From Wikipedia, the free encyclopedia
ಐಯಾಂಬ್ಲಿಕಸ್: ಕ್ರಿ.ಶ. ೨೪೫-೩೨೫.[2] ಸಿರಿಯ ದೇಶದ ಒಬ್ಬ ತತ್ತ್ವಜ್ಞಾನಿ. ತನ್ನ ಗುರುವಾದ ಪಾರ್ಫಿರಿಯ ಗ್ರಂಥಗಳಿಂದ ಸ್ಫೂರ್ತಿ ಪಡೆದನಾದರೂ ಅವನ ಅಭಿಪ್ರಾಯಗಳನ್ನು ಒಪ್ಪದೆ ಆತನ ಗುರುವಾದ ಪ್ಲೊಟೈನಸಿನಿಂದ ಪ್ರಚುರವಾದ ನಿಯೊ ಪ್ಲೇಟೋನಿಸಂ ಪಂಥದ ರೂಪರೇಷೆಗಳನ್ನು ತಿದ್ದಿ ಆ ಪಂಥದ ಧೀರ ಪ್ರತಿನಿಧಿ ಎಂದು ಹೆಸರು ಗಳಿಸಿದ. ಕ್ರೈಸ್ತಮತದ ವಿರುದ್ಧ ನಿಯೊ ಪ್ಲೇಟೋನಿಸಂ ತತ್ತ್ವವನ್ನು ಸಂಘಟಿಸಿದವರಲ್ಲಿ ಅಗ್ರಗಣ್ಯನೆಂದು ಈತನನ್ನು ಹೊಗಳಲಾಗಿದೆ. ಎರಡು ಶತಮಾನಗಳವರೆಗೆ ನಿಯೊ ಪ್ಲೇಟೋನಿಸಂ ವಿಚಾರದಲ್ಲಿ ಈತನದೇ ಅಧಿಕೃತ ವಾಣಿಯಾಗಿತ್ತೆಂದು ಹೇಳಿದರೆ ಇವನ ಪ್ರಭಾವ ಎಷ್ಟೆಂದು ಊಹಿಸಬಹುದು.
ಇತರ ಹೆಸರುಗಳು | Iamblichus Chalcidensis, Iamblichus of Chalcis, Iamblichus of Apamea |
---|---|
ಜನನ | c. 245[1] Chalcis ad Belum |
ಮರಣ | c. 325 (aged around 80) |
ಕಾಲಮಾನ | Ancient philosophy |
ಪ್ರದೇಶ | Western philosophy |
ಪರಂಪರೆ | ನಿಯೊ ಪ್ಲೇಟೋನಿಸಂ |
ಮುಖ್ಯ ಹವ್ಯಾಸಗಳು | Metaphysics, philosophical cosmology |
ಪ್ರಭಾವಕ್ಕೋಳಗಾಗು
| |
ಪ್ರಭಾವ ಬೀರು
|
ಪ್ಲೊಟೈನಸನ ಸಿದ್ಧಾಂತಕ್ಕೆ ಪಾರ್ಫಿರಿ ಮಾಡಿದ ಅದ್ವೈತ ಪರವಾದ ವ್ಯಾಖ್ಯಾನವನ್ನು ತಿರಸ್ಕರಿಸಿದ ಐಯಾಂಬ್ಲಿಕಸ್ ತನ್ನದೇ ಆದ ವಿಚಾರಣೆಯನ್ನು ಮಂಡಿಸುತ್ತ ತತ್ತ್ವ ಅನೇಕ ಮುಖವಾದುದು, ಅನೇಕ ರೀತಿಯಲ್ಲಿ ಅಸ್ತಿತ್ವವನ್ನು ಹೊಂದಿರುವಂಥದು, ಆತ್ಮತತ್ತ್ವ ಬುದ್ಧಿತತ್ತ್ವಕ್ಕಿಂತ ಭಿನ್ನ, ಆತ್ಮ ಆತ್ಮಕ್ಕೂ ವ್ಯತ್ಯಾಸವುಂಟು, ಮಾನವನ ಆತ್ಮ ಶುದ್ಧ ಅಥವಾ ಪರಮಾತ್ಮ ತತ್ತ್ವಕ್ಕಿಂತ ಭಿನ್ನ-ಎಂದು ನಿರೂಪಿಸಿದ. ಆಧ್ಯಾತ್ಮಿಕ ಪ್ರಪಂಚದಲ್ಲಿರುವ ನಿತ್ಯಸತ್ತ್ವಗಳ ವಿಶ್ಲೇಷಣೆಯನ್ನು ಮಾಡುವುದರ ಮೂಲಕ ಸತ್ಯ ಅಥವಾ ಸತ್ ಎನ್ನುವುದು ಸಂಕೀರ್ಣವಾದುದೆಂದೂ ಹಂತಹಂತಗಳಿಂದ ಕೂಡಿದ ರಚನೆ ಇರುವಂಥದೆಂದೂ ಹೇಳಿದ. ಈ ಹಂತಗಳಲ್ಲಿ ರೂಪುಗೊಂಡ ಅಂಶಗಳು ತಮ್ಮ ತಮ್ಮ ಸ್ಥಾನದಲ್ಲಿದ್ದುಕೊಂಡು ಸತ್ತತ್ತ್ವಕ್ಕೆ ಪೋಷಕ ಅಥವಾ ಪುರಕಗಳಾಗಿ ವರ್ತಿಸುತ್ತವೆ. ಯಾವುದನ್ನೂ ಅಲ್ಲಗೆಳೆಯಲು ಸಾಧ್ಯವಿಲ್ಲ. ಸಣ್ಣ ದೊಡ್ಡ ಎರಡೂ ಸತ್ಯ, ವ್ಯಷ್ಟಿ ಸಮಷ್ಟಿ ಎರಡೂ ಸತ್ಯ. ಬುದ್ಧಿ ಬುದ್ಧಿಗಮ್ಯ ಎರಡೂ ಸತ್ಯ. ಹೀಗೆ ಸತ್ಯದ ಮಳಿಗೆಯಲ್ಲಿ ಅನೇಕತ್ವಕ್ಕೆ ಸ್ಥಾನವಿದೆ. ಈ ಅನೇಕತ್ವದ ಹಂತವನ್ನು ಅರಿತುಕೊಂಡು ಸಾಧಕ ಮೇಲೇರಬೇಕು. ತನ್ನತನವನ್ನು ತಾನು ಕಂಡುಕೊಳ್ಳಬೇಕು-ಎಂದು ಐಯಾಂಬ್ಲಿಕಸ್ ವಾದಿಸುತ್ತಾನೆ. ಈತನ ವಿಶ್ಲೇಷಣದ ಆಧಾರದ ಮೇಲೆ ತತ್ತ್ವಶಾಸ್ತ್ರದ ಇತಿಹಾಸದಲ್ಲಿ ತತ್ತ್ವಶಾಸ್ತ್ರಕ್ಕೂ ಮನೋವಿಜ್ಞಾನಕ್ಕೂ ಇರುವ ವ್ಯತ್ಯಾಸವನ್ನು ಕಾಣುವಂತಾಯಿತು ಎಂದು ಹಲವಾರು ಅಭಿಪ್ರಾಯಪಡುತ್ತಾರೆ.
ಐಯಾಂಬ್ಲಿಕಸ್ ಅನೇಕ ಗ್ರಂಥಗಳನ್ನು ಬರೆದಿದ್ದರೂ ಕೆಲವು ಮಾತ್ರ ಈಗ ಉಳಿದಿವೆ. ಅವುಗಳಲ್ಲಿ ಮುಖ್ಯವಾದವೆಂದರೆ-ದಿ ಮಿಸ್ಟರೀಸ್; ಲೈಫ್ ಆಫ್ ದಿ ಸೋಫಿಸ್ಟ್, ಫಿಲಾಸಫಿ ಡೆರ್ ಗ್ರೀಷನ್.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.