ಐಸೊಮಾರ್ಫಿಸಂ
From Wikipedia, the free encyclopedia
ಐಸೊಮಾರ್ಫಿಸಂ ಮತ್ತು ಪಾಲಿಮಾರ್ಫಿಸಂ: ಸಂಯುಕ್ತಗಳು ಒಂದೇ ಆಕೃತಿಯಲ್ಲಿ ಅಥವಾ ತತ್ಸಮೀಪ ಜ್ಯಾಮಿತೀಯ ಆಕೃತಿಗಳಲ್ಲಿ ಸ್ಫಟಿಕೀಕರಿಸುವ ಪ್ರವೃತ್ತಿ (ಸಮರೂಪತೆ). ಇಂಥ ಸಂಯುಕ್ತಗಳ ಹೆಸರು ಐಸೊಮಾರ್ಫಸ್ ಸಂಯುಕ್ತಗಳು. ಉಪ್ಪಿನ ತುಣುಕೊಂದನ್ನು ಸೂಕ್ಷ್ಮದರ್ಶಕದಿಂದ ಪರೀಕ್ಷಿಸಿದರೆ ಅದರ ಪ್ರತಿಯೊಂದು ಹರಳೂ ಘನಾಕೃತಿಯಲ್ಲಿರುವುದು ವ್ಯಕ್ತವಾಗುತ್ತದೆ. ಹರಳನ್ನು ನುಣ್ಣಗೆ ಹುಡಿಮಾಡಿ ಎಷ್ಟು ವಿಭಾಗಗಳಾಗಿ ವಿಭಾಗಿಸಿದರೂ ದೊರೆಯುವ ಒಂದೊಂದು ಕಣವೂ ಘನಾಕೃತಿಯಲ್ಲಿಯೇ ಇರುವುದು. ಆದ್ದರಿಂದ ಘನಾಕೃತಿ ಉಪ್ಪಿನ ಸ್ವಭಾವಸಿದ್ಧ ಆಕಾರ ಎಂದಾಯಿತು. ಹೀಗೆ ಹರಳುರೂಪದ ಒಂದೊಂದು ವಸ್ತುವಿಗೂ ವಿಶಿಷ್ಟ ಆಕಾರ ಇದೆ. ಸ್ಫಟಿಕದಲ್ಲಿರುವ ಪರಮಾಣುಗಳು ಭಿನ್ನರೀತಿಯಲ್ಲಿ ಜೋಡಣೆಯಾದಾಗ ವಿವಿಧ ಸ್ಫಟಿಕಾಕೃತಿಗಳು ಮೈದಳೆಯುತ್ತವೆ. ಇದರ ವಿವರವಾದ ಪರಿಶೀಲನೆಯಿಂದ ಸೋಜಿಗದ ಸಂಗತಿಗಳು ಹೊರಬಿದ್ದಿವೆ. ಆಲಂ ಒಂದು ಲವಣವರ್ಗದ ಹೆಸರು. ಇವು ಯುಗ್ಮಲವಣಗಳು (ಡಬಲ್ ಸಾಲ್ಟ್್ಸ). ನಿರ್ಮಾಣವಾದ ಪಟಿಕಕ್ಕೆ ಪೊಟ್ಯಾಷ್ ಆಲಂ ಎಂಬುದು ರಾಸಾಯನಿಕ ಹೆಸರು. ಇದರ ಅಣುಸೂತ್ರ
![Thumb image](http://upload.wikimedia.org/wikipedia/commons/thumb/1/1c/Potassium_alum.jpg/320px-Potassium_alum.jpg)
KAl(SO4)2·12H2O.
![Thumb image](http://upload.wikimedia.org/wikipedia/commons/1/1a/Forsterite.jpg)
ನೇರಿಳೆಬಣ್ಣದ ಕ್ರೋಮ್ ಆಲಂ ಇದೇ ಗುಂಪಿನದು. ಇದರ ಅಣುಸೂತ್ರ
![Thumb image](http://upload.wikimedia.org/wikipedia/commons/thumb/2/27/Chromium%28III%29_Potassium_Sulfate-crystals.jpg/640px-Chromium%28III%29_Potassium_Sulfate-crystals.jpg)
KCr(SO4)2·12(H2O).
ಈ ಎರಡು ಲವಣಗಳಲ್ಲಿರುವ ಪರಮಾಣುಗಳ ಸಂಖ್ಯೆ ಒಂದೇ. ಸೂಕ್ಷ್ಮದರ್ಶಕದಿಂದ ಪರೀಕ್ಷಿಸಿದಾಗ ಅವುಗಳ ಸ್ಫಟಿಕಾಕೃತಿಯೂ ಒಂದೇ ಆಗಿರುವುದು ಕಂಡುಬರುತ್ತದೆ. ಅಲ್ಲದೆ ಪಟಿಕದ ಪರ್ಯಾಪ್ತದ್ರಾವಣದಲ್ಲಿಟ್ಟ ಕ್ರೋಮ್ ಆಲಂ ಹರಳು ಸರಾಗವಾಗಿ ಬೆಳೆಯುವುದು. ಕ್ರಮೇಣ ದ್ರಾಕ್ಷಿಯ ಬೀಜ ಹುದುಗಿರುವ ಕಡುಬಿನಂತೆ ಊದುವುದು. ಪಟಿಕ ಕ್ರೋಮ್ ಆಲಂ ಸುತ್ತ ಇಷ್ಟು ನಿರಾಳವಾಗಿ ಸಂಗ್ರಹಗೊಳ್ಳುವುದರಿಂದ ಅವೆರಡರ ಸ್ಫಟಿಕಾಕೃತಿಯಲ್ಲಿ ಎಷ್ಟು ನಿಕಟ ಹೋಲಿಕೆಯಿದೆ ಎಂಬುದು ವೇದ್ಯವಾಗುತ್ತವೆ. ಈ ಪ್ರವೃತ್ತಿಯೇ ಐಸೊಮಾರ್ಫಿಸಂ.
ಜರ್ಮನಿಯ ಭೂವಿಜ್ಞಾನಿಯೂ ಸ್ಫಟಿಕಶಾಸ್ತ್ರ ಪರಿಣತನೂ ಆದ ಮಿಚೆರ್ಲಿಕ್ [1]ಇಂಥ ಅನೇಕ ಹರಳುರೂಪದ ಸಂಯುಕ್ತಗಳ ಅಧ್ಯಯನದಿಂದ ಐಸೊಮಾರ್ಫಿಸಮನ್ನು ಕುರಿತ ಒಂದು ನಿಯಮವನ್ನು ಪ್ರತಿಪಾದಿಸಿದ (1819)[2] . ಈ ನಿಯಮದ ಪ್ರಕಾರ ಸಮಾನ ಸಂಖ್ಯೆಯ ಪರಮಾಣುಗಳು ಸಮಾನರೀತಿಯಲ್ಲಿ ಜೋಡಣೆಗೊಂಡಿರುವ ವಸ್ತುಗಳ ಹರಳುಗಳ ರೂಪಗಳಲ್ಲೂ ಸಾಮ್ಯವಿದೆ.[3] ಆದರೆ ಈ ನಿಯಮದ ಯಾಥಾರ್ಥದ ಬಗ್ಗೆ ಸಂಶಯ ಹುಟ್ಟಿಸುವ ಕೆಲವು ಸಾಕ್ಷ್ಯಗಳು ಇತ್ತೀಚೆಗೆ ಬೆಳಕಿಗೆ ಬಂದಿವೆ. ರಾಸಾಯನಿಕ ರಚನೆ ಮತ್ತು ಸ್ಫಟಿಕಾಕೃತಿಗಳಲ್ಲಿ ಹೋಲಿಕೆಯಿರುವ ಕೆಲವು ಸಂಯುಕ್ತಗಳಿವೆ. ಈ ಹೋಲಿಕೆ ಸ್ಥೂಲವಾಗಿದ್ದು ಸ್ಫಟಿಕಕೋನದಲ್ಲಿ ಅಲ್ಪ ಅಂತರವಿರುವುದು ವ್ಯಕ್ತಪಟ್ಟಿದೆ. ಉದಾಹರಣೆಗೆ, ಮೆಗ್ನೇಸಿಯಂ ಸಲ್ಫೇಟ್ MgSO4 ಮತ್ತು ಫೆರಸ್ ಸಲ್ಫೇಟ್ FeSO4 ಲವಣಗಳನ್ನು ಹೆಸರಿಸಬಹುದು.