ಕಾಮಾಲೆ
From Wikipedia, the free encyclopedia
ಕಾಮಾಲೆ ಒಂದು ತೀವ್ರವಾದ ವೈರಲ್ ಹೆಮೋರಾಜಿಕ್ ಕಾಯಿಲೆಯಾಗಿದೆ.[1] ಫ್ಲಾವಿವೈರಡೆ ತಳಿಯ ಗುಣಾತ್ಮಕ ಪ್ರಜ್ಞೆಯ ಹಾಗೂ RNA ರೋಗಾಣುಗಳಿಂದ ಸುತ್ತುಗೊಂಡಿರುವ ೪೦ರಿಂದ ೫೦ nmರಷ್ಟು ಗಾತ್ರ ಹೊಂದಿರುವ ರೋಗಾಣು ಇದಾಗಿದೆ.
Yellow fever | |
---|---|
Classification and external resources | |
ICD-10 | A95 |
DiseasesDB | ೧೪೨೦೩ |
MedlinePlus | ೦೦೧೩೬೫ |
eMedicine | med/೨೪೩೨ emerg/645 |
MeSH | D೦೧೫೦೦೪ |
ಕಾಮಾಲೆ ತರುವ ವೈರಸ್, (ಕಾಮಾಲೆ ಸೊಳ್ಳೆ(ಏಡೀಸ್ ಎಜಿಪ್ಟಿ ಹಾಗೂ ಇನ್ನಿತರ ಪ್ರಭೇಧಗಳು) ಹೆಣ್ಣು ಸೊಳ್ಳೆಯು ಕಚ್ಚುವುದರಿಂದ ಹರಡುತ್ತದೆ. ಇದು ದಕ್ಷಿಣ ಅಮೇರಿಕಾಹಾಗೂ ಆಫ್ರಿಕಾದ ಉಷ್ಣವಲಯ ಹಾಗೂ ಉಪ ಉಷ್ಣವಲಯ ಪ್ರದೇಶಗಳಲ್ಲಿ ಮೊದಲು ಪತ್ತೆಯಾಗಿತ್ತು. ಆದರೆ ಏಷ್ಯಾದಲ್ಲಿ ಕಂಡುಬಂದಿರಲಿಲ್ಲ.[2] ಈ ವೈರಸ್ ಹರಡುವಿಕೆಯು ಕೇವಲ ವಾನರ ಪ್ರಭೇದ ಹಾಗೂ ಸೊಳ್ಳೆಗಳ ಹಲವಾರು ಪ್ರಭೇದಗಳಿಂದ ಮಾತ್ರ ಹರಡುತ್ತದೆ. ಈ ಖಾಯಿಲೆಯ ಮೂಲವು ಹೆಚ್ಚಾಗಿ ಆಫ್ರಿಕಾ ಆಗಿರಬಹುದೆಂದು ನಂಬಲಾಗಿದೆ. ಇಲ್ಲಿಂದ ಇದು ೧೬ ನೇ ಶತಮಾನದಲ್ಲಿ ನಡೆಯುತ್ತಿದ್ದ ಗುಲಾಮರ ವ್ಯಾಪಾರದ ಸಮಯದಲ್ಲಿ ದಕ್ಷಿಣ ಅಮೇರಿಕಾಕ್ಕೆ ಪರಿಚಯಗೊಂಡಿತು ಎನ್ನಲಾಗಿದೆ. ೧೭ ನೇ ಶತಮಾನದ ನಂತರದಲ್ಲಿ ಈ ಕಾಯಿಲೆಯ ಅನೇಕ ಸಾಂಕ್ರಾಮಿಕ ಹರಡುವಿಕೆಯ ಪ್ರಕರಣಗಳು ಅಮೇರಿಕಾ, ಆಫ್ರಿಕಾ ಹಾಗೂ ಯುರೋಪ್ನಲ್ಲಿ ದಾಖಲಾದವು. ೧೯ ನೇ ಶತಮಾನದಲ್ಲಿ ಕಾಮಾಲೆಯು ಅತಿ ಅಪಾಯಕಾರಿ ಸಾಂಕ್ರಾಮಿಕ ಖಾಯಿಲೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿತ್ತು.[3]
ಕಾಮಾಲೆಯು ಹೆಚ್ಚಿನ ಸಂದರ್ಭಗಳಲ್ಲಿಜ್ವರ, ವಾಕರಿಕೆ ಮತ್ತು ನೋವುಳ್ಳ ರೋಗಲಕ್ಷಣವನ್ನು ಹೊಂದಿರುತ್ತದೆ ಹಾಗೂ ಸಾಮಾನ್ಯವಾಗಿ ಸ್ವಲ್ಪ ದಿನಗಳ ನಂತರ ಕಡಿಮೆಯಾಗುತ್ತದೆ. ಕೆಲವು ರೋಗಿಗಳಲ್ಲಿ ನಂಜಿನ ಹಂತಗಳೂ ಕಂಡುಬರುತ್ತಿದ್ದು, ಇದರಿಂದಾಗಿ ಜಾಂಡೀಸ್ಗೆ ತುತ್ತಾಗಿ ಪಿತ್ತಜನಕಾಂಗವು ಹಾನಿಗೊಂಡು ರೋಗಿಯಯು ಸಾವನ್ನಪ್ಪಬಹುದಾಗಿದೆ. ರಕ್ತಸ್ರಾವವು ಹೆಚ್ಚುವ ಕಾರಣದಿಂದಾಗಿ (ರಕ್ತಸ್ರಾವ ಡಯಾಥೆಸಿಸ್) ಕಾಮಾಲೆಯನ್ನು ಹೆಮೋರೇಜಿಕ್ ಜ್ವರಗಳ ಗುಂಪಿಗೆ ಸೇರಿಸಲಾಗಿದೆ. WHOದ ಅಂದಾಜಿನಂತೆ ಪ್ರತಿ ವರ್ಷ ಚುಚ್ಚುಮದ್ದು ಹಾಕದ ಜನಸಂಖ್ಯೆಯಲ್ಲಿ[4] ೩೦,೦೦೦ ಜನರು ಕಾಮಾಲೆಯಿಂದಾಗಿ ಸಾವನ್ನಪ್ಪುತ್ತಿದ್ದು, ೨೦೦,೦೦೦ ಜನರು ರೋಗಪೀಡಿತರಾಗುತ್ತಿದ್ದಾರೆ. ಇದರಲ್ಲಿ ಶೇ ೯೦ ರಷ್ಟು ಸೋಂಕು ಆಫ್ರಿಕಾವೊಂದರಲ್ಲೇ ಕಂಡುಬರುತ್ತಿದೆ.[5]
೨೦ನೇ ಶತಮಾನದಲ್ಲಿ ಕಾಮಾಲೆಗೆ ಸುರಕ್ಷಿತ ಹಾಗೂ ಪರಿಣಾಮಕಾರಿ ಚುಚ್ಚುಮದ್ದು ಕಂಡುಹಿಡಿಯಲಾಯಿತು. ಕೆಲವು ರಾಷ್ಟ್ರಗಳು ಪ್ರವಾಸಿಗರಿಗೆ ಕಾಮಾಲೆ ಚುಚ್ಚುಮದ್ದನ್ನು ಅಗತ್ಯವಾಗಿಸಿವೆ.[6] ಕಾಮಾಲೆಗೆ ನಿರ್ದಿಷ್ಟ ಔಷಧಿಯಿಲ್ಲವಾದರೂ, ರೋಗ ಹರಡುವ ಸೊಳ್ಳೆಗಳ ಪ್ರಮಾಣವನ್ನು ಇಳಿಸುವುದೂ ಸೇರಿದಂತೆ ಚುಚ್ಚುಮದ್ದು ಕಾರ್ಯಕ್ರಮಗಳು ಅತ್ಯಂತ ಮಹತ್ವದ್ದಾಗಿವೆ. ೧೯೮೦ರಿಂದ ಈಚೆಗೆ ಈ ಕಾಮಾಲೆಯ ಹಲವಾರು ಪ್ರಕರಣಗಳು ಕಂಡುಬರುತ್ತಿದ್ದು ಇದನ್ನು ಮರುಹುಟ್ಟು ಪಡೆದ ಕಾಯಿಲೆಯೆಂದು ಪರಿಗಣಿಸಲಾಗಿದೆ.[7]