ಗಾರ್ಕಿ
From Wikipedia, the free encyclopedia
From Wikipedia, the free encyclopedia
ರಷ್ಯನ್ ಸೋವಿಯೆತ್ ಸಂಯುಕ್ತ ಸಮಾಜವಾದೀ ಗಣರಾಜ್ಯದ ಒಂದು ಆಡಳಿತವಿಭಾಗ (ಆಬ್ಲಾಸ್ಟ); ಅದರ ಆಡಳಿತಕೇಂದ್ರ. ಇದು ಮಾಸ್ಕೋ ನಗರದ ಪುರ್ವಕ್ಕೆ 416 ಕಿಮೀ ದೂರದಲ್ಲಿ ವೋಲ್ಗ ಮತ್ತು ಮೋಕ ನದಿಗಳ ಸಂಗಮ ಸ್ಥಳದಲ್ಲಿದೆ.
Nizhny Novgorod (English) Нижний Новгород (Russian) | |
---|---|
- City[1] - | |
Location of Nizhny Novgorod Oblast in Russia | |
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/Russia Nizhny Novgorod Oblast" does not exist. | |
Coordinates: 56°19′37″N 44°00′27″E | |
Coat of arms | Flag |
City Day | June 2012[2] |
Administrative status (as of November 2011) | |
Country | Russia |
Federal subject | Nizhny Novgorod Oblast[1] |
Administratively subordinated to | city of oblast significance of Nizhny Novgorod[1] |
Administrative center of | Nizhny Novgorod Oblast,[1] city of oblast significance of Nizhny Novgorod[1] |
Municipal status (as of February 2011) | |
Urban okrug | Nizhny Novgorod Urban Okrug[3] |
Administrative center of | Nizhny Novgorod Urban Okrug[3] |
Head[4] | Oleg Sorokin[5] |
Representative body | City Duma[6] |
Statistics | |
Area | 410.68 km2 (158.56 sq mi)[7] |
Population (2010 Census) | ೧೨,೫೦,೬೧೯ inhabitants[8] |
- Rank in 2010 | 5th |
Density | 3,045/km2 (7,890/sq mi)*[9] |
Time zone | MSK (UTC+03:00)[10] |
Founded | 1221[11] |
City status since | 1221[7] |
Previous names | Nizhny Novgorod (until September 1932),[11] Gorky (until October 22, 1990)[12] |
Postal code(s)[13] | in the 603000–603998 range |
Dialing code(s) | +7 831[7] |
Nizhny Novgorod on WikiCommons |
ಹಿಂದೆ ಇದಕ್ಕೆ ಇದ್ದ ಹೆಸರು ನಿಷ್ನಿನೊವ್ಗೊರಾಡ್. ಈ ನಗರದಲ್ಲಿ ಮ್ಯಾಕ್ಸಿಂ ಗಾರ್ಕಿ 1868ರಲ್ಲಿ ಜನಿಸಿದ ಕಾರಣ ಅವನ ಗೌರವಾರ್ಥಕವಾಗಿ 1932ರಲ್ಲಿ ಇದಕ್ಕೆ ಅವನ ಹೆಸರಿಟ್ಟರು.
ವೋಲ್ಗ ಬಯಲಲ್ಲಿ ರಷ್ಯನರ ವಸಾಹತುಗಳು ಸ್ಥಾಪಿತವಾದ ಕಾಲದಲ್ಲಿ 1221ರಲ್ಲಿ ಈ ನಗರವನ್ನು ವ್ಲಾಡಿಮೀರ್ ದೊರೆ ಯೂರಿ ಸೆವೊಲೊಡೋವಿಚ್ ಸ್ಥಾಪಿಸಿದ. ಈ ನಗರ ಬಾಲ್ಟಿಕ್ ಪ್ರದೇಶದಿಂದ ಮಧ್ಯ ಏಷ್ಯಕ್ಕೆ ಹೋಗುವ ಹೆದ್ದಾರಿಯ ಪ್ರಮುಖ ಸ್ಥಳದಲ್ಲಿದೆ. ವೋಲ್ಗಾ ನದಿಯ ಮೂಲಕ ಮಾಸ್ಕೋ ಪ್ರದೇಶಕ್ಕೂ ಕಾಮಾ ನದಿಯ ಮೂಲಕ ಯೂರಲ್ ಸೈಬೀರಿಯ ಪ್ರಾಂತ್ಯಗಳಿಗೂ ಸಂಪರ್ಕವಿದೆ. 1392ರಲ್ಲಿ ಇದನ್ನು ಮಾಸ್ಕೋ ನಗರಪಾಲಿಕೆಯೊಡನೆ ಸಂಘಟಿಸಲಾಯಿತು.
ಈ ನಗರವನ್ನು ಕೇಂದ್ರವನ್ನಾಗಿ ಮಾಡಿಕೊಂಡು 1469ರಲ್ಲಿ 3ನೆಯ ಇವಾನನೂ 1552ರಲ್ಲಿ 4ನೆಯ ಇವಾನನೂ ಟಾರ್ಟರರ ಮೇಲೆ ದಾಳಿ ನಡೆಸಿದರು. 16ನೆಯ ಶತಮಾನದಲ್ಲಿ ರಷ್ಯನರು ವೋಲ್ಗ ಬಯಲನ್ನು ವಶಮಾಡಿಕೊಂಡ ಮೇಲೆ ನಗರದ ವಾಣಿಜ್ಯ ಅಭಿವೃದ್ಧಿ ಹೊಂದಿತು. 1817ರಲ್ಲಿ ಇಲ್ಲಿ ಪ್ರಾರಂಭವಾದ ವಾರ್ಷಿಕ ಜಾತ್ರೆ ರಷ್ಯದ ಅತ್ಯಂತ ದೊಡ್ಡ ಜಾತ್ರೆಯಾಗಿ ರಷ್ಯನ್ ಕ್ರಾಂತಿಯವರೆಗೆ ಮುಂದುವರಿಯಿತು. ಇಲ್ಲಿಗೆ ಯುರೋಪ್ ಮತ್ತು ಏಷ್ಯ ಖಂಡಗಳಿಂದ ವ್ಯಾಪಾರಿಗಳು ಬರುತ್ತಿದ್ದರು.
ಗಾರ್ಕಿ ಆಬ್ಲಾಸ್ಟಿನ ವಿಸ್ತಿರ್ಣ 72200 ಚ.ಕಿಮೀ ವೋಲ್ಗ ನದಿ ಇದರ ನಡುವೆ ಹರಿಯುತ್ತದೆ. ಉತ್ತರಾರ್ಧ ಮೈದಾನ. ಇಲ್ಲಿ ವೆಟ್ಲುಗ, ಕರ್ಜೆನೆಟ್ಸ ಪ್ರವಹಿಸುತ್ತವೆ. ದಕ್ಷಿಣಾರ್ಧ ಹೆಚ್ಚು ಎತ್ತರ.
ಇಲ್ಲಿ ವಾಯುಗುಣ ಖಂಡಾಂತರ ಮಾದರಿಯದು.
ರೈ, ಓಟ್ಸ, ವಸಂತಗೋದಿ, ಬಕ್ವ್ಹೀಟ್, ಆಲೂಗಡ್ಡೆ, ಫ್ಲಾಕ್ಸ, ಮೆಕ್ಕೆಜೋಳ ಮುಖ್ಯ ಧಾನ್ಯಗಳು.
20ನೆಯ ಶತಮಾನದ ಎರಡು ಮಹಾಯುದ್ಧಗಳಿಂದ ಈ ನಗರಕ್ಕೆ ಕೈಗಾರಿಕಾ ಪ್ರಾಮುಖ್ಯ ಪ್ರಾಪ್ತವಾಗಿ ಅನೇಕ ದೊಡ್ಡ ಕಾರ್ಖಾನೆಗಳು ಇಲ್ಲಿ ಸ್ಥಾಪನೆಯಾದವು. ಗಾರ್ಕಿ ಮೋಟಾರುವಾಹನಗಳ ಕಾರ್ಖಾನೆಯಲ್ಲಿ ವೋಲ್ಗ ಮೋಟಾರುಗಳು ತಯಾರಾಗುತ್ತವೆ. 1849ರಲ್ಲಿ ಸ್ಥಾಪಿತವಾದ ಹಡಗುಕಟ್ಟೆಯಲ್ಲಿ ಆವಿ ಮತ್ತು ಡೀಸೆಲ್ ಎಂಜಿನ್ನುಗಳನ್ನು ಜೋಡಿಸಿದ ನೌಕೆಗಳು ನಿರ್ಮಾಣವಾಗುತ್ತವೆ. ಭಾರವಾದ ಸರಕುಗಳನ್ನು ಎತ್ತುವ ಯಂತ್ರ, ಮಂಜುಗಡ್ಡೆ ಒಡೆಯುವ ಯಂತ್ರ, ಚೌಬೀನೆ ಕತ್ತರಿಸುವ ಮತ್ತು ಕಾಗದ ತಯಾರಿಕೆಯ ಯಂತ್ರ ಮೊದಲಾದವು ಈ ನಗರದಲ್ಲಿ ತಯಾರಾಗುತ್ತವೆ. ಬಟ್ಟೆ, ಪಾದರಕ್ಷೆ, ಪ್ಲಾಸ್ಟಿಕ್ ಸಾಮಾನು, ಪೀಠೋಪಕರಣ, ಮೋಟಾರು ವಾಹನಗಳಿಗೆ ಉಪಯೋಗಿಸುವ ಗಾಜು ಇವು ಇಲ್ಲಿಯ ಇತರ ಉತ್ಪನ್ನಗಳು.
ನಗರದಲ್ಲಿ ಎರಡು ಉಷ್ಣ ವಿದ್ಯುತ್ ಉತ್ಪಾದನ ಕೇಂದ್ರಗಳುಂಟು.
ನಗರಕ್ಕೆ ರೈಲು, ನದಿ, ರಸ್ತೆ ಮತ್ತು ವಿಮಾನಗಳ ಮೂಲಕ ಪ್ರಯಾಣಸೌಲಭ್ಯವಿದೆ. ಪ್ರವ್ಡಿನ್ಸ್ಕಿ, ಪವ್ಲೋವೊ ಮತ್ತು ಬೋರ್ ಉಪನಗರಗಳಿಗೆ ರೈಲುಮಾರ್ಗಗಳಿವೆ.
ಗಾರ್ಕಿ ನಗರದಲ್ಲಿ 1918ರಲ್ಲಿ ಲೋಬಚೆಫ್ಸ ಕಿ ರಾಜ್ಯ ವಿಶ್ವವಿದ್ಯಾಲಯ ಸ್ಥಾಪಿತವಾಯಿತು. ಕೃಷಿ, ವೈದ್ಯ ಹಾಗೂ ಎಂಜಿನಿಯರಿಂಗ್ ಉಚ್ಚ ಶಿಕ್ಷಣ ಸಂಸ್ಥೆಗಳೂ ರಾಜ್ಯದ ಕಲಾ ವಸ್ತುಸಂಗ್ರಹಾಲಯವೂ ಇಲ್ಲಿವೆ. ಇಲ್ಲಿಯ ನಾಟಕಶಾಲೆ 1798ರಲ್ಲಿ ಸ್ಥಾಪಿತವಾಯಿತು. 14ನೆಯ ಶತಮಾನದ ಕೋಟೆ (ಕ್ರೆಮ್ಲಿನ್) ಈ ನಗರದ ಇತಿಹಾಸ ಪ್ರಸಿದ್ಧ ಕಟ್ಟಡಗಳಲ್ಲಿ ಒಂದು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.