![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/6/62/European_praying_mantis_%2528Mantis_religiosa%2529_green_female_Dobruja.jpg/640px-European_praying_mantis_%2528Mantis_religiosa%2529_green_female_Dobruja.jpg&w=640&q=50)
ಒಂಟೆಹುಳು
From Wikipedia, the free encyclopedia
ಒಂಟೆಹುಳು: ಡಿಕ್ಟಿಯಾಪ್ಟೆರ ಗಣದ ಮ್ಯಾಂಟಿಡೀ ಉಪಗಣಕ್ಕೆ ಸೇರಿದ ಒಂದು ಕೀಟ (ಮ್ಯಾಂಟಿಸ್; ಪ್ರೇಯಿಂಗ್ ಮ್ಯಾಂಟಿಸ್). ಮಳ್ಳಿಕೀಟವೆಂದೂ ಕರೆಯುತ್ತಾರೆ. ತಮ್ಮ ಮುಂಗಾಲುಗಳನ್ನು ಕೈ ಮುಗಿಯುವಂತೆ ಎತ್ತಿ ಹಿಡಿಯುವುದರಿಂದ ಪ್ರಾರ್ಥನೆ ಮಾಡುವಂತೆ ಕಾಣುತ್ತದೆ. ಹಾಗಾಗಿ ಇದನ್ನು ‘ಪ್ರಾರ್ಥನಾ ಕೀಟ’ (ಮ್ಯಾಂಟಿಸ್; ಪ್ರೇಯಿಂಗ್ ಮ್ಯಾಂಟಿಸ್) ಎಂತಲೂ ಕರೆಯುತ್ತಾರೆ. ಸುಮಾರು ೪೩೦ ಕುಲಗಳಲ್ಲಿ ೨೪೦೦ಕ್ಕೂ ಮಿಕ್ಕಿದ ಜಾತಿಯ ಕೀಟಗಳನ್ನು ಗುರುತಿಸಲಾಗಿದೆ.[1] ಇವುಗಳು ಮುಖ್ಯವಾಗಿ ಉಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುತ್ತವೆಯಾದರೂ, ಆದರೆ ಕೆಲವು ಸಮಶೀತೋಷ್ಣ ಪ್ರದೇಶಗಳಲ್ಲಿ ವಾಸಿಸುತ್ತವೆ[2]