ಖಜುರಾಹೊ
From Wikipedia, the free encyclopedia
ಖಜುರಾಹೊ ಭಾರತದ ಮಧ್ಯ ಪ್ರದೇಶದಲ್ಲಿರುವ ಒಂದು ನಗರ, ದೆಹಲಿಯಿಂದ ೬೨೦ ಕಿಮೀ ದಕ್ಷಿಣದಲ್ಲಿದೆ. ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಖಜುರಾಹೊ, ಮಧ್ಯಕಾಲೀನ ಹಿಂದೂ ದೇವಾಲಯಗಳ ಅತಿ ದೊಡ್ಡ ಗುಂಪು. ಇದು ಇಲ್ಲಿನ ಶೃಂಗಾರಮಯ ಶಿಲ್ಪಕಲೆಗಳಿಗೆ ಹೆಸರಾಗಿದೆ.
ಖಜುರಾಹೋ ಸ್ಮಾರಕ ಸಮೂಹ* | |
---|---|
UNESCO ವಿಶ್ವ ಪರಂಪರೆಯ ತಾಣ | |
ರಾಷ್ಟ್ರ | ಭಾರತ |
ತಾಣದ ವರ್ಗ | ಸಾಂಸ್ಕೃತಿಕ |
ಆಯ್ಕೆಯ ಮಾನದಂಡಗಳು | i, iii |
ಆಕರ | 240 |
ವಲಯ** | Asia-Pacific |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 1986 (10ನೆಯ ಅಧಿವೇಶನ) |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
ಒಂದು ಕಾಲದಲ್ಲಿ ಖಜುರಾಹೊ ಚಂಡೇಲಾ ರಜಪೂತರ ರಾಜಧಾನಿಯಾಗಿತ್ತು. ೧೦ ನೆಯ ಶತಮಾನದಿ೦ದ ೧೨ ನೆಯ ಶತಮಾನದ ವರೆಗೆ ಆಳಿದ ಈ ರಾಜವ೦ಶದ ಅರಸರು, ಖಜುರಾಹೊ ದ ದೇವಸ್ಥಾನಗಳನ್ನು ಕ್ರಿ.ಶ. ೯೫೦ ರಿಂದ ೧೦೫೦ ರ ವರೆಗೆ ಕಟ್ಟಿಸಿದರು. ಇಲ್ಲಿನ ಇಡೀ ಪ್ರದೇಶ ಎ೦ಟು ದ್ವಾರಗಳಿದ್ದ ಕೋಟೆಯಿಂದ ಸುತ್ತುವರಿಯಲ್ಪಟ್ಟಿತ್ತು. ಪ್ರತಿ ದ್ವಾರದ ಎರಡು ಬದಿಯಲ್ಲಿಯೂ ಖರ್ಜೂರದ ವೃಕ್ಷಗಳಿದ್ದುದರಿಂದ ಈ ಸ್ಥಳಕ್ಕೆ "ಖಜುರಾಹೊ" ಎಂಬ ಹೆಸರು ಬಂದಿತೆಂದು ಹೇಳಲಾಗುತ್ತದೆ. ಮೊದಲಿಗೆ ಎಂಬತ್ತಕ್ಕೂ ಹೆಚ್ಚು ದೇವಸ್ಥಾನಗಳು ಇಲ್ಲಿದ್ದವು. ಆದರೆ ಈಗ ೨೨ ದೇವಸ್ಥಾನಗಳು ಮಾತ್ರ ಸುಮಾರು ಒಳ್ಳೆಯ ಪರಿಸ್ಥಿತಿಯಲ್ಲಿದ್ದು, ೨೨ ಚ. ಕಿಮೀ ವಿಸ್ತೀರ್ಣವುಳ್ಳ ಪ್ರದೇಶದಲ್ಲಿವೆ.
ಖಜುರಾಹೊ ದಲ್ಲಿರುವ ದೇವಸ್ಥಾನಗಳ ಸಮೂಹ ಯುನೆಸ್ಕೋದಿಂದ ವಿಶ್ವ ಪರಂಪರೆಯ ತಾಣ ಎಂದು ಮಾನ್ಯತೆ ಪಡೆದಿದೆ.
ಶೈವ, ವೈಷ್ಣವ ಮತ್ತು ಜೈನ ಧರ್ಮೀಯವಾದ ಈ ಮಂದಿರಗಳು ಆಗಿನ ರಾಜರ ಮತ್ತು ಜನತೆಯ ಸರ್ವಧರ್ಮ ಸಮನ್ವಯ ಭಾವನೆಗಳ ಪ್ರತೀಕಗಳಾಗಿವೆ.