From Wikipedia, the free encyclopedia
ಕಾಸರಕ ದಕ್ಷಿಣ ಏಷಿಯಾದ ಕಾಡುಗಳಲ್ಲಿ ಕಂಡು ಬರುವ ಪರ್ಣಪಾತಿ ಮರ.ಇದರ ಬೀಜ ವಾಣಿಜ್ಯಿಕವಾಗಿ ಬೆಲೆಬಾಳುತ್ತದೆ.
ಇದು ಲೊಗನಿಯಸಿಯೆ ಕುಟುಂಬಕ್ಕೆ ಸೇರಿದ್ದು,ಸ್ಟ್ರಿಕ್ನೋಸ್ ಸಸ್ಯಕುಲದಲ್ಲಿ ಸ್ಟ್ರಿಕ್ನೋಸ್ ನಕ್ಸ್-ವೊಮಿಕ ಎಂದು ಕರೆಯಲ್ಪಡುತ್ತದೆ.ಕನ್ನಡದಲ್ಲಿ ನಂಜಿನಕೊರಡು,ಕಾತರಿಕೆ,ವಿಷಮುಷ್ಠಿ ಎಂದೂ,ತುಳುವಿನಲ್ಲಿ 'ಕಾಯೆರ್' ಎಂದೂ ಕರೆಯುತ್ತಾರೆ.
ಮಧ್ಯಮ ಪ್ರಮಾಣದ ಮರ.ನುಣುಪಾದ ಎಲೆಗಳಿಂದ ಕೂಡಿದ್ದು ನೋಡಲು ಸುಂದರವಾಗಿದೆ.ಕೇಸರಿ ಬಣ್ಣದ ಹಣ್ಣು ಇದ್ದು ಒಳಗೆ ಗುಂಡಿಗಳಂತಿರುವ ಬೀಜವಿರುತ್ತದೆ.ಬೀಜಗಳು ವಿಷಕಾರಿ.ಹಣ್ಣಿನಲ್ಲಿಯೂ ಸ್ವಲ್ಪ ಪ್ರಮಾಣದ ವಿಷವಸ್ತು ಇದೆ.ದಾರುವು ಗಡುಸಾಗಿದ್ದು ಕಳಪೆ ಗುಣಮಟ್ಟದ್ದಾಗಿದೆ.
ಇದರ ಬೀಜದಿಂದ 'ಸ್ಟ್ರಿಕ್ನಿನ್'(Strychnine)ಮತ್ತು 'ಬ್ರೂಸಿನ್'(Brucine)ಎಂಬ ಸಸ್ಯಕ್ಷಾರ(alkaloids)ನ್ನು ಬೇರ್ಪಡಿಸುತ್ತಾರೆ.ಇದರ ಕೊರಡನ್ನು ಹಳ್ಳಿಮದ್ದಿನಲ್ಲಿ ನಂಜುನಿವಾರಕವಾಗಿ ಬಳಸುತ್ತಾರೆ.[1]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.