ಕಾಸಾಬ್ಲಾಂಕಾ
From Wikipedia, the free encyclopedia
ಕಾಸಾಬ್ಲಾಂಕಾ (ಅರಾಬಿಕ್: الدار البيضاء "ಅದ್ ದಾರ್ ಅಲ್-ಬಾಯ್ದಾ (ad-Dār al-Bayḍā)ʼ", ಅಮಝಿಘ್ ಭಾಷೆಯಲ್ಲಿ ಮೂಲ ಹೆಸರು: ಅನ್ಫಾ /ಚಿತ್ರ:Anfa picture.jpg ) ಇದು ಮೊರೊಕೊ ದೇಶದ ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರತೀರದಲ್ಲಿರುವ ಒಂದು ನಗರ. ಇದು ಗ್ರ್ಯಾಂಡ್ ಕಾಸಾಬ್ಲಾಂಕಾ ಪ್ರದೇಶದ ರಾಜಧಾನಿ.
Casablanca
الدار البيضاء (Arabic) Anfa, کازابلانکا | |
---|---|
ad-Dār al-Bayḍāʼ / Casablanca | |
From top to bottom, left to right: Hassan II Mosque, Twin Center, Casablanca Technopark, El Hank Lighthouse, Stade Mohammed V, Cathédrale Sacré-Coeur, Place des Nations Unies, Parc de la Ligue Arabe. | |
Nickname: Casa | |
Country | Morocco |
administrative region | Grand Casablanca |
First settled | 7th century |
reconstructed | 1756 |
Government | |
• Mayor | Mohammed Sajid |
Area | |
• City | ೩೨೪ km೨ (೧೨೫ sq mi) |
• Urban | ೧,೬೧೫ km೨ (೬೨೪ sq mi) |
Population (2010 est.) | |
• City | ೫೫,೫೦,೦೦೦ |
• Density | ೯,೧೩೨/km೨ (೨೩,೬೫೦/sq mi) |
• Urban | ೭೫,೦೦,೦೦೦ (Grand Casablanca) |
• Urban density | ೨,೩೮೩/km೨ (೬,೧೭೦/sq mi) |
Time zone | UTC+0 (WET) |
• Summer (DST) | UTC+1 (WEST) |
Postal code | 20000-20200 |
Website | http://www.casablanca.ma/ |
5,500,000 [1] ಕ್ಕಿಂತಲೂ ಹೆಚ್ಚು ಜನಸಂಖ್ಯೆಯುಳ್ಳ ಕಾಸಾಬ್ಲಾಂಕಾ ಮೊರೊಕೊ ದೇಶದ ಅತಿದೊಡ್ಡ ನಗರ ಹಾಗೂ ಪ್ರಮುಖ ಬಂದರು. ಇದು ಮಾಘ್ರೆಬ್ನ ಅತಿದೊಡ್ಡ ನಗರವೂ ಹೌದು. ರಬತ್ ಮೊರೊಕೊ ದೇಶದ ರಾಜಕೀಯ ರಾಜಧಾನಿಯಾಗಿದ್ದರೆ, ಕಾಸಾಬ್ಲಾಂಕಾ ಮೊರೊಕೊದ ಆರ್ಥಿಕ ಮತ್ತು ವಾಣಿಜ್ಯ ಕೇಂದ್ರವಾಗಿದೆ.
ಮೊರೊಕೊದಲ್ಲಿ ನೆಲೆಯಾಗಿರುವ ಪ್ರಮುಖ ಮೊರೊಕನ್ ಮತ್ತು ಅಂತಾರಾಷ್ಟ್ರೀಯ ಉದ್ದಿಮೆಗಳಿಗೆ ಪ್ರಧಾನ ಕಾರ್ಯಾಲಯಗಳು ಮತ್ತು ಮುಖ್ಯ ಕೈಗಾರಿಕಾ ಸೌಲಭ್ಯಗಳನ್ನು ಕಾಸಾಬ್ಲಾಂಕಾ ಹೊಂದಿದೆ. ಕಾಸಾಬ್ಲಾಂಕಾ ದೇಶದ ಪ್ರಮುಖ ಕೈಗಾರಿಕಾ ವಲಯವೆಂಬ ಐತಿಹಾಸಿಕ ಸ್ಥಾನವನ್ನು ಉಳಿಸಿಕೊಂಡಿದೆ ಎಂಬುದಕ್ಕೆ ಕೈಗಾರಿಕಾ ಅಂಕಿಅಂಶಗಳು ಸಾಕ್ಷ್ಯವೊದಗಿಸುತ್ತವೆ. ಕಾಸಾಬ್ಲಾಂಕಾ ಬಂದರು ವಿಶ್ವದ ಅತಿದೊಡ್ಡ ಕೃತಕ ಬಂದರುಗಳಲ್ಲೊಂದು [2] ಹಾಗೂ ಉತ್ತರ ಆಫ್ರಿಕಾದ ಅತಿದೊಡ್ಡ ಬಂದರು.[3] ರಾಯಲ್ ಮೊರೊಕನ್ ನೌಕಾಪಡೆಗೆ ಇದು ಪ್ರಮುಖ ನೌಕಾ ನೆಲೆಯಾಗಿದೆ.