![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/0/03/Kevin_Systrom_2018_%252840980041741%2529_%2528cropped%2529.jpg/640px-Kevin_Systrom_2018_%252840980041741%2529_%2528cropped%2529.jpg&w=640&q=50)
ಕೆವಿನ್ ಸಿಸ್ಟ್ರೋಮ್
From Wikipedia, the free encyclopedia
ಕೆವಿನ್ ಸಿಸ್ಟ್ರೋಮ್ (ಜನನ ಡಿಸೆಂಬರ್ ೩೦, ೧೯೮೩) ಒಬ್ಬ ಅಮೇರಿಕನ್ ಕಂಪ್ಯೂಟರ್ ಪ್ರೋಗ್ರಾಮರ್ ಮತ್ತು ವಾಣಿಜ್ಯೋದ್ಯಮಿ. ಇವರು ವಿಶ್ವದ ಅತಿದೊಡ್ಡ ಫೋಟೋ ಹಂಚಿಕೆಯ ಜಾಲತಾಣವಾದ ಇನ್ಸ್ಟಾಗ್ರಾಂ ನ ಸಹ ಸಂಸ್ಥಾಪಕ. ಕೆವಿನ್ ಸಿಸ್ಟ್ರೋಮ್ ಹಾಗೂ ಮೈಕ್ ಕ್ರೀಗರ್ ಜೊತೆಯಾಗಿ ಇನ್ಸ್ಟಾಗ್ರಾಂ ಅನ್ನು ಸ್ಥಾಪಿಸಿದರು.[1] ೨೦೧೬ ರ ೪೦ ವರ್ಷದೊಳಗಿನ ಅಮೇರಿಕಾದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಸಿಸ್ಟ್ರೋಮ್ ಅನ್ನು ಸೇರಿಸಲಾಗಿದೆ. ಕೆವಿನ್ ಸಿಸ್ಟ್ರೋಮ್ ಇನ್ಸ್ಟಾಗ್ರಾಂ ನ ಸಿ.ಇ.ಒ. ಆಗಿದ್ದು, ಇವರ ಆಡಳಿತದೊಂದಿಗೆ ಇನ್ಸ್ಟಾಗ್ರಾಮ್ ವೇಗವಾಗಿ ಬೆಳೆಯುತ್ತಿರುವ ಅಪ್ಲಿಕೇಶನ್ ಎಂಬ ಹೆಸರನ್ನು ಪಡೆಯಿತು. ಇನ್ಸ್ಟಾಗ್ರಾಂ ಸೆಪ್ಟೆಂಬರ್ ೨೦೧೭ ರ ಹೊತ್ತಿಗೆ ೮೦೦ ಮಿಲಿಯನ್ ಮಾಸಿಕ ಬಳಕೆದಾರರನ್ನು ಹೊಂದಿತು. ಕೆವಿನ್ ಸಿಸ್ಟ್ರೋಮ್ ಸೆಪ್ಟೆಂಬರ್ ೨೪, ೨೦೧೮ ರಂದು ಇನ್ಸ್ಟಾಗ್ರಾಂ ನ ಸಿ.ಇ.ಒ ಹುದ್ದೆಗೆ ರಾಜೀನಾಮೆಯನ್ನು ನೀಡಿದರು.
ಕೆವಿನ್ ಸಿಸ್ಟ್ರೋಮ್ | |
---|---|
![]() | |
ಜನನ | ಹೋಲಿಸ್ಟನ್, ಮಸಾಚುಸೆಟ್ಸ್, ಯು.ಎಸ್ |
ವಿದ್ಯಾಭ್ಯಾಸ | ಸ್ಟಾನ್ಫ಼ೋರ್ಡ್ ಯೂನಿವರ್ಸಿಟಿ |
ವೃತ್ತಿ(ಗಳು) | ಸ್ಥಾಪಕ ಸಿ.ಎ.ಒ ಇನ್ಸ್ಟಾಗ್ರಾಂ, ವಾಣಿಜ್ಯೋದ್ಯಮಿ |
ಗಮನಾರ್ಹ ಕೆಲಸಗಳು | ಸಹ ಸಂಸ್ಥಾಪಕ ಇನ್ಸ್ಟಾಗ್ರಾಂ |
ಜಾಲತಾಣ | systrom |
ಮೆಟಾ ಪ್ಲಾಟ್ಫಾರ್ಮ್ (ನಂತರ ಫೇಸ್ಬುಕ್, ಇಂಕ್.) ೨೦೧೨ ರಲ್ಲಿ $೧ ಶತಕೋಟಿಗೆ ಇನ್ಸ್ಟಾಗ್ರಾಂ ಅನ್ನು ಖರೀದಿಸಿತು. ಮೊದಲಿಗೆ ೧೩ ಉದ್ಯೋಗಿಗಳನ್ನು ಹೊಂದಿದ್ದ ಕಂಪನಿಗೆ ಇದು ದೊಡ್ಡ ಮೊತ್ತವಾಗಿದೆ. ಇನ್ಸ್ಟಾಗ್ರಾಂ ಇಂದು ಒಂದು ಬಿಲಿಯನ್ಗಿಂತಲೂ ಹೆಚ್ಛಿನ ಬಳಕೆದಾರರನ್ನು ಹೊಂದಿದೆ ಮತ್ತು ಮೆಟಾ ಪ್ಲಾಟ್ಫಾರ್ಮ್ಗಳ ವಾರ್ಷಿಕ ಆದಾಯಕ್ಕೆ $೨೦ ಶತಕೋಟಿಗೂ ಹೆಚ್ಚು ಕೊಡುಗೆ ನೀಡುತ್ತದೆ.