ಖಿನ್ನತೆ-ಶಮನಕಾರಿ(ಆಂಟಿ-ಡಿಪ್ರೆಸೆಂಟ್)
From Wikipedia, the free encyclopedia
ಖಿನ್ನತೆ-ಶಮನಕಾರಿಯು ತೀವ್ರ ಖಿನ್ನತೆ ಮತ್ತು ಡಿಸ್ತಿಮಿಯಾದಂತಹ ಮಾನಸಿಕ ಕಾಯಿಲೆಗಳು ಹಾಗೂ ಸಾಮಾಜಿಕ ಕಳವಳ ಕಾಯಿಲೆಯಂತಹ ಆತಂಕ ಕಾಯಿಲೆಗಳನ್ನು ಉಪಶಮನ ಮಾಡಲು ಬಳಸುವ ಮನೋವೈದ್ಯಕೀಯ ಔಷಧಿಯಾಗಿದೆ. ಇದಕ್ಕೆ ಸಂಬಂಧಿಸಿದ ಹೆಚ್ಚು ಸಾಮಾನ್ಯ ಔಷಧಗಳೆಂದರೆ - ಮೋನೊಅಮೈನ್ ಆಕ್ಸಿಡೇಸ್ ಇನ್ಹಿಬಿಟರ್ (MAOI), ಟೆಟ್ರಾಸೈಕ್ಲಿಕ್ ಆಂಟಿಡಿಪ್ರೆಸೆಂಟ್ (TCA), ಟೆಟ್ರಾಸೈಕ್ಲಿಕ್ ಆಂಟಿಡಿಪ್ರೆಸೆಂಟ್ (TeCA), ಸೆಲೆಕ್ಟಿವ್ ಸಿರೊಟೋನಿನ್ ರಿಅಪ್ಟೇಕ್ ಇನ್ಹಿಬಿಟರ್ (SSRI) ಮತ್ತು ಸಿರೊಟೋನಿನ್-ನಾರ್ಎಪಿನೆಫ್ರೈನ್ ರಿಅಪ್ಟೇಕ್ ಇನ್ಹಿಬಿಟರ್ (SNRI). ಈ ಔಷಧಿಗಳನ್ನು ಹೆಚ್ಚು ಸಾಮಾನ್ಯವಾಗಿ ಮನೋವೈದ್ಯರು ಮತ್ತು ಇತರ ವೈದ್ಯರು ಸೂಚಿಸುತ್ತಾರೆ. ಅವುಗಳ ಪರಿಣಾಮಕಾರಿತ್ವ ಮತ್ತು ಪ್ರತಿಕೂಲ ಪರಿಣಾಮಗಳು ಹೆಚ್ಚಿನ ಅಧ್ಯಯನಗಳ ಮತ್ತು ಪೈಪೋಟಿ ಮಾಡುತ್ತಿರುವ ವಾದಗಳ ವಿಷಯವಾಗಿವೆ. ಹೆಚ್ಚಿನ ಔಷಧಿಗಳು ಖಿನ್ನತೆ-ಶಮನಕಾರಿ ಪರಿಣಾಮವನ್ನು ಉಂಟುಮಾಡುತ್ತವೆ, ಆದರೆ ಅವುಗಳ ಬಳಕೆಯಲ್ಲಿನ ನಿಷೇಧಗಳು ವಿವಾದಕ್ಕೆ ಕಾರಣವಾಗಿವೆ. ಈ ವಾದಗಳು ಹೆಚ್ಚು ಪರಿಣಾಮಕಾರಿಯಾಗಿದ್ದರೂ ಲೇಬಲ್-ಇಲ್ಲದ ಔಷಧಿಗಳು ಅಪಾಯಕಾರಿಗಳಾಗಿವೆ.
ಎರಡು ಕೊಕ್ರೇನ್ ಸಹಯೋಗದೊಂದಿ ಪುನರ್ವಿಮರ್ಶೆಯ ಪ್ರಕಾರ, ಆಧುನಿಕ ಥೈಮೊಲೆಪ್ಟಿಕ್ ಖಿನ್ನತೆ-ಶಮನಕಾರಿಗಳ ಪರಿಣಾಮಕಾರಿತ್ವವು ಸಕ್ರಿಯ ಪ್ಲಸೀಬೊದ ಪರಿಣಾಮಕ್ಕಿಂತ ಹೆಚ್ಚಾಗಿರುತ್ತದೆಂದು ನಿರ್ಣಾಯಕವಾಗಿ ಪ್ರಮಾಣೀಕರಿಸಿಲ್ಲ.[1][2] FDAಗೆ ಒಪ್ಪಿಸಲಾದ ಪ್ರಕಟಿತ ಮತ್ತು ಅಪ್ರಕಟಿತ ಖಿನ್ನತೆ-ಶಮನಕಾರಿಗಳ ಎಲ್ಲಾ ಅಧ್ಯಯನಗಳ ಪುನಃಪರಿಶೀಲನೆಯನ್ನು ೨೦೦೪ರಲ್ಲಿ FDAಗೆ ಸಲ್ಲಿಸಲಾಯಿತು. ಪ್ರಕಟಿತ ಕೃತಿಗಳಲ್ಲಿ, ಖಿನ್ನತೆ-ಶಮನಕಾರಿಯು ಖಿನ್ನತೆಯನ್ನು ಉಪಶಮನ ಮಾಡುವಲ್ಲಿ ೯೪%ನಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ.[1][2] ಅಪ್ರಕಟಿತ ಕೃತಿಗಳಲ್ಲಿ, ಅದು ೫೦%ಗಿಂತ ಕಡಿಮೆ ಪರಿಣಾಮವನ್ನು ಹೊಂದಿದೆ.[1] ಒಟ್ಟಿಗೆ ಎಲ್ಲಾ ಅಧ್ಯಯನಗಳು ೫೧% ಪರಿಣಾಮಕಾರಿತ್ವವನ್ನು ತೋರಿಸಿವೆ[1] - ಪ್ಲಸೀಬೊದ ಪರಿಣಾಮದಿಂದ ಕೇವಲ ಎರಡು ಪಾಯಿಂಟುಗಳು ಹೆಚ್ಚಾಗಿವೆ. ಇದು ಪ್ಲಸೀಬೊಗೆ ಹೋಲಿಸಿದರೆ ವಿವಿಧ ಖಿನ್ನತೆ-ಶಮನಕಾರಿಗಳ ತೋರಿಕೆಯ ಪರಿಣಾಮಕಾರಿತ್ವವನ್ನು ೧೧%ನಿಂದ ೬೯%ಗೆ ಏರಿಸಿದೆ.[1] ಇದಕ್ಕೆ ಹೊರತಾದುವೆಂದರೆ ಮಿರ್ಟಾಜೆಪೈನ್ - ಒಂದು ನಾರ್ಎಪಿನೆಫ್ರಿನ್ ಮತ್ತು ಸಿರೊಟೋನಿನ್ ವಿರೋಧಕ, ಇದು SSRI ಮತ್ತು SNRIS ನ ಪರಿಣಾಮಗಳಿಗೆ ವಿರುದ್ಧವಾದ ಪರಿಣಾಮವನ್ನು ಹೊಂದಿದೆ - ಹಾಗೂ ವೆನ್ಲಫಾಕ್ಸೈನ್ - ರಾಸಾಯನಿಕ ರಚನೆಯಲ್ಲಿ ಒಪಿಯಾಡ್ನಿಂದ ಪಡೆದ ಟ್ರೆಮಡಾಲ್ಗೆ ಗಮನಾರ್ಹವಾಗಿ ಹೋಲುವ ಒಂದು SNRI.
ಒಪಿಯಾಡ್ಗಳನ್ನು ೧೯೫೦ರ ಉತ್ತರಾರ್ಧದವರೆಗೆ ತೀವ್ರ ಖಿನ್ನತೆಯನ್ನು ಉಪಶಮನ ಮಾಡಲು ಬಳಸಲಾಗುತ್ತಿತ್ತು. ಆಂಫೆಟಮೈನ್ಗಳನ್ನು ಮಧ್ಯ-೧೯೬೦ರವರೆಗೆ ಉಪಯೋಗಿಸಲಾಗುತ್ತಿತ್ತು. ಖಿನ್ನತೆಗೆ ಒಪಿಯಾಡ್ ಅಥವಾ ಆಂಫೆಟಮೈನ್ಗಳನ್ನು ಸೂಚಿಸುವುದು ಕಾನೂನಿನ ಸಂದಿಗ್ಧ ಕ್ಷೇತ್ರಕ್ಕೆ ಕೊಂಡೊಯ್ಯುತ್ತದೆ. ಕಳೆದ ಅರವತ್ತು ವರ್ಷಗಳಲ್ಲಿ ಖಿನ್ನತೆಗೆ ಒಪಿಯಾಡ್ನಿಂದ ಪಡೆದವುಗಳ ಔಷಧೀಯ ಪ್ರಬಲತೆಯ ಬಗ್ಗೆ ಕೇವಲ ಕೆಲವು ಸಂಶೋಧನೆಗಳನ್ನು ಮಾತ್ರ ಮಾಡಲಾಗಿದೆ. ಅದೇ ಆಂಫೆಟಮೈನ್ಗಳು ಎಚ್ಚರಿಕೆ-ಕೊರತೆ ಕಾಯಿಲೆ, ನಾರ್ಕೊಲೆಪ್ಸಿ(ವಿಚ್ಛಿದ್ರ ನಿದ್ರೆ) ಮತ್ತು ಸ್ಥೂಲಕಾಯತೆ ಮೊದಲಾದವುಗಳ ಉಪಶಮನಕ್ಕಾಗಿ ಹೆಚ್ಚಿನ ಮಾರುಕಟ್ಟೆಯನ್ನು ಪಡೆದಿವೆ ಹಾಗೂ ಇದರ ಅಸಂಖ್ಯಾತ ಅನ್ವಯಗಳಿಗಾಗಿ ಅಧ್ಯಯನವು ಮುಂದುವರಿದಿದೆ. ಒಪಿಯಾಡ್ಗಳು ಮತ್ತು ಆಂಫೆಟಮೈನ್ಗಳೆರಡೂ ಚಿಕಿತ್ಸಕ ಪ್ರತಿಕ್ರಿಯೆಯನ್ನು ಅತಿ ಶೀಘ್ರದಲ್ಲಿ ಉಂಟುಮಾಡುತ್ತವೆ, ಇಪ್ಪತ್ತನಾಲ್ಕರಿಂದ ನಲವತ್ತೆಂಟು ಗಂಟೆಗಳೊಳಗಾಗಿ ಪರಿಣಾಮವನ್ನು ತೋರಿಸುತ್ತವೆ; ಒಪಿಯಾಡ್ಗಳು ಮತ್ತು ಆಂಫೆಟಮೈನ್ಗಳೆರಡರ ಚಿಕಿತ್ಸಕ ದರವೂ ಟ್ರೈಸೈಕ್ಲಿಕ್ ಖಿನ್ನತೆ-ಶಮನಕಾರಿಗಿಂತ ಹೆಚ್ಚಾಗಿದೆ. ಈ ಕೆಲವು ಸಣ್ಣ, ಭಾರೀ ಪರಿಮಿತಿಯ ಸಂಶೋಧನೆಯಲ್ಲಿ, ಒಪಿಯಾಡ್ ಬುಪ್ರೆನೊನಾರ್ಫಿನ್ ತೀವ್ರ, ಚಿಕಿತ್ಸೆ-ಪ್ರತಿರೋಧಕ ಖಿನ್ನತೆಯನ್ನು ಉಪಶಮನ ಮಾಡುವಲ್ಲಿ ಹೆಚ್ಚಿನ ಪರಿಣಾಮವನ್ನು ತೋರಿಸಿದೆ, ಇದು ಯಾವುದೇ ತಿಳಿದ ಔಷಧಿಗಳಿಗೆ ಉಪಶಮನವಾಗುವ ಬಗ್ಗೆ ೧೯೯೫ರಲ್ಲಿ ಪ್ರಕಟವಾದ ಮತ್ತು ಸಾಮಾನ್ಯವಾಗಿ ಅಂಗೀಕೃತವಾದ ಸಣ್ಣ ಅಧ್ಯಯನವೊಂದರಲ್ಲಿ ತೋರಿಸಲಾಯಿತು. ಆದರೆ ಒಪಿಯಾಡ್ಗಳಿಗೆ ಸಂಬಂಧಿಸಿದ ಮತ್ತು ಅಮೆರಿಕಾದಲ್ಲಿ ಮಾನಸಿಕ ಅನಾರೋಗ್ಯಕ್ಕೆ ಸಂಬಂಧಿಸಿದ ಸಾಮಾಜಿಕ ಅಪವಾದದಿಂದಾಗಿ ಇದರ ಬಳಕೆಯು ಮುಂದುವರಿಯಲಿಲ್ಲ.[3]
ಹೆಚ್ಚಿನ ಖಿನ್ನತೆ-ಶಮನಕಾರಿಗಳು ನಿಧಾನವಾದ ಪರಿಣಾಮವನ್ನು (೨-೬ ವಾರಗಳು) ಹೊಂದಿರುತ್ತವೆ ಹಾಗೂ ಸಾಮಾನ್ಯವಾಗಿ ಅವನ್ನು ತಿಂಗಳುಗಳಿಂದ ವರ್ಷಗಳವರೆಗೆ ಕೊಡಲಾಗುತ್ತದೆ. ಹೆಸರಿನ ಹೊರತಾಗಿ, ಖಿನ್ನತೆ-ಶಮನಕಾರಿಗಳನ್ನು ಹೆಚ್ಚಾಗಿ ವಿವಾದಾತ್ಮಕವಾಗಿ ಬಳಸಲಾಗುತ್ತದೆ ಹಾಗೂ ಅವುಗಳ ಸೂಚನೆಯನ್ನು ಬೆಂಬಲಿಸುವ ಪ್ರಾಯೋಗಿಕ ಸಾಕ್ಷ್ಯಧಾರದ ಕೊರತೆಯಿಂದಾಗಿ ಇತರ ಕಾಯಿಲೆಗಳನ್ನು ಗುಣಪಡಿಸಲು ಅವು ಲೇಬಲ್-ಇಲ್ಲದವಾಗಿವೆ, ಉದಾ. ಆತಂಕ ಕಾಯಿಲೆ, ಗೀಳಿನಂಥ ಅಂತರ್ನಿಬಂಧದ ಕಾಯಿಲೆ, ತಿನ್ನುವ ಕಾಯಿಲೆ, ತೀವ್ರ ನೋವು ಹಾಗೂ ಡಿಸ್ಮೆನೊರಿಯಾದಂತಹ ಕೆಲವು ಹಾರ್ಮೋನು-ಮಧ್ಯವರ್ತಿಯ ಕಾಯಿಲೆಗಳು. ಒಂದನ್ನೇ ಅಥವಾ ಸೆಳವು-ನಿರೋಧಕಗಳೊಂದಿಗೆ (ಉದಾ. ಟೆಗ್ರೆಟಾಲ್ ಅಥವಾ ಡೆಪಕೋಟ್) ಈ ಔಷಧಿಗಳನ್ನು ಅಟೆನ್ಶನ್-ಡಿಫಿಸಿಟ್ ಹೈಪರ್ಆಕ್ಟಿವಿಟಿ ಡಿಸಾರ್ಡರ್ (ADHD) ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುವ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಅಲ್ಲದೆ, ಖಿನ್ನತೆ-ಶಮನಕಾರಿಗಳನ್ನು ಕೆಲವೊಮ್ಮೆ ಗೊರಕೆ ಹೊಡೆಯುವುದು ಮತ್ತು ಮೈಗ್ರೇನ್ಅನ್ನು ಉಪಶಮನ ಮಾಡಲೂ ಉಪಯೋಗಿಸಲಾಗುತ್ತದೆ.
ಕಡಿಮೆ ಪ್ರಮಾಣದ ಆಂಟಿ-ಸೈಕಾಟಿಕ್(ಬುದ್ಧಿವಿಕಲ್ಪ-ನಿರೋಧಕ)[4] ಮತ್ತು ಬೆಂಜೋಡಿಯಜೆಪೈನ್[5] ಅನ್ನೂ ಒಳಗೊಂಡಂತೆ ಸಾಮಾನ್ಯವಾಗಿ ಖಿನ್ನತೆ-ಶಮನಕಾರಿಗಳೆಂದು ಕರೆಯದ ಇತರ ಔಷಧಿಗಳನ್ನು ಖಿನ್ನತೆಯನ್ನು ಕಡಿಮೆ ಮಾಡಲು ಬಳಸಬಹುದು. ಆದರೂ ಬೆಂಜೋಡಿಯಜೆಪೈನ್ಗಳು -"ಖಿನ್ನತೆ-ಶಮನಕಾರಿ"ಗಳೆಂದು ಕರೆಯುವ ಎಲ್ಲಾ ಔಷಧಿಗಳೊಂದಿಗೆ - ದೈಹಿಕ-ಅವಲಂಬನೆಯನ್ನು(ಫಿಸಿಕಲ್-ಡಿಪೆಂಡೆನ್ಸ್) ಉಂಟುಮಾಡುತ್ತದೆ. ಬೆಂಜೋಡಿಯಜೆಪೈನ್ (ಅಥವಾ SSRI) ಚಿಕಿತ್ಸೆಯನ್ನು ಹಠತ್ತಾಗಿ ನಿಲ್ಲಿಸುವುದರಿಂದ ಅಹಿತಕರ ನಿವರ್ತನ-ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ಮೂಲಿಕೆ ಔಷಧಿ ಸೇಂಟ್ ಜಾನ್ಸ್ ವೋರ್ಟ್ನ ಸತ್ವವನ್ನು ಸಾಮಾನ್ಯವಾಗಿ ಖಿನ್ನತೆ-ಶಮನಕಾರಿಯಾಗಿ ಬಳಸಲಾಗುತ್ತದೆ, ಆದರೂ ಇದನ್ನು ಕೆಲವು ರಾಷ್ಟ್ರಗಳಲ್ಲಿ ಆಹಾರ ಪದಾರ್ಥವೆಂದು ಸೂಚಿಲಾಗುತ್ತದೆ. ಖಿನ್ನತೆ-ಶಮನಕಾರಿ ಪದವನ್ನು ಕೆಲವೊಮ್ಮೆ ಭಾವರಹಿತವಾಗಿ ಖಿನ್ನತೆಗೊಳಗಾದ ಚಿತ್ತಸ್ಥಿತಿಯನ್ನು ಸುಧಾರಿಸಬಹುದಾದ ಯಾವುದೇ ಚಿಕಿತ್ಸೆ (ಉದಾ. ಮನಶ್ಚಿಕಿತ್ಸೆ, ಎಲೆಕ್ಟ್ರೊ-ಸೆಳವಿನ ಚಿಕಿತ್ಸೆ, ಸೂಜಿ-ಚಿಕಿತ್ಸೆ) ಅಥವಾ ಪ್ರಕ್ರಿಯೆಗೆ (ಉದಾ. ನಿದ್ರಾ-ಭಂಗ, ಹೆಚ್ಚಿನ ಎತ್ತರ, ನಿಯತ ವ್ಯಾಯಾಮ) ಬಳಸಲಾಗುತ್ತದೆ.
ಜಡ ಪ್ಲಸೀಬೊಗಳು ಗಮನಾರ್ಹ ಪ್ರಮಾಣದಲ್ಲಿ ಖಿನ್ನತೆ-ಶಮನಕಾರಿ ಪರಿಣಾಮಗಳನ್ನು ಹೊಂದಿರುತ್ತವೆ. ಆದ್ದರಿಂದ ಪ್ರಾಯೋಗಿಕ ಪರೀಕ್ಷೆಯಲ್ಲಿ ಒಂದು ಔಷಧಿಯನ್ನು "ಖಿನ್ನತೆ-ಶಮನಕಾರಿ" ಎಂದು ದೃಢಪಡಿಸಲು ಅದು ಪ್ಲಸೀಬೊಗಿಂತ ಉತ್ತಮ ಪರಿಣಾಮಕಾರಿತ್ವವನ್ನು ಹೊಂದಿದೆಯೆಂಬುದನ್ನು ತೋರಿಸಬೇಕಾಗುತ್ತದೆ.[6]