ಕೆಂಪು ರಾಟವಾಳ
From Wikipedia, the free encyclopedia
"ಕೆಂಪು ರಾಟವಾಳ", "ಕೆಂಪು ಮುನಿಯ" ಅಥವಾ "ಸ್ಟ್ರಾಬೇರಿ ಪಿ೦ಚ್" (ಅಮಾಂಡವ ಅಮಾಂಡವ) ಎಂಬುದು ಈ ಹಕ್ಕಿಯ ವೈಜ್ಞಾನಿಕ ಹೆಸರು. ಇದು ಗುಬ್ಬಚ್ಚಿ ಗಾತ್ರದ ಹಕ್ಕಿಯ ಎಸ್ಟ್ರಿಲ್ಡಿಡೇ ಕುಟುಂಬಕ್ಕೆ ಸೇರಿದೆ. ಏಷ್ಯಾದ ಉಷ್ಣವಲಯ ಪ್ರದೇಶದ ಕುರುಚಲು, ಹುಲ್ಲುಗಾವಲು ಪ್ರದೇಶಗಳಲ್ಲಿ ಕಂಡು ಬರುತ್ತದೆ. ಮತ್ತು ಗಂಡು ಹಕ್ಕಿಗಳು ಪಂಜರದಲ್ಲಿ ಸಾಕಲು ಯೋಗ್ಯವಾಗಿದ್ದು , ಸಂತಾನ ಕಾಲದಲ್ಲಿ ವರ್ಣಮಯ ಪುಕ್ಕಗಳ್ಳುಳ್ಳ ಸು೦ದರ ಹಕ್ಕಿ. ಇವುಗಳು ಭಾರತದ ಉಪಖಂಡದ ಪ್ರದೇಶದಲ್ಲಿ ಮಾನ್ಸೂನ್ ಕಾಲದಲ್ಲಿ ಸಂತಾನಕ್ಕೆ ಸಜ್ಜುಗೊಳ್ಳುತ್ತವೆ. ಇದರ ವರ್ಗದ ಹೆಸರು "ಅಮಾಂಡವ" ಮತ್ತು ಇದರ ಸಾಮಾನ್ಯ ಹೆಸರು "ಅವಡವತ್" (avadavat)ಎಂಬುದು, ಗುಜರಾತಿನ ಅಹ್ಮಾದಾಬಾದ್ ನಗರದಲ್ಲಿ ಸಂಶೋಧಿಸಲಾಯಿತು. ಈ ಹಕ್ಕಿಗಳನ್ನು ಸಾಕಲು ಮುದ್ದಾಗಿರುವುದರಿಂದ ಹಲವೆಡೆ ಇವುಗಳ ಮಾರಾಟವು ಸಹ ನಡೆಯುತ್ತದೆ.[2][3]
Quick Facts ಕೆ೦ಪು ರಾಟವಾಳ, Conservation status ...
Close
![Thumb image](http://upload.wikimedia.org/wikipedia/commons/thumb/9/9a/Red_Avadavat_%28Amandava_amandava%29-_Female_in_Kolkata_W_IMG_3311.jpg/640px-Red_Avadavat_%28Amandava_amandava%29-_Female_in_Kolkata_W_IMG_3311.jpg)