![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/9/9a/Cholesterol.svg/langkn-640px-Cholesterol.svg.png&w=640&q=50)
ಕೊಲೆಸ್ಟರಾಲ್
From Wikipedia, the free encyclopedia
ಕೊಲೆಸ್ಟರಾಲ್ ಅಥವಾ ಕೊಬ್ಬು ಎನ್ನುವುದು ಎಲ್ಲ ಪ್ರಾಣಿಗಳ ಜೀವಕೋಶಗಳ ಪದರುಗಳಲ್ಲಿರುವ ಜೀವರಾಸಾಯನಿಕ ಕ್ರಿಯೆಯಿಂದ ಉತ್ಪನ್ನವಾದ ಮೇಣದಂತಹ ಜೈವಿಕವಸ್ತುವಾಗಿದ್ದು, ಇದು ರಕ್ತದೊಳಗಿನ ಜೀವದ್ರವ್ಯದಲ್ಲಿ ಸಾಗಿಸಲ್ಪಡುತ್ತದೆ.[2]
![]() | |
![]() | |
ಹೆಸರುಗಳು | |
---|---|
ಐಯುಪಿಎಸಿ ಹೆಸರು
(3β)-cholest-5-en-3-ol | |
Other names
(10R,13R)-10,13-dimethyl-17-(6-methylheptan-2-yl)-2,3,4,7,8,9,11,12,14,15,16,17-dodecahydro-1H-cyclopenta[a]phenanthren-3-ol | |
Identifiers | |
CAS Number |
|
3D model (JSmol) |
|
ChemSpider | |
ECHA InfoCard | 100.000.321 |
PubChem CID |
|
InChI
| |
SMILES
| |
ಗುಣಗಳು | |
ಅಣು ಸೂತ್ರ | C27H46O |
ಮೋಲಾರ್ ದ್ರವ್ಯರಾಶಿ | 386.65 g/mol |
Appearance | white crystalline powder[1] |
ಸಾಂದ್ರತೆ | ೧.೦೫೨ g/cm೩ |
ಕರಗು ಬಿಂದು |
೧೪೮–೧೫೦ °C[1] |
ಕುದಿ ಬಿಂದು |
೩೬೦ °C (decomposes) |
ಕರಗುವಿಕೆ ನೀರಿನಲ್ಲಿ | ೦.೦೯೫ mg/L (೩೦ °C) |
ಕರಗುವಿಕೆ | soluble in acetone, benzene, chloroform, ethanol, ether, hexane, isopropyl myristate, methanol |
Except where otherwise noted, data are given for materials in their standard state (at 25 °C [77 °F], 100 kPa). > | |
Infobox references | |
![Thumb image](http://upload.wikimedia.org/wikipedia/commons/thumb/6/6d/Adamantinomatous_craniopharyngioma.jpg/320px-Adamantinomatous_craniopharyngioma.jpg)
ಇದು ಸಸ್ತನಿ ಜಾತಿಯ ಪ್ರಾಣಿಗಳಲ್ಲಿ ಅತ್ಯವಶ್ಯಕವಾಗಿ ಬೇಕಾಗುವ ದೈಹಿಕ ರಚನಾತ್ಮಕ ಅಂಶವಾಗಿದ್ದು, ಇದು ಒಳಚರ್ಮದ ಭೇದ್ಯತೆಗೆ ಮತ್ತು ಸ್ರಾವತೆಯನ್ನು ಸರಿಯಾಗಿ ಕಾರ್ಯಗೊಳಿಸಲು ಅಗತ್ಯವಾಗಿದೆ. ಇದರೊಂದಿಗೆ ಕೊಲೆಸ್ಟರಾಲ್ ಪಿತ್ತರಸ ಆಮ್ಲ, ಸ್ಟೆರಾಯ್ಡ್ ಹಾರ್ಮೋನ್ ಮತ್ತು ಹಲವು ಕೊಬ್ಬಿನಲ್ಲಿ ಕರಗುವ ವಿಟಾಮಿನ್ ತಯಾರಿಕೆಯಲ್ಲಿ ಪ್ರಮುಖ ಅಂಶವಾಗಿ ಬಳಸಲ್ಪಡುತ್ತದೆ.
ಕೊಲೆಸ್ಟರಾಲ್ ಪ್ರಾಣಿಗಳ ದೇಹದಲ್ಲಿ ಸಂಯೋಜಿಸಲ್ಪಡುವ ಪ್ರಮುಖ ಸ್ಟೆರಾಲ್ ಆಗಿದೆ, ಆದರೆ ಯುಕಾರಿಯೋಟ್ಗಳಾದ ಸಸ್ಯ ಹಾಗೂ ಫಂಗಸ್ಗಳಲ್ಲಿ ಸಹಾ ಇದು ಕಡಿಮೆ ಪ್ರಮಾಣದಲ್ಲಿ ಸಂಯೋಜಿಸಲ್ಪಡುತ್ತದೆ. ಬ್ಯಾಕ್ಟೀರಿಯಾದಂತಹ ಪ್ರೊಕ್ಯಾರಿಯೋಟ್ಗಳಲ್ಲಿ, ಬಹುವಾಗಿ ಇರುವುದೇ ಇಲ್ಲ.[3]
ಕೊಲೆಸ್ಟರಾಲ್ ಪದವು,ಕೊಲೆ -(ಪಿತ್ತರಸ)ಮತ್ತು ಸ್ಟೇರಿಯೊಸ್ (ಗಟ್ಟಿಯಾದ) ಎನ್ನುವ ಗ್ರೀಕ್ ಭಾಷೆಯ ಪದಗಳಿಂದ ಹುಟ್ಟಿದೆ ಮತ್ತು ಮದ್ಯಸಾರದ(alcohol) ರಾಸಾಯನಿಕ ಪ್ರತ್ಯಯ -ol ಸಹ ಸೇರಿದೆ.
ಮೊದಲು ೧೭೬೯ ರಲ್ಲಿ ಫ್ರ್ಯಾಂಕೋಯಿಸ್ ಪೌಲೆಟಿಯರ್ ಡೆ ಲಾ ಸಾಲೀ ಅವರು ಕೊಲೆಸ್ಟರಾಲ್ ಅನ್ನು ಪಿತ್ತಗಲ್ಲಿನಲ್ಲಿ ಮೊದಲು ಗಟ್ಟಿಯಾದ ರೂಪದಲ್ಲಿ ಪತ್ತೆ ಹಚ್ಚಿದರು. ಹಾಗಿದ್ದರೂ, ಇದಕ್ಕೆ ೧೮೧೫ ರಲ್ಲಿ ರಸಾಯನ ತಜ್ಞ ಯೂಜಿನ್ ಶೆವ್ರುಲ್ ಅವರು "ಕೊಲೆಸ್ಟರಿನ್" ಸಂಯುಕ್ತ ಎಂಬ ಹೆಸರನ್ನು ನೀಡಿದರು.[4]