![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/5/56/7_wonder_of_Karnataka_Collage.jpg/640px-7_wonder_of_Karnataka_Collage.jpg&w=640&q=50)
ಕರ್ನಾಟಕದ ಏಳು ಅದ್ಭುತಗಳು
From Wikipedia, the free encyclopedia
ಕರ್ನಾಟಕದ ಏಳು ಅದ್ಭುತಗಳು - ಕರ್ನಾಟಕದ ಸಾಂಸ್ಕೃತಿಕ, ಚಾರಿತ್ರಿಕ, ಕಲಾತ್ಮಕ ಮತ್ತು ನೈಸರ್ಗಿಕ ಹೆಗ್ಗುರುತುಗಳನ್ನು ಹುಡುಕಿ, ಗುರುತಿಸುವ ಅಭಿಯಾನ. ಈ ಅಭಿಯಾನವನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಕನ್ನಡಪ್ರಭ ದಿನಪತ್ರಿಕೆ ಮತ್ತು ಏಷಿಯಾನೆಟ್ ಸುವರ್ಣ ನ್ಯೂಸ್ ವಾಹಿನಿ ಆರಂಭಿಸಿತು. ಕರ್ನಾಟಕದ ಏಳು ಅದ್ಭುತಗಳನ್ನು ವೈಜ್ಞಾನಿಕ ಆಯ್ಕೆಯ ವಿಧಾನದ ಮೂಲಕ ಆರಿಸಿ ಹೆಸರಿಸುವುದು ಈ ಅಭಿಯಾನದ ಗುರಿಯಾಗಿತ್ತು.
![Thumb image](http://upload.wikimedia.org/wikipedia/commons/thumb/5/53/7_wonders_of_Karnataka_Program.jpg/640px-7_wonders_of_Karnataka_Program.jpg)
![Thumb image](http://upload.wikimedia.org/wikipedia/commons/thumb/5/56/7_wonder_of_Karnataka_Collage.jpg/640px-7_wonder_of_Karnataka_Collage.jpg)
ಕರ್ನಾಟಕದ ಏಳು ಅದ್ಭುತಗಳು ಅಭಿಯಾನಕ್ಕೆ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಮೇ 4, 2022ರಂದು ಚಾಲನೆ ನೀಡಿದರು. ಫೆಬ್ರವರಿ 25, 2023ರಂದು ಅಭಿಯಾನ ಮುಕ್ತಾಯಗೊಂಡು ಕರ್ನಾಟಕದ ಏಳು ಅದ್ಭುತಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.[1],[2][3]