ಕೌಲಾಲಂಪುರ್
ಫೆಡರಲ್ ಪ್ರದೇಶ ಮತ್ತು ಮಲೇಷ್ಯಾದ ರಾಜಧಾನಿ / From Wikipedia, the free encyclopedia
ಕೌಲಾಲಂಪುರ್ (ಜಾವಿ(ಇದು ಮಲೆಷ್ಯಾದ ಭಾಷಾ ಲಿಪಿ: كوالا لومڤور; ಭಾಷಾಂತರಿಸಿದಾಗ: "ರಾಡಿ ಮಣ್ಣಿನ ದೊಡ್ಡ ಕೆರೆ," "ಮಣ್ಣಿನ ದೊಡ್ಡ ನದಿ ಹರಿವು," ಮತ್ತು"ರಾಡಿ ಮಣ್ಣಿನ ನಗರ "ಎಂದಾಗುತ್ತದೆ; pronounced /ˈkwɑːləlʊmˈpʊər/ ಇಂಗ್ಲಿಷಲ್ಲಿ;[3] ಮಲಯಾ [kwɑlɑlʊmpʊ], ಸ್ಥಳಿಯವಾಗಿ [kwɑləlʊmpɔ] ಅಥವಾ ಇಲ್ಲವೇ [kɔlɔmpɔ],[4] ಇದನ್ನು ಸಾಮಾನ್ಯವಾಗಿ ಸಂಕ್ಷಿಪ್ತವಾಗಿ, K.L. ಎನ್ನುತ್ತಾರೆ,ಇದು ದೊಡ್ಡ ನಗರ ಮತ್ತು ಮಲೆಷ್ಯಾದ ರಾಜಧಾನಿಯಾಗಿದೆ. ನಗರದ ವ್ಯಾಪ್ತಿ ಪ್ರದೇಶವು ಒಟ್ಟು244 km2 (94 sq mi),ವಿಸ್ತೀರ್ಣ ಹೊಂದಿದೆ.ಒಟ್ಟು 1.6 ದಶಲಕ್ಷ ಜನಸಂಖ್ಯೆಯು 2006 [5] ರಲ್ಲಿತ್ತು. ಬೃಹತ್ ಕೌಲಾಲಂಪುರ್ ನ್ನು ಕ್ಲಾಂಗ್ ವ್ಯಾಲಿ (ಕೌಲಾಲಂಪುರ್ ಮತ್ತು ಸುತ್ತಮತ್ತಲಿನ ಉಪನಗರದ ವಲಯ)ಎಂದೂ ಕರೆಯಲಾಗುತ್ತದೆ.ಇಲ್ಲಿನ ಒಟ್ಟು ನಗರೀಕರಣದ ಸಾಂದ್ರತೆಯು 7.2 [6] ದಶಲಕ್ಷವಾಗಿದೆ. ಇದು ದೇಶದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಕಾಸ್ಮಾಪೊಲಿಟನ್ ಪ್ರದೇಶವಾಗಿದ್ದು ಜನಸಂಖ್ಯೆಯೊಂದಿಗೆ ಆರ್ಥಿಕತೆಯು ಪ್ರಗತಿ [7] ಪಡೆಯುತ್ತದೆ.
Wilayah Persekutuan Kuala Lumpur (Federal Territory of Kuala Lumpur) | |
---|---|
Nickname: K.L. | |
Motto(s): Maju dan Makmur (ಆಂಗ್ಲ:Progress and Prosper) | |
Country | Malaysia |
State | Federal Territory |
Establishment | 1849 |
Granted city status | 1972 |
Granted Federal Territory | 1974 |
Government | |
• Mayor (Datuk Bandar) | Dato' Ahmad Fuad Ismail[1] From 14 December 2008 |
Area | |
• City | ೨೪೩.೬೫ km೨ (೯೫.೧೮ sq mi) |
Elevation | ೨೧.೯೫ m (೭೨ ft) |
Population (2009)[2] | |
• City | ೧೮,೦೯,೬೯೯ (೧st) |
• Density | ೭,೩೮೮/km೨ (೧೮,೯೧೨/sq mi) |
• Metro | ೭.೨ million |
• Demonym | KL-ite / Kuala Lumpurian |
Human Development Index | |
• HDI (2003) | 0.868 (high) |
Time zone | UTC+8 (MST) |
• Summer (DST) | UTC+8 (Not observed) |
Postal code | 50xxx to 60xxx 68xxx |
Mean solar time | UTC + 06:46:48 |
National calling code | 03 |
License plate prefix | Wxx (for all vehicles except taxis) HWx (for taxis only) |
ISO 3166-2 | MY-14 |
Website | Official Kuala Lumpur Website |
ಕೌಲಾಲಂಪುರ್ ಪಾರ್ಲಿಮೆಂಟ್ ಆಫ್ ಮಲೆಷ್ಯಾದ (ಸಂಸತ್ತಿನ)ಕೇಂದ್ರವಾಗಿದೆ. ಈ ಮೊದಲು ನಗರವು ಆಡಳಿತ ಮತ್ತು ನ್ಯಾಯಾಂಗದ ಶಾಖೆಗಳಿಗೆ ಕೇಂದ್ರವೆನಿಸಿತ್ತು,ನಂತರ ಇದು ಪುತ್ರಜಯಾಗೆ [8] ವರ್ಗಾವಣೆಯಾಯಿತು. ನ್ಯಾಯಾಂಗದ ಕೆಲವು ವಿಭಾಗಗಳು ರಾಜಧಾನಿಯೊಂದಿಗಿವೆ. ಮಲೆಷ್ಯಿಯನ್ ರಾಜ ,ರ ಅಧಿಕೃತ ನಿವಾಸವಾಗಿರುವ ದಿಇಸ್ಟೆನಾ ನೆಗರಾ , ಕೂಡಾ ಕೌಲಾಲಂಪುರ್ ದಲ್ಲಿ ನೆಲೆಯಾಗಿದೆ. ನಗರವು ಸಾಂಸ್ಕೃತಿಕ ಮತ್ತು ಆರ್ಥಿಕ ಕೇಂದ್ರವಾಗಿದ್ದು,ಮಲೆಷ್ಯಾದ ರಾಜಧಾನಿಯಾಗಿದ್ದರಿಂದ ಇದು ಉತ್ತಮ ಶ್ರೇಣಿಯ ನಗರ[9] ಎನಿಸಿದೆ. ಗ್ಲೋಬಲೈಸೇಶನ್ ಮತ್ತು ವರ್ಲ್ಡ್ ಸಿಟೀಸ್ ಸ್ಟಡಿ ಗ್ರುಪ್ ಮತ್ತು ನೆಟ್ ವರ್ಕ್ (GaWC) ಪ್ರಕಾರ ಕೌಲಾಲಂಪುರ್ ಜಗತ್ತಿನ ಅಲ್ಫಾ ವರ್ಲ್ಡ್ ಸಿಟಿ (ವಿಶ್ವ ಮಟ್ಟದ ಆರ್ಥಿಕ ವಲಯದಲ್ಲಿ ಗುರುತಿಸಿಕೊಂಡದ್ದು)[10] ಆಗಿದೆ.
ಕೌಲಾಲಂಪುರ್ ನ್ನು ಫೆಡ್ರಲ್ ಗಡಿಯ ಒಳಗಿನ ಪ್ರದೇಶವೆಂದು ಹೇಳಲಾಗುತ್ತಿದ್ದು; ಇದನ್ನು ಫೆಡರಲ್ ಟೆರಿಟರಿ ಆಫ್ ಕೌಲಾಲಂಪುರ್ ಎಂದು ಕರೆಯಲಾಗುತ್ತದೆ.ಅಲ್ಲದೇ ಪ್ರಮುಖ ಮೂರು ಪ್ರದೇಶಗಳಲ್ಲಿ ಮಲೆಷ್ಯನ್ ಫೆಡ್ರಲ್ ಟೆರಿಟರೀಸ್ ಎನಿಸಿದೆ. ಇದು ಸೆಲಂಗೊರ್ ರಾಜ್ಯದ ಸುತ್ತಮುತ್ತಲಿನ ಪ್ರದೇಶದಿಂದ ಅನಾವೃತ್ತಗೊಂಡಿದೆ.ಅಲ್ಲದೇ ಇದು ಕೇಂದ್ರ ಪಶ್ಚಿಮ ಕರಾವಳಿ ಪೆನಿನ್ಸುಲರ್ ಮಲೆಷ್ಯಾ[11] ದಲ್ಲಿದೆ. ಈ ನಗರದ ನಾಗರಿಕರನ್ನು ಕ್ಲೈಟ್ಸ್ KLites ಎಂದು ಕರೆಯಲಾಗುತ್ತದೆ.
ಸುಮಾರು 1990ರಿಂದಲೂ ನಗರವು ಹಲವಾರು ಅಂತಾರಾಷ್ಟ್ರೀಯ ಕ್ರೀಡೆಗಳು,ರಾಜಕೀಯ ಮತ್ತು ಸಾಂಸ್ಕೃತಿಕ ಘಟನೆಗಳಿಗೆ ಸಾಕ್ಷಿಯಾಗಿದೆ.ಉದಾಹರಣೆಗೆ 1998ರ ಕಾಮನ್ ವೆಲ್ತ್ ಗೇಮ್ಸ್ ಮತ್ತು ದಿ ಫಾರ್ಮುಲಾ ಒನ್ ವರ್ಲ್ಡ್ ಚಾಂಪಿಯನ್ ಶಿಪ್ ಇತ್ಯಾದಿಗಳಿಗೆ [12] ಆತಿಥೇಯವಾಗಿದೆ.[13] ಇಷ್ಟೇ ಅಲ್ಲದೇ ಕೌಲಾಲಂಪುರ್ ದಲ್ಲಿ ವಿಶ್ವದ ಅತಿ ಎತ್ತರದ ಪೆಟ್ರೊನಾಸ್ ಟ್ವಿನ್ ಟಾವರ್ಸ್ ಅವಳಿ [13] ಕಟ್ಟಡಗಳಿವೆ.
ಕೌಲಾಲಂಪುರ್ ನ ಸೇವೆಗೆ ಎರಡು ವಿಮಾನ ನಿಲ್ದಾಣಗಳಿವೆ: ಸೆಪಾಂಗ್ ನಲ್ಲಿರುವ ದಿ ಕೌಲಾಲಂಪುರ್ ಇಂಟರ್ ನ್ಯಾಶನಲ್ ಏರ್ಪೊರ್ಟ್ (KLIA) ಇದು ಮಲೆಷ್ಯಾಕ್ಕೆ ಪ್ರಮುಖ ವಿಮಾನ ನಿಲ್ದಾಣವೆನಿಸಿದೆ.ಸುಬಾಂಗ ನಲ್ಲಿರುವ ವಿಮಾನ ನಿಲ್ದಾಣವೆಂದರೆ ಸುಲ್ತಾನ್ ಅಬ್ದುಲ್ ಅಜಿಜ್ ಶಾ ಏರ್ ಪೊರ್ಟ್ ಇದು ಸಾಮಾನ್ಯ ಸಾರಿಗೆ ಮತ್ತು ಸರಕು ಸಾಗಣೆ ಹಾಗು ಟರ್ಬೊಚಾಲಿತ ವಿಮಾನ ಎಂಜಿನ್ ಗಳು ಇಲ್ಲಿರುತ್ತವೆ.