ಕಿಸ್ (ಬ್ಯಾಂಡ್)
From Wikipedia, the free encyclopedia
ಕಿಸ್ ಇದು ಅಮೇರಿಕಾದ ಹಾರ್ಡ್ ರಾಕ್ ಬ್ಯಾಂಡಿನ ಹೆಸರು. ಇದನ್ನು ನ್ಯೂ ಯಾರ್ಕ್ ನಗರದಲ್ಲಿ ಜನವರಿ 1973 ರಲ್ಲಿ ರಚಿಸಲಾಯಿತು.[1] (ಹಾರ್ಡ್ ರಾಕ್: ಗಂಭೀರ ಲಯದ ಸಂಗೀತ; ಬ್ಯಾಂಡ್:ವಾದ್ಯವೃಂದ/ವಾದ್ಯ ಗೋಷ್ಟಿ/ವಾದ್ಯಮೇಳ) ಈ ತಂಡವನ್ನು ಅದರ ಸದಸ್ಯರ ಮುಖಕ್ಕೆ ಬಣ್ಣ ಹಚ್ಚಿಕೊಳ್ಳುವ ಶೈಲಿಯಿಂದ ಹಾಗು ರಂಗದ (ಸ್ಟೇಜ್) ಮೇಲೆ ಇವರು ಧರಿಸುವ ಆಕರ್ಷಕ ಉಡುಗೆ ತೊಡುಗೆಗಳಿಂದ ಸುಲಭವಾಗಿ ಗುರುತು ಹಚ್ಚಬಹುದು. ಬೆಂಕಿಯುಗುಳುವುದು (ಫೈರ್ ಬ್ರಿತಿಂಗ್), ರಕ್ತ ಉಗುಳುವುದು (ಬ್ಲಡ್ ಸ್ಪಿಟ್ಟಿಂಗ್), ಬೆಂಕಿ ಕಾರುವ ಗಿಟಾರ್ (ಸ್ಮೋಕಿಂಗ್ ಗಿಟಾರ್), ಮತ್ತು ಹಲವಾರು ಪೈಅರೋಟೆಕ್ನಿಕ್ ಗಳಿರುತ್ತಿದ್ದ ಈ ತಂಡ ವ್ಯಾಪಕವಾದ ಲೈವ್ ಪ್ರದರ್ಶನಗಳಿಂದಾಗಿ 1970ರ ದಶಕದ ಮಧ್ಯಭಾಗದಿಂದ ಹಿಡಿದು ಕೊನೆಯ ತನಕ ಪ್ರಸಿದ್ಧರಾಗಿದ್ದರು. (ಪೈರೋಟೆಕ್ನಿಕ್: ಬಾಣಬಿರುಸಿನ ಪ್ರದರ್ಶನ; ಲೈವ್ ಪ್ರದರ್ಶನ: ರಂಗದ ಮೇಲೆ ನೀಡುವ ಪ್ರದರ್ಶನ) ಇಲ್ಲಿಯವರೆಗೆ ಕಿಸ್ ಗೆ USA(ಯು.ಎಸ್.ಎ) ಯಲ್ಲಿ 24 ಗೋಲ್ಡ್ ಆಲ್ಬಂಗಳಿಂದ ಪುರಸ್ಕರಿಸಲಾಗಿದೆ.[2] (ಗೋಲ್ಡ್ ಆಲ್ಬಂ: ಇದೊಂದು ರೀತಿಯ ಪ್ರಮಾಣಪತ್ರ,ಇದು ವ್ಯಾಪಾರದ ಪ್ರಮಾಣವನ್ನು ಸೂಚಿಸುತ್ತದೆ; ಗೋಲ್ಡ್ ಅಲ್ಲದೆ ಪ್ಲಾಟಿನಂ, ಸಿಲ್ವರ್ ಪ್ರಮಾಣ ಪತ್ರಗಳು ಕೂಡ ಇದೆ.) ಈ ಬ್ಯಾಂಡ್ ಯುನೈಟೆಡ್ ಸ್ಟೇಟ್ಸ್ ನಲ್ಲಿ 19 ದಶಲಕ್ಷ ಆಲ್ಬಂಗಳನ್ನು ಮಾರಾಟ ಮಾಡಿದ್ದಾರೆ.[3] ಪ್ರಪಂಚಾದ್ಯದಂತ ಇವರ ವ್ಯಾಪಾರ 100 ದಶಲಕ್ಷವನ್ನು ಮೀರಿದೆ.[4]
Kiss | |
---|---|
ಹಿನ್ನೆಲೆ ಮಾಹಿತಿ | |
ಮೂಲಸ್ಥಳ | Brooklyn, New York |
ಸಂಗೀತ ಶೈಲಿ | Hard rock, heavy metal, glam metal |
ಸಕ್ರಿಯ ವರ್ಷಗಳು | 1973–present |
Labels | Casablanca, Mercury, Sanctuary, Columbia, Universal Music, Roadrunner, Kiss Records |
Associated acts | E.S.P., Frehley's Comet, Union, Vinnie Vincent Invasion, Wicked Lester, Black 'n Blue, Badlands, Grand Funk Railroad |
ಅಧೀಕೃತ ಜಾಲತಾಣ | www.kissonline.com |
ಸಧ್ಯದ ಸದಸ್ಯರು | Paul Stanley Gene Simmons Tommy Thayer Eric Singer |
ಮಾಜಿ ಸದಸ್ಯರು | Eric Carr Bruce Kulick Ace Frehley Peter Criss Mark St. John Vinnie Vincent |
ಪಾಲ್ ಸ್ಟಾನ್ಲಿ (ಗಾಯನ ಹಾಗು ರಿಥಂ ಗಿಟಾರ್), ಜೀನ್ ಸಿಮ್ಮನ್ಸ್ (ಗಾಯನ ಹಾಗು ಬ್ಯಾಸ್ ಗಿಟಾರ್), ಏಸ್ ಫ್ರೆಹ್ಲೆ (ಲೀಡ್ ಗಿಟಾರ್ ಹಾಗು ಗಾಯನ), ಮತ್ತು ಪೀಟರ್ ಕ್ರಿಸ್ (ಡ್ರಮ್ಸ್, ಪರ್ಕಷನ್ ಹಾಗು ಗಾಯನ) ಗಳು ಸದಸ್ಯರಾಗಿರುವ ಈ ಕ್ರಮಾಂಕವು ಬಹಳ ಯಶಸ್ವಿ ಹಾಗು ಚಿರಪರಿಚಿತವಾಗಿದೆ. (ರಿಥಂ ಗಿಟಾರ್: ಹಾಡುಗಾರನಿಗೆ/ವಾದ್ಯವೃಂದಕ್ಕೆ ಸಂಗೀತದಲ್ಲಿ ಲಯವನ್ನು ಒದಗಿಸುವುದು; ಬ್ಯಾಸ್ ಗಿಟಾರ್: ; ಲೀಡ್ ಗಿಟಾರ್: ಹಾಡಿನ ಪ್ರಮುಖ ಭಾಗವನ್ನು ನುಡಿಸುವವ; ಪರ್ಕಷನ್: ತಾಳವಾದ್ಯ) ಅವರುಗಳ ಮೇಕ್ ಅಪ್ (ಮೆಕ್ಅಪ್: ಸದಸ್ಯರ ತಮ್ಮ ಮುಖಗಳಿಗೆ ಆಕರ್ಷಕವಾಗಿ ಬಣ್ಣ ಬಳಿದುಕೊಂಡು ಮಾಡಿಕೊಳ್ಳುತ್ತಿದ್ದ ಅಲಂಕಾರ) ಮತ್ತು ವೇಷಭೂಷಣಗಳಿಂದಾಗ ಅವರುಗಳು ಕಾಮಿಕ್-ಪುಸ್ತಕಗಳ ಪಾತ್ರಗಳಾದ: ದಿ ಡೆಮನ್ (ಸಿಮ್ಮನ್ಸ್), ಸ್ಟಾರ್ ಚೈಲ್ಡ್ (ಸ್ಟಾನ್ಲಿ), ಸ್ಪೇಸ್ ಮ್ಯಾನ್(ಫ್ರೆಹ್ಲೆ) ಮತ್ತು ಕ್ಯಾಟ್ ಮ್ಯಾನ್ (ಕ್ರಿಸ್), ಹಾಗೆ ರೂಪ ಧರಿಸುತ್ತಿದ್ದರು. ಈ ಬ್ಯಾಂಡ್ ನಮ್ಮ ಮೇಕ್ಅಪ್ ಅನ್ನು ಅಂತಿಮವಾಗಿ ನಿರ್ಧರಿಸುತ್ತಿದ್ದುದು ಅವರ ಆಭಿಮಾನಿಗಳೇ ಎಂದು ವಿವರಿಸಿದೆ. ಸಿಮ್ಮನ್ಸ್ ನ "ಡೆಮನ್" ಮೇಕ್ಅಪ್, ಸಿಮನ್ಸ್ ನ ಸಿನಿಕತೆ ಮತ್ತು ಕೆಟ್ಟ ಗುಣಗಳ, ಜೊತೆಗೆ ಕಾಮಿಕ್ ಪುಸ್ತಕಗಳೊಂದಿಗೆ ಅವನ ಪ್ರೀತಿಯನ್ನು ತೋರಿಸುತ್ತದೆ. ಪಾಲ್ ಸ್ಟಾನ್ಲಿ ತನ್ನನು ತಾನು "ಸ್ಟಾರಿ-ಐಡ್ ಲವರ್" ಮತ್ತು "ಹೋಪೆಲೆಸ್ ರೋಮಾಂಟಿಕ್" ಎಂದು ಎಲ್ಲರಿಂದಲೂ ಕರೆಯಿಸಿಕೊಳ್ಳಲು ಇಷ್ಟಪಡುತ್ತಿದ್ದ ಕಾರಣ ಅವನು "ಸ್ಟಾರ್ ಚೈಲ್ಡ್" ಆಗುತ್ತಾನೆ. ಏಸ್ ಫ್ರೆಹ್ಲೆ ಯ "ಸ್ಪೇಸ್ ಮ್ಯಾನ್" ಮೇಕ್ಅಪ್, ಬ್ಯಾಹಾಕಾಶ ನೌಕೆಯಲ್ಲಿ ಪಯಣಿಸುವ ಆತನ ಆಸೆ ಮತ್ತು ಅವನು ಬೇರೆ ಗ್ರಹದವನು ಎನ್ನುವ ಆತನ ಕಲ್ಪನೆಗೆ ಕನ್ನಡಿಯಂತೆಯಿತ್ತು. ಪೀಟರ್ ಕ್ರಿಸ್ ರ 'ಕ್ಯಾಟ್ ಮ್ಯಾನ್' ಮೇಕ್ಅಪ್, ಬ್ರೂಕ್ಲಿನ್ನಿನಲ್ಲಿ ಕಳೆದ ಕಠಿಣವಾದ ಬಾಲ್ಯದ ದಿನಗಳನ್ನು ಕಳೆದಿದ್ದ ಕಾರಣ, ಕ್ರಿಸ್ ಒಳಗಡೆ ಒಂಬತ್ತು ಜನರಿದ್ದಾರೆ ಎನ್ನುವ ನಂಬಿಕೆಗೆ ಅನುಗುಣವಾಗಿತ್ತು. ಕಲೆಯ ವಿಷಯದಲ್ಲಿ ಉಂಟಾದ ಕೆಲವು ಭಿನ್ನಾಬಿಪ್ರಾಯಗಳಿಂದಾಗಿ, ಕ್ರಿಸ್ ಮತ್ತು ಫ್ರೆಹ್ಲಿ ಈ ತಂಡದಿಂದ 1982ರ ವೇಳೆಗೆ ಹೊರಬಂದರು. ಈ ಬ್ಯಾಂಡಿನ ವ್ಯಾಪಾರಿ ಮೌಲ್ಯವು ಕೂಡ ಅಲ್ಲಿಯ ವೇಳೆಗೆ ಕ್ಷೀಣಿಸಿದ್ದವು.
ಕಿಸ್ 1983ರಲ್ಲಿ ಮೇಕ್ಅಪ್ ಮಾಡಿಕೊಳ್ಳವುದನ್ನು ಬಿಟ್ಟಿತು. ಈ ದಶಕದ ಉಳಿದ ಭಾಗದಲ್ಲಿ ಅದರ ವ್ಯಾಪಾರವು ಸ್ವಲ್ಪ ಚೇತರಿಸಿಕೊಂಡ ಕಾರಣ ಕಿಸ್ ಲಾಭಗಳಿಸಿತು. ಕಿಸ್ ಬಗ್ಗೆ ಹಿಂದೆ ಇದ್ದ ಉತ್ಕಟವಾದ ಅಭಿಮಾನ 1990ರ ದಶಕದಲ್ಲಿ ಮರುಕಳಿಸಿದ್ದನ್ನು ಕಂಡು ಉತ್ತೇಜಿತರಾದ ಬ್ಯಾಂಡ್ ಅದರ ಮೊದಲಿನ ಸದಸ್ಯರೊಂದಿಗೆ(ಅವರ ಮೇಕ್ಅಪ್ ಒಂದಿಗೆ) ಮತ್ತೊಮ್ಮೆ ಸೇರುವುದಾಗಿ ಘೋಷಿಸಿತು. ಇದರ ಫಲವೇ, ಕಿಸ್ ಅಲೈವ್/ವರ್ಲ್ಡ್ ವೈಡ್/ಲಾಸ್ಟ್ ಸಿಟಿಸ್/ ರಿಯೂನಿಯನ್ ಟೂರ್ ಎನ್ನುವ ಪ್ರವಾಸ ಕಾರ್ಯಕ್ರಮ. ಇದು 1996 ಮತ್ತು 1997 ರ ಆತೀ ಹೆಚ್ಚು ಹಣ-ಸಂಪಾದಿಸಿದ ಕಾರ್ಯಕ್ರಮವಾಯಿತು. ಅಲ್ಲಿಂದಾಚೆಗೆ, ಕ್ರಿಸ್ ಮತ್ತು ಫ್ರೆಹ್ಲಿ ಮತ್ತೊಮ್ಮೆ ಬ್ಯಾಂಡ್ನ್ನು ಬಿಟ್ಟಿದ್ದಾರೆ. ಈ ಇಬ್ಬರ ಸ್ಥಾನವನ್ನು ಕ್ರಮವಾಗಿ ಎರಿಕ್ ಸಿಂಗರ್ ಮತ್ತು ಟಾಮಿ ಥಾಯರ್ ತುಂಬಿದ್ದಾರೆ. ಈ ಬ್ಯಾಂಡ್ ಮೇಕ್ಅಪ್ ಹಾಗು ವೇಷಭೂಷಣಗಳೊಂದಿಗೆ ಈಗಲೂ ಪ್ರದರ್ಶನಗಳನ್ನು ಮಾಡುತ್ತಿದೆ. ಬ್ಯಾಂಡ್ ಶುರುವಾದಾಗಿನಿಂದ ಈ ಬ್ಯಾಂಡಿನ ಖಾಯಂ ಸದಸ್ಯರಾಗಿ ಸ್ಟಾನ್ಲಿ ಮತ್ತು ಸಿಮ್ಮನ್ಸ್ ಮಾತ್ರ ಉಳಿದಿದ್ದಾರೆ.
"ಹಾರ್ಡ್ ರಾಕ್ ಸಂಗೀತದ 100 ಶ್ರೇಷ್ಟ ಕಲಾವಿದರು" ಎನ್ನುವ VH1 ಪಟ್ಟಿಯಲ್ಲಿ ಕಿಸ್ 10ನೇ ಸ್ಥಾನದಲ್ಲಿದೆ.[5] ಇದಲ್ಲದೆ, MTV ಯವರ "ದಿ ಗ್ರೇಟೆಸ್ಟ್ ಮೆಟಲ್ ಬ್ಯಾಂಡ್ಸ್" ನ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರಿಸಿದೆ.[6][6] ಕಿಸ್ ರಾಕ್ ಅಂಡ್ ರೊಲ್ ಹಾಲ್ ಆಫ್ ಫೇಮ್ ಗೆ ಆರ್ಹತೆಗಳಿಸಿದ ಹತ್ತುವರ್ಷದ ನಂತರ, ಸೆಪ್ಟೆಂಬರ್ 23, 2009 ರಂದು ನಾಮನಿರ್ದೇಶನ ಮಾಡಲ್ಪಟ್ಟಿತು.[7] ನಂತರ, ಡಿಸೆಂಬರ್ 15, 2009 ರಂದು ಕಿಸ್ ರಾಕ್ ಅಂಡ್ ರೊಲ್ ಹಾಲ್ ಆಫ್ ಫೇಮ್ ಪಟ್ಟಿಗೆ ಆಯ್ಕೆಯಾಗಿಲ್ಲ ಎಂದು ಘೋಷಿಸಲಾಯಿತು.[8]