ಕನಕಗಿರಿ
From Wikipedia, the free encyclopedia
ಕನಕಗಿರಿ ಎಂಬ ಐತಿಹಾಸಿಕ ಸ್ಥಳವು ಕೊಪ್ಪಳ ಜಿಲ್ಲೆಯ ಒಂದು ನೂತನ ತಾಲೂಕು ಕೇಂದ್ರ ಮತ್ತು ಇದು ಜಿಲ್ಲಾಕೇಂದ್ರ ಕೊಪ್ಪಳಯಿಂದ 40km ಇದೆ..ಈ ಕನಕಗಿರಿಯು ವಿದಾನಸಭಾಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಕನಕಾಚಲಪತಿ ದೇವಸ್ಥಾವಿದ್ದು ಕನಕಗಿರಿಯು ಐತಿಹಾಸಿಕ ಸ್ಥಳವಾಗಿದೆ. ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟ ಕ್ಷೇತ್ರವಾಗಿದೆ. ಕನಕಗಿರಿಯನ್ನು ಎರಡನೆ ತಿರುಪತಿ ಎಂದೂ ಕರೆಯುತ್ತಾರೆ.ಹಂಪೆಗೆ ಬರುವ ಪ್ರವಾಸಿಗರು ಇಲ್ಲಿಯೂ ಬೇಟಿನೀಡಿ ಶ್ರೀ ಕನಕಾಚಲಪತಿ ದರ್ಶನ ಪಡೆಯುತ್ತಾರೆ. ಕಾಲು ಇದ್ದವರು ಹಂಪೆ ಸುತ್ತಬೇಕು ಕಣ್ಣು ಇದ್ದವರು ಕನಕಗಿರಿ ನೋಡಬೇಕು ಎಂಬ ನಾಡನುಡಿ ಪ್ರಸಿದ್ದವಾಗಿ. ಈ ಸ್ಥಳ ಗಂಗಾವತಿಯಿಂದ ೨೧ ಕಿ.ಮಿ ಕೊಪ್ಪಳದಿಂದ ೪೦ ಕಿಮಿ ಹಂಪೆಯಿಂದ ೩೦ ಕಿ.ಮಿ ದೂರದಲ್ಲಿದೆ. ಒಟ್ಟು ಕನಕಗಿರಿಯಲ್ಲಿ ಒಟ್ಟು ೭೦೧ ಬಾವಿಗಳು ಮತ್ತು ೭೦೧ ದೇವಸ್ಥಾನಗಳು ಇವೆ ಎಂಬುದು ನಂಬಿಕೆ(ಈಗ ಮುಳುಗಡೆ ಯಾಗಿರಬಹುದು). ಈಗಲೂ ನಮಗೆ ನೋಡಲು ಕನಕಗಿರಿಯಲ್ಲಿ ಪ್ತತಿ ನಾಲ್ಕು ಹೆಜ್ಜೆ ಒಂದು ದೇವಸ್ಥಾನಗಳು ನೋಡಸಿಗುತ್ತವೆ. ಆದ್ದರಿಂದ ಕನಕಗಿರಿಯನ್ನು ದೇವಾಲಯಗಳ ತವರು ಎನ್ನಬಹುದು.
ಕನಕಗಿರಿ
ಸುವರ್ಣಗಿರಿ | |
---|---|
ಪಟ್ಟಣ | |
ಕನಕಚಲಾಪತಿ ದೇವಾಸ್ಥಾನ | |
Coordinates: 15°33′N 76°24′E | |
Country | ![]() |
State | ಕರ್ನಾಟಕ |
District | ಕೊಪ್ಪಳ |
Languages | |
• Official | Kannada |
Time zone | UTC+5:30 (IST) |
PIN | 583283 |
ISO 3166 code | IN-KA |
Vehicle registration | KA |
Nearest city | Gangavathi |
ಲೋಕಸಭೆ constituency | Koppal |
Vidhan Sabha constituency | Kanakagiri |
Website | www |