ಕ್ಯಾಮೆರಾನ್ ವೈಟ್
From Wikipedia, the free encyclopedia
ಕ್ಯಾಮೆರಾನ್ ಲಿಯೋನ್ ವೈಟ್ (ಬೈರ್ನ್ಸ್ ಡೇಲ್, ವಿಕ್ಟೋರಿಯಾದಲ್ಲಿ ೧೮ ಆಗಸ್ಟ್ ೧೯೮೩ರಲ್ಲಿ ಜನನ) ಒಬ್ಬ ಆಸ್ಟ್ರೇಲಿಯನ್ ಕ್ರಿಕೆಟ್ ಆಟಗಾರ, ಹಾಗು ಹಾಲಿ ಆಸ್ಟ್ರೇಲಿಯನ್ ಟ್ವೆಂಟಿ೨೦ ನಾಯಕ. ಈತ ಮಧ್ಯಮ ಕ್ರಮಾಂಕದ ಒಬ್ಬ ಬಲಿಷ್ಠ ಬ್ಯಾಟ್ಸ್ಮನ್ ಹಾಗು ರೈಟ್-ಆರ್ಮ್ ಲೆಗ್-ಸ್ಪಿನ್ ಬೌಲರ್, ವೈಟ್, ೨೦೦೦–೦೧ರ ಕ್ರೀಡಾಋತುವಿನಲ್ಲಿ ವಿಕ್ಟೋರಿಯನ್ ಬುಶ್ ರೇಂಜರ್ಸ್ ಪರ ಒಬ್ಬ ಬೌಲಿಂಗ್ ಆಲ್-ರೌಂಡರ್ ಆಗಿ ಆಡುವುದರ ಮೂಲಕ ಫಸ್ಟ್-ಕ್ಲಾಸ್ ಕ್ರಿಕೆಟ್ ನಲ್ಲಿ ತಮ್ಮ ಪ್ರಥಮ ಪ್ರದರ್ಶನ ನೀಡಿದರು. ಆರಂಭದಲ್ಲಿ ಇವರನ್ನು ವಿಕ್ಟೋರಿಯಾ ತಂಡದ ಅವರ ಸಹ ಆಟಗಾರ ಶೇನ್ ವಾರ್ನೆಗೆ ಹೋಲಿಸಲಾಗುತ್ತಿದ್ದರೂ, ವೈಟ್ ರ ಶೈಲಿಯು ಸಾಂದರ್ಭಿಕವಾಗಿ ಬೌಲಿಂಗ್ ಮಾಡುತ್ತಿದ್ದ ಬ್ಯಾಟ್ಸ್ಮನ್ ಆಂಡ್ರ್ಯೂ ಸೈಮಂಡ್ಸ್ ರ ಮಾದರಿಯನ್ನು ನಿಕಟವಾಗಿ ಹೋಲುತ್ತಿತ್ತು.
Cameron White | |||||||||
ಆಸ್ಟ್ರೇಲಿಯಾ | |||||||||
ವೈಯಕ್ತಿಕ ಮಾಹಿತಿ | |||||||||
---|---|---|---|---|---|---|---|---|---|
ಪೂರ್ಣಹೆಸರು | Cameron Leon White | ||||||||
ಅಡ್ಡಹೆಸರು | Whitey, Bear, Bundy | ||||||||
ಹುಟ್ಟು | 8 18 1983 | ||||||||
Bairnsdale, Victoria, Australia | |||||||||
ಎತ್ತರ | 1.87 m (6 ft 1+1⁄2 in) | ||||||||
ಪಾತ್ರ | Batsman | ||||||||
ಬ್ಯಾಟಿಂಗ್ ಶೈಲಿ | Right-hand | ||||||||
ಬೌಲಿಂಗ್ ಶೈಲಿ | Legbreak googly | ||||||||
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ | |||||||||
ಟೆಸ್ಟ್ ಪಾದಾರ್ಪಣೆ (cap 402) | 9 October 2008: v India | ||||||||
ODI ಪಾದಾರ್ಪಣೆ (cap 152) | 5 October 2005: v ICC World XI | ||||||||
ಕೊನೆಯ ODI ಪಂದ್ಯ | 6 February 2011: v England | ||||||||
ಪ್ರಾದೇಶಿಕ ತಂಡದ ಮಾಹಿತಿ | |||||||||
ವರ್ಷಗಳು | ತಂಡ | ||||||||
1999–present | Victoria | ||||||||
2007-2010 | Royal Challengers Bangalore | ||||||||
2006–2007 | Somerset | ||||||||
2011-present | Deccan Chargers | ||||||||
ವೃತ್ತಿಜೀವನದ ಅಂಕಿಅಂಶಗಳು | |||||||||
ಟೆಸ್ಟ್ | ODI | FC | List A | ||||||
ಪಂದ್ಯಗಳು | 4 | 79 | 113 | 193 | |||||
ಒಟ್ಟು ರನ್ನುಗಳು | 146 | 1,947 | 6,933 | 5,018 | |||||
ಬ್ಯಾಟಿಂಗ್ ಸರಾಸರಿ | 29.20 | 36.73 | 42.01 | 35.58 | |||||
೧೦೦/೫೦ | 0/0 | 2/11 | 16/32 | 6/31 | |||||
ಅತೀ ಹೆಚ್ಚು ರನ್ನುಗಳು | 46 | 105 | 260* | 126* | |||||
ಬೌಲ್ ಮಾಡಿದ ಚೆಂಡುಗಳು | 558 | 325 | 11,820 | 3,712 | |||||
ವಿಕೆಟ್ಗಳು | 5 | 12 | 172 | 92 | |||||
ಬೌಲಿಂಗ್ ಸರಾಸರಿ | 68.40 | 28.75 | 40.37 | 35.78 | |||||
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ | 0 | 0 | 2 | 0 | |||||
೧೦ ವಿಕೆಟುಗಳು ಪಂದ್ಯದಲ್ಲಿ | 0 | n/a | 1 | n/a | |||||
ಶ್ರೇಷ್ಠ ಬೌಲಿಂಗ್ | 2/71 | 3/5 | 6/66 | 4/15 | |||||
ಕ್ಯಾಚುಗಳು /ಸ್ಟಂಪಿಂಗ್ಗಳು | 1/– | 36/– | 107/– | 86/– | |||||
ದಿನಾಂಕ 16 February, 2011 ವರೆಗೆ. |
ಹೀಗೆ ೨೦೦೩–೦೪ರಲ್ಲಿ ತಮ್ಮ ೨೦ನೇ ವಯಸ್ಸಿನಲ್ಲಿ ಏಕದಿನ ಪಂದ್ಯಾವಳಿಗೆ ನಾಯಕತ್ವ ವಹಿಸಿಕೊಂಡ ನಂತರ ವಿಕ್ಟೋರಿಯಾ ತಂಡದ ಸಾರಥ್ಯ ವಹಿಸಿದ ಅತ್ಯಂತ ಕಿರಿಯ ವಯಸ್ಸಿನ ನಾಯಕರೆನಿಸಿಕೊಂಡರು, ಹಾಗು ಕ್ರೀಡಾಋತುವಿನ ನಂತರ ಫಸ್ಟ್-ಕ್ಲಾಸ್ ಕ್ರಿಕೆಟ್ ನಾಯಕತ್ವ ವಹಿಸಿಕೊಂಡರು. ಆಗ ೨೦೦೫ರಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಮನ್ನಣೆ ಪಡೆದರಾದರೂ, ವೈಟ್ ತಂಡದಿಂದ ಒಳಗೂ-ಹೊರಗೂ ಸ್ಥಾನವನ್ನು ಪಡೆಯುತ್ತಿದ್ದರು, ಏಕೆಂದರೆ ಆಯ್ಕೆ ಸಮಿತಿ ಹಾಗು ರಾಷ್ಟ್ರೀಯ ನಾಯಕ ರಿಕಿ ಪಾಂಟಿಂಗ್, ವೈಟ್ ತಮ್ಮ ಬೌಲಿಂಗ್ ನ್ನು ಸುಧಾರಣೆ ಮಾಡಿಕೊಂಡು, ಮುಂಚೂಣಿ ಸ್ಪಿನ್ನರ್ ಆಗಿ ಆಡಬೇಕೆಂದು ಆಶಿಸಿದ್ದರು. ಚಳಿಗಾಲದಲ್ಲಿ ಇಂಗ್ಲಿಷ್ ಕೌಂಟಿ ತಂಡ ಸೊಮರ್ಸೆಟ್ ಪರ ನೀಡಿದ ಯಶಸ್ವಿ ಪ್ರದರ್ಶನವು, ವೈಟ್ ರಿಗೆ ತಂಡದಲ್ಲಿ ಸ್ಥಾನ ನೀಡಬೇಕೆಂಬ ಆಯ್ಕೆ ಸಮಿತಿಯ ಉತ್ತೇಜನಕ್ಕೆ ನೆರವು ನೀಡಿತು. ನಂತರ ೨೦೦೮ರಲ್ಲಿ ನಡೆದ ನಾಲ್ಕು ಟೆಸ್ಟ್ ಪಂದ್ಯಾವಳಿಗಳನ್ನು ಒಳಗೊಂಡಂತೆ ಮತ್ತಷ್ಟು ಅಂತರರಾಷ್ಟ್ರೀಯ ಪಂದ್ಯಗಳಿಗೆ ತಂಡದಲ್ಲಿ ಸ್ಥಾನ ಗಿಟ್ಟಿಸಲಿಲ್ಲ, ವೈಟ್ ಅಂತಿಮವಾಗಿ ೨೦೦೯ರಲ್ಲಿ ಸರಣಿಯಾಗಿ ನೀಡಿದ ಉತ್ತಮ ಪ್ರದರ್ಶನಗಳ ನಂತರ ಏಕ-ದಿನ ಪಂದ್ಯಾವಳಿಗಳಿಗೆ ಖಾಯಂ ಸ್ಥಾನ ಪಡೆದುಕೊಂಡರು.