ಐಸಿಸಿ ಕ್ರಿಕೆಟ್ ವಿಶ್ವ ಕಪ್
From Wikipedia, the free encyclopedia
ಐಸಿಸಿ ಕ್ರಿಕೆಟ್ ವಿಶ್ವ ಕಪ್ ಪುರುಷರ ಅತಿ ಪ್ರತಿಷ್ಠಿತ ಏಕದಿನ ಅಂತರರಾಷ್ಟ್ರೀಯ (ODI) ಕ್ರಿಕೆಟ್ ಪಂದ್ಯಾವಳಿಯಾಗಿದೆ. ಈ ಕ್ರೀಡೆಯ ನಿರ್ವಹಣಾ ಮಂಡಳಿಯಾದ ಅಂತರರಾಷ್ಟ್ರೀಯ ಕ್ರಿಕೆಟ್ ಪರಿಷತ್ (ಐಸಿಸಿ) ಈ ಕ್ರೀಡೆಯನ್ನು ಆಯೋಜಿಸುತ್ತದೆ. ಪ್ರಾಥಮಿಕ ಅರ್ಹತಾ ಸುತ್ತಿನ ಪಂದ್ಯಗಳು ನಡೆದ ನಂತರ, ಅರ್ಹತೆ ಗಳಿಸಿದ ತಂಡಗಳು, ನಾಲ್ಕು ವರ್ಷಗಳಲ್ಲೊಮ್ಮೆ ನಡೆಯುವ ಈ ಪಂದ್ಯಾವಳಿಯಲ್ಲಿ ಸ್ಪರ್ಧಿಸುತ್ತವೆ. ಅತಿಹೆಚ್ಚು ವೀಕ್ಷಿತ ಕ್ರೀಡಾ ಪಂದ್ಯಾವಳಿಗಳ ಪಟ್ಟಿಯಲ್ಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ನಾಲ್ಕನೆಯ ಸ್ಥಾನದಲ್ಲಿದೆ.[1][2][2] ಐಸಿಸಿ ಮೂಲಗಳ ಪ್ರಕಾರ, ಇದು ಅತ್ಯಂತ ಮಹತ್ವವಾದ ಪಂದ್ಯಾವಳಿ ಹಾಗೂ ಕ್ರಿಕೆಟ್ ಆಟದಲ್ಲಿ ಅತಿಪ್ರಮುಖ ಮೈಲಿಗಲ್ಲು.[3][4] ಮೊಟ್ಟಮೊದಲ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯನ್ನು ೧೯೭೫ರಲ್ಲಿ ಇಂಗ್ಲೆಂಡ್ನಲ್ಲಿ ಆಯೋಜಿಸಲಾಯಿತು. ಮಹಿಳೆಯರ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯನ್ನು ನಾಲ್ಕು ವರ್ಷಗಳಲ್ಲೊಮ್ಮೆ ೧೯೭೩ರಿಂದಲೂ ಆಯೋಜಿಸಲಾಗುತ್ತದೆ.
ICC Cricket World Cup | |
---|---|
ನಿರ್ವಾಹಣೆ | International Cricket Council (ICC) |
ಫಾರ್ಮ್ಯಾಟ್ | One Day International |
ಮೊದಲ ಪಂದ್ಯಾವಳಿ | 1975 (ಇಂಗ್ಲೆಂಡ್) |
ಕೊನೆಯ ಪಂದ್ಯಾವಳಿ | 2015 (Australia, New Zealand) |
ಮುಂದಿನ ಪಂದ್ಯಾವಳಿ | 2019 (ಇಂಗ್ಲೆಂಡ್ and Wales) |
ಟೂರ್ನಮೆಂಟ್ ರೂಪ | ↓various |
ತಂಡಗಳ ಸಂಖ್ಯೆ | 20 (all tournaments) 14 (most recent) 10 (next) |
ಪ್ರಸ್ತುತ ಚಾಂಪಿಯನ್ | ![]() |
ಅತ್ಯಂತ ಯಶಸ್ವಿ | ![]() |
ಹೆಚ್ಚಿನ ರನ್ಗಳು | ![]() |
ಹೆಚ್ಚಿನ ವಿಕೆಟ್ಗಳು | ![]() |
ಕ್ರಿಕೆಟ್ ವಿಶ್ವ ಕಪ್ ಮುಖ್ಯ ಪಂದ್ಯಾವಳಿಯಲ್ಲಿ ಎಲ್ಲಾ ಟೆಸ್ಟ್ ಹಾಗೂ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಆಡುವ ರಾಷ್ಟ್ರೀಯ ತಂಡಗಳು, ಜೊತೆಗೆ, ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಾವಳಿಗಳಲ್ಲಿ ಅರ್ಹತೆ ಪಡೆದಿರುವ ರಾಷ್ಟ್ರೀಯ ತಂಡಗಳೂ ಸಹ ಸ್ಪರ್ಧಿಸುತ್ತವೆ. ಪಂದ್ಯಾವಳಿಯಲ್ಲಿ ಜಯಗಳಿಸಿದ ಐದು ರಾಷ್ಟ್ರೀಯ ತಂಡಗಳಲ್ಲಿ ಆಸ್ಟ್ರೇಲಿಯಾ ಅತಿ-ಯಶಸ್ವೀ ತಂಡವಾಗಿದೆ. ಇದು ನಾಲ್ಕು ಬಾರಿ ವಿಶ್ವಕಪ್ ಗೆದ್ದಿದೆ. ವೆಸ್ಟ್ ಇಂಡೀಸ್ ಹಾಗೂ ಭಾರತ ಎರಡು ಬಾರಿ, ಪಾಕಿಸ್ತಾನ ಮತ್ತು ಶ್ರೀಲಂಕಾ ತಲಾ ಒಂದು ಬಾರಿ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಯಗಳಿಸಿವೆ.
ಕಳೆದ ೨೦೦೭ರ ವಿಶ್ವಕಪ್ ಪಂದ್ಯಾವಳಿಯು ವೆಸ್ಟ್ ಇಂಡೀಸ್ನಲ್ಲಿ, ಮಾರ್ಚ್ ೧೩ರಿಂದ ಏಪ್ರಿಲ್ ೨೮ರ ವರೆಗೆ ಆಯೋಜಿತವಾಯಿತು. ಈ ಪಂದ್ಯಾವಳಿಯಲ್ಲಿ ಹದಿನಾರು ತಂಡಗಳಿದ್ದವು. ಅರಂಭದಲ್ಲಿ ರೌಂಡ್-ರಾಬಿನ್ ಹಂತ, ನಂತರ 'ಸೂಪರ್ ೮'ಸೆಮಿ-ಫೈನಲ್ಸ್ ಹಾಗೂ ಫೈನಲ್ ಪಂದ್ಯ ನಡೆದವು. ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ, ಶ್ರೀಲಂಕಾ ತಂಡವನ್ನು ಸೋಲಿಸಿ, ಪಂದ್ಯಾವಳಿ ಪ್ರಶಸ್ತಿ ತನ್ನಲ್ಲಿಯೇ ಉಳಿಸಿಕೊಂಡಿತು.
ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ೨೦೧೧ರ ಫೆಬ್ರವರಿ ೧೯ರಿಂದ ಏಪ್ರಿಲ್ ೨ರ ತನಕ ನಡೆಯಲಿದೆ. ಬಾಂಗ್ಲಾದೇಶ, ಭಾರತ ಹಾಗೂ ಶ್ರೀಲಂಕಾ ದೇಶಗಳಲ್ಲಿ ಈ ಪಂದ್ಯಾವಳಿ ಜಂಟಿಯಾಗಿ ಆಯೋಜಿತವಾಗಲಿದೆ. ಈ ಪಂದ್ಯಾವಳಿಯಲ್ಲಿ ೧೪ದೇಶಗಳು ಸ್ಪರ್ಧಿಸಲಿವೆ.