ಮೀನುಗಳ ಪ್ರಭೇದಗಳು From Wikipedia, the free encyclopedia
ಕತ್ತಿ ಮೀನು ಉಷ್ಣ ಮತ್ತು ಸಮಶೀತೋಷ್ಣ ವಲಯಗಳ ಸಮುದ್ರಗಳಲ್ಲಿ ವಾಸಿಸುವ ಮೀನು. ಉದ್ದವಾದ ಕತ್ತಿಯಾಕಾರದ ಮೂತಿಯೂ ಬೆನ್ನಿನ ಮೇಲಿರುವ ಎತ್ತರವಾದ ರೆಕ್ಕೆಯೂ ಹಲ್ಲುಗಳಿಲ್ಲದ ಬಾಯಿಯೂ ಮೈಮೇಲೆ ಹುರುಪೆಗಳಿಲ್ಲದಿರುವುದೂ ಈ ಮೀನಿನ ವಿಶಿಷ್ಟ ಲಕ್ಷಣಗಳು.
ಕ್ಸಿಫಿಯಿಡೆ ಕುಟುಂಬದ ಕ್ಸಿಫಿಯಾಸ್ ಗ್ಲೇಡಿಯಸ್ ಎಂಬದು ವೈಜ್ಞಾನಿಕ ಹೆಸರು.
ಇದು ಉದ್ದದಲ್ಲಿ ಸು. 4.5 ಮೀ ಇದೆ. ತೂಕ 1,000 ಪೌಂಡ್ ಇರುವುದೂ ಉಂಟು.[3][4] ಇದರ ಮೂತಿಯ ಉದ್ದ ಸು. ಕೆಲವೊಮ್ಮೆ ದೇಹದ ಉದ್ದದ ಮೂರನೇ ಒಂದು ಭಾಗ ಇರುತ್ತದೆ. ಬಹು ವೇಗವಾಗಿ ಈಜಬಲ್ಲ ಕತ್ತಿಮೀನು ಇತರ ಸಣ್ಣ ಮೀನುಗಳ ತಂಡದ ಮೇಲೆ ಹಟಾತ್ತನೆ ಧಾಳಿ ಮಾಡಿ ತನ್ನ ಕತ್ತಿಯಂತ ಮೂತಿಯಿಂದ ಅವನ್ನು ಊನಮಾಡಿ ಅನಂತರ ಒಂದೊಂದನ್ನಾಗಿ ನುಂಗುತ್ತದೆ. ನೀರಿನ ಮೇಲ್ಮೈಯಿಂದ ಹಿಡಿದು ಸು. 183 ಮೀ ಗಳಷ್ಟು ಆಳದಲ್ಲೂ ಆಹಾರಕ್ಕಾಗಿ ಬೇಟೆಯಾಡುತ್ತ ಸರಾಗವಾಗಿ ಈಜುತ್ತಿರುತ್ತದೆ. ಕೆಲವೊಮ್ಮೆ ಸಣ್ಣ ಹಡಗುಗಳ ತಳಭಾಗವನ್ನು ಮೂತಿಯಿಂದ ಹೊಡೆದು ಕತ್ತರಿಸುವುದೆಂದು ಹೇಳುತ್ತಾರೆ.
ಕತ್ತಿಮೀನು ಒಳ್ಳೆಯ ಆಹಾರದ ಮೀನೆಂದು ಹೆಸರಾಗಿದೆ. ಇದರ ಮಾಂಸದಲ್ಲಿ ಪ್ರೋಟೀನಿನ ಅಂಶ ಅಧಿಕವಾಗಿರುವುದರಿಂದ ಬಹು ಪುಷ್ಟಿಕರವಾದ ಆಹಾರವೆನಿಸಿದೆ. ಬೆಸ್ತರು ಹಿಡಿಯುವ ಹಲವಾರು ಬಗೆಯ ಮೀನುಗಳಲ್ಲಿ ಇದು ವಾಣಿಜ್ಯ ದೃಷ್ಟಿಯಿಂದ ಮುಖ್ಯವಾದುದು.
ಇವು ಬೇಸಿಗೆಯಲ್ಲಿ ಶೀತ ವಲಯದೆಡೆಗೆ ವಲಸೆಹೋಗುತ್ತವೆ ಹಾಗೂ ಛಳಿಗಾಲದಲ್ಲಿ ಮತ್ತೆ ಹಿಂತಿರುಗುತ್ತವೆ.
ಇವು ವಸಂತ ಋತುವಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.