ಒಡಂಬಡಿಕೆ: ಕೇವಲ ಲೌಕಿಕ ವ್ಯವಹಾರಗಳಲ್ಲಿ ಇಬ್ಬರು ಅಥವಾ ಎರಡು ಗುಂಪಿನವರು ತಮ್ಮೊಳಗೆ ಮಾಡಿಕೊಂಡ ಒಪ್ಪಂದವನ್ನಲ್ಲದೆ ಮತವಿಚಾರಗಳಲ್ಲಿ ಮಾಡಿಕೊಂಡ ಒಪ್ಪಂದವನ್ನೂ ಒಳಗೊಳ್ಳುತ್ತದೆ.

ಹಿಬ್ರೂ ಮತದಲ್ಲಿ

ಎರಡನೆಯ ಬಗೆಯ ಒಪ್ಪಂದ ಪ್ರಧಾನವಾಗಿ ಕಾಣುವುದು ಹೀಬ್ರೂ ಮತದಲ್ಲಿ. ಹೀಬ್ರೂ ಭಾಷೆಯಲ್ಲಿ ಒಡಂಬಡಿಕೆಗೆ ಸಮಾನಾಂತರವಾದ ಪದ ಬೆರಿತ್[1] . ಹೀಬ್ರೂ ಮತದಲ್ಲಿ ಈ ಪದ ದೇವರಿಗೂ ಮತ್ತು ಮಾನವರಿಗೂ ಅಥವಾ ದೇವರಿಗೂ ಮತ್ತು ಸೃಷ್ಟಿಯಾದ ಜಗತ್ತಿಗೂ ಏರ್ಪಟ್ಟ ಸಂಬಂಧವನ್ನು ನಿರ್ದೇಶಿಸುತ್ತದೆ. ಈ ಸಂಬಂಧ ಶಾಂತಿಜೀವನ, ವಿಧಿವತ್ತಾದ ಜೀವನ, ಪರಸ್ಪರ ಅಥವಾ ಏಕಪಕ್ಷೀಯ ಸಂರಕ್ಷಣೆ, ಭರವಸೆ ಮುಂತಾದುವನ್ನು ಒಳಗೊಳ್ಳುತ್ತದೆ.

ಯಹೂದಿ ಮತದಲ್ಲಿ

ಯೆಹೂದಿ ಮತದಲ್ಲಿ ಯಾಹವೆ ತಾನು ವಿಧಿಸಿದ ಹತ್ತು ಆಜ್ಞೆಗಳಿಗೆ ವಿಧೇಯರಾದ ಜನರನ್ನು ತನ್ನ ಜನವೆಂದು ಭಾವಿಸಿ ಅವರಲ್ಲಿ ಒಗ್ಗಟ್ಟನ್ನು ಏರ್ಪಡಿಸಿ ಅವರನ್ನು ಸಂರಕ್ಷಿಸಲು ಬದ್ಧನಾಗಿರುತ್ತಾನೆ.[2][3] ಈ ಒಪ್ಪಂದ ಏಕಪಕ್ಷೀಯ; ಜನರನ್ನು ತನ್ನವರನ್ನಾಗಿ ಆಯ್ದುಕೊಂಡವನೂ ಜನರಿಗೆ ಕಾನೂನನ್ನು ವಿಧಿಸಿದವನೂ ಪ್ರಭುವಾದ ಯಾಹವೆಯೇ. ರಕ್ಷಣೆಯ ಆಶ್ವಾಸನೆ ನೀಡಿದವನೂ ಅವನೇ. ಈ ಒಡಂಬಡಿಕೆಗೆ ಸಂಬಂಧಪಟ್ಟ ಮತಾಚರಣೆಯುಂಟು. ಅದರಲ್ಲಿ ಪುರೋಹಿತ ಪ್ರಭುವಿನ ಪ್ರತಿನಿಧಿಯಾಗಿ ಯಾಹವೆಯ ಕೃಪಾಪುರ್ಣತೆಯನ್ನು ಹೊಗಳಿ ಅವನ ಆಜ್ಞಾನುಸಾರ ಬಾಳಬೇಕೆಂದು ಘೋಷಿಸುತ್ತಾನೆ. ಭಕ್ತರು ತಮ್ಮ ವಿಧೇಯತೆಯನ್ನು ಪ್ರಕಟಿಸಿದ ಅನಂತರ ಆ ಒಡಂಬಡಿಕೆಯ ಸಂಕೇತವಾಗಿ ಒಡಂಬಡಿಕೆಯ ರಕ್ತವನ್ನು ಪ್ರೋಕ್ಷಿಸುತ್ತಾನೆ. ಅನಂತರದಲ್ಲಿ ಪವಿತ್ರಭೋಜನ ನಡೆಯುತ್ತದೆ.

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.