From Wikipedia, the free encyclopedia
ಕೆ.ಎಂ ಬೀನಮೋಳ್ ಭಾರತದ ಅಂತರಾಷ್ಟೀಯ ಮಹಿಳಾ ಕ್ರೀಡಾಪಟು. ಕೆ.ಎಂ ಬೀನಮೋಳ್ ಎಂದೇ ಜನಪ್ರಿಯ.ಇವರು ಕೇರಳದ ಇಡುಕ್ಕಿ ಜಿಲ್ಲೆಯವರು.
ಕೆ.ಎಂ. ಬೀನಮೋಳ್ ಭಾರತದ ರಾಷ್ರ್ಟೀಯ ತಂಡವನ್ನು ಪ್ರತಿನಿಧಿಸಿದ್ದಾರೆ. ಹುಟ್ಟಿದ್ದು ಆಗಸ್ಟ್ ೧೫,೧೯೭೫ ಬಿಡಂಜಲ್, ಇಡುಕ್ಕಿ ಜಿಲ್ಲೆ ಕೇರಳದಲ್ಲಿ. ಭಾರತೀಯ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಇವರ ಸಂಗಾತಿ ಡಾ.ವಿವೇಕ್ ಜಾರ್ಜ್.
ಮಧ್ಯ-ದೂರ(800 ಮೀ) 4x400
ವೈಯಕ್ತಿಕ ಸಾಧನೆಗಳು- 400ಮೀ 51.21 (ಕೀವ್ 200) 800ಮೀ .2;02.01 ನವದೆಹಲಿ 2002 4x400ಮೀ ರಿಲೆ 3:26.89 ಅಥೆನ್ಸ್ ,2004 ಎನ್.ಆರ್
ಬೀನಮೋಳ್ ತನ್ನ ಸಹೋದರ ಕೆ.ಎಂ ಬಿನು[೧] ಅವರೊಂದಿಗೆ ಪ್ರಮುಖ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಪದಕಗಳನ್ನು ಗೆದ್ದ ಮೊದಲ ಭಾರತೀಯ ಒಡಹುಟ್ಟಿದವರು ಎಂದು ಇತಿಹಾಸ ನಿರ್ಮಿಸಿದರು.ಪುರುಷರ 800ಮೀ ನಲ್ಲಿ ಬಿನು ಬೆಳ್ಳಿ ಪದಕ ಗೆದ್ದರು.
2000ಸಿಗೆ ಒಲಂಪಿಕ್ಸ್ ಸೆಮಿಫೈನಲ್ಸ್ ಗೆ ಪಿ.ಟಿ.ಉಷಾ ಮತ್ತು ಶೈನಿ ವಿಲ್ಸನ್ ನಂತರ ಭಾರತದಲ್ಲಿ ಮೂರನೇಯ ಮಹಿಳೆಯಾಗಿ ಆಯ್ಕೆಯಾದರು. 1984 ಗೆ ಒಲಂಪಿಕ್ಸ್ನಲ್ಲಿ 400ಮೀ ಮತ್ತು 800ಮೀಅಡಚಣೆಗಳ ಜಿಗಿತದಲ್ಲಿ ಸಾಧನೆ ಮಾಡಿದವರು.
2002 ಬುಸನ್ ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಮಹಿಳೆಯರ 800ಮೀ 4x400 ಚಿನ್ನದ ಪದಕವನ್ನು ಪಡೆದರು.
ಅಥ್ಲಟಿಕ್ ವೃತ್ತಿ ಜೀವನದಲ್ಲಿ ಆದರ್ಶಪ್ರಾಯ ಸಾಧನೆ ಮಾಡಿದ್ದಕ್ಕಾಗಿ ಬೀನಮೋಲ್ ಗೆ 2000 ಅರ್ಜುನ ಪ್ರಶಸ್ತಿ ನೀಡಲಾಯಿತು.[೨] 2002-2003 ಭಾರತದ ಅತ್ಯುನ್ನತ ಕ್ರೀಡಾ ಗೌರವ, ರಾಜೀವ್ ಗಾಂಧಿ ಪ್ರಶಸ್ತಿಯನ್ನು[೩] ಅಂಜಲಿ ವೇದ್ ಪಾಠಕ್ ಭಾಗವತ್ ಅವರೊಂದಿಗೆ ಜಂಟಿಯಾಗಿ ಪ್ರಶಸ್ತಿಯನ್ನು ಪಡೆದರು. ೨೦೦೪ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.
ಕೆ.ಎಂ ಬೀನಮೋಳ್ ಅವರು ಡಾ.ವಿವೇಕ್ ಜಾರ್ಜ್ ಅವರನ್ನು ವಿವಾಹವಾದರು. ಅಶ್ವಿನ್ ಮತ್ತು ಹೈಲೆ ಎಂಬ ಇಬ್ಬರು ಮಕ್ಕಳಿದ್ದಾರೆ.
Seamless Wikipedia browsing. On steroids.