿ,ಭಾರತದ ಅತ್ಯಂತ ಪ್ರತಿಭಾನ್ವಿತ ಚಲನಚಿತ್ರ ನಿರ್ದೇಶಕರಲ್ಲೊಬ್ಬರು.ಮಲೆನಾಡಿನ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿ ತಾಲೂಕಿನ ಕೆಸಲೂರಿನಲ್ಲಿ ೧೯೫೦ರಲ್ಲಿ ಜನಿಸಿದ ಇವರು ಮಣಿಪಾಲದಲ್ಲಿ ಬಿ,ಫಾರ್ಮ್ ಪದವಿ ಮುಗಿಸಿ ಪುಣೆಯ ರಾಷ್ಟ್ರೀಯ ಚಲನಚಿತ್ರ ತರಬೇತಿ ಸಂಸ್ಥೆ ಯಲ್ಲಿ ನಿರ್ದೇಶನ ವಿಭಾಗದಲ್ಲಿ ಡಿಪ್ಲೊಮಾ ಪದವಿ ಗಳಿಸಿದರು. ಗಿರೀಶ್ ಕಾಸರವಳ್ಳಿಯವರು ತಮ್ಮ ೨೭ ವರ್ಷಗಳ ವೃತ್ತಿ ಜೀವನದಲ್ಲಿ ಕೇವಲ ೧೪ ಕನ್ನಡ ಚಿತ್ರಗಳನ್ನು ಮಾತ್ರ ನಿರ್ದೇಶಿಸಿದರೂ, ಹಲವಾರು ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಚಿತ್ರಗಳು ಅನೇಕ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿಯೂ ಸಹ ಪ್ರದರ್ಶಿತವಾಗಿದೆ. ಸಮಾನಾಂತರ ಚಿತ್ರ ಆಂದೋಲನದ ಬಾವುಟವನ್ನು ಹಾರಿಸುತ್ತ ಶ್ರೀಯುತರು ಜನಪ್ರಿಯ ಅಥವಾ ವಾಣಿಜ್ಯಮಯ ಚಿತ್ರಗಳಿಂದ ಮೊದಲಿನಿಂದಲು ದೂರ ಇದ್ದಾರೆ.
Quick Facts ಗಿರೀಶ್ ಕಾಸರವಳ್ಳಿ, ಜನನ ...
ಗಿರೀಶ್ ಕಾಸರವಳ್ಳಿ | |
---|---|
ಜನನ | ಡಿಸೆಂಬರ್ ೩, ೧೯೫೦ ಕೆಸಲೂರು, ತೀರ್ಥಹಳ್ಳಿ, ಶಿವಮೊಗ್ಗ |
ವೃತ್ತಿ(ಗಳು) | ಸಿನಿಮಾ ನಿರ್ದೇಶಕ, ನಿರ್ಮಾಪಕ, ಸಂಭಾಷಣೆಕಾರ |
ಸಂಗಾತಿ | ವೈಶಾಲಿ ಕಾಸರವಳ್ಳಿ |
Awards | Multiple ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳು[1] |
Close