From Wikipedia, the free encyclopedia
ಐನೂ: ಜಪಾನಿನ ಒಂದು ಹಳೆಯ ಜನಾಂಗ. ಬಹುಶಃ ಹಿಂದೆ ಜಪಾನಿನ ಅನೇಕ ದ್ವೀಪಗಳಲ್ಲಿ ಹರಡಿದ್ದಿರಬಹುದಾದರೂ ಈಗ ಇವರು ಹಾಕ್ಕೈಡೋ, ಸ್ಯಾಕಲೀನ್, ಕೂರಿಲ್ ದ್ವೀಪಗಳಿಗೆ ಮಾತ್ರ ಸೀಮಿತರಾಗಿದ್ದಾರೆ. ಈಗಿವರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ.
アィヌ | |
---|---|
ಒಟ್ಟು ಜನಸಂಖ್ಯೆ | |
c. 25,000 | |
ಜನಸಂಖ್ಯಾ ಬಾಹುಳ್ಯದ ಪ್ರದೇಶಗಳು | |
| 16,786 or more[೧] |
| 109[೨][೩]–1,000 |
ಭಾಷೆಗಳು | |
Ainu language family (Hokkaido in Japan; historically prominent, now critically endangered); Japanese (Hokkaido dialects) or Russian (modern-day)[೪] | |
ಧರ್ಮ | |
| |
ಸಂಬಂಧಿತ ಜನಾಂಗೀಯ ಗುಂಪುಗಳು | |
|
ನೆರೆಹೊರೆಯವರೊಂದಿಗೆ ವಿವಾಹಸಂಬಂಧ ಬೆಳೆಸದಿದ್ದರೆ ಇವರ ವಂಶವೇ ನಶಿಸಿ ಹೋಗಬಹುದು. ಇವರು ಒಂದಾನೊಂದು ಕಾಲದಲ್ಲಿ ಉತ್ತರ ಏಷ್ಯಾವನ್ನೆಲ್ಲ ಆವರಿಸಿಕೊಂಡಿದ್ದ ಕಾಕಸಾಯ್ಡರ ವಂಶಜರಿರಬಹುದು. ಆಸ್ಟ್ರೇಲಿಯ-ನ್ಯೂಜಿ಼ಲೆಂಡುಗಳ ಆಸ್ಟ್ರಲಾಯ್ಡರಿಗೂ ಇವರಿಗೂ ಸಾಮ್ಯವುಂಟೆಂದು ಕೆಲವು ವಿದ್ವಾಂಸರ ಮತ.
ಐನೂಗಳು ಕುಳ್ಳರು. ಇವರ ಮೈಮೇಲೆ ದಟ್ಟ ಕೂದಲು. ಇದುವರೆಗೆ ತಿಳಿದಿರುವ ಮಟ್ಟಿಗೆ ಬೇರೆ ಯಾವ ಮಾನವಗುಂಪಿಗೂ ಇಷ್ಟೊಂದು ದಟ್ಟ ಕೂದಲಿಲ್ಲ. ಇವರ ಅಕ್ಕಪಕ್ಕಗಳಲ್ಲಿರುವ ಮಂಗೋಲಾಯ್ಡರಿಗೆ ಮೈಮೇಲೆ ಕೂದಲು ಬಲು ಕಡಿಮೆ.
ಐನೂಗಳ ಭಾಷೆಗೂ ಇತರ ಭಾಷೆಗಳಿಗೂ ಯಾವ ಹೋಲಿಕೆಯೂ ಕಾಣಿಸುವುದಿಲ್ಲ.
ಇವರ ಧರ್ಮ ಯುರೋಪ್ ಉತ್ತರ ಏಷ್ಯಾಗಳ ಪ್ರಾಚೀನ ಧರ್ಮಗಳೊಂದಿಗೆ ಹೋಲುವುದೆಂದು ಹೇಳಲಾಗಿದೆ. ಅನ್ನಾಮಿನ ಖಾ ಜನರ ರಕ್ತಗುಂಪು ಇವರದು. ಪ್ರಕೃತಿಯ ಆರಾಧನೆ, ಪಿತೃಪೂಜೆ, ಕರಡಿಯ ಬಲಿ-ಇವು ಇವರ ಕೆಲವು ಆಚಾರಗಳು. ಜಪಾನಿನ ಹೊಸ ಶಿಲಾಯುಗ ಸಂಸ್ಕೃತಿಯ ಜನರಿವರೆಂದು ಹೇಳಲು ಕೆಲವು ಆಧಾರಗಳಿವೆ. ಯುವ ಐನೂಗಳು ಜಪಾನೀ ಆಚಾರವಿಚಾರಗಳನ್ನು ತಮ್ಮ ಬಾಳಿನಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ.
ಕಡಲು ಬಳಿಯ ಪುಟ್ಟ ಹಳ್ಳಿಗಳಲ್ಲಿ ವಾಸಿಸುವ ಈ ಜನರ ಕಸಬು ಬೇಟೆ, ಮೀನುಗಾರಿಕೆ ಮುಂತಾದವು. ಈಚೆಗೆ ತೋಟಗಾರಿಕೆಯಲ್ಲೂ ಇವರು ನಿರತರಾಗಿದ್ದಾರೆ. ಗಂಡಸರು ಗಡ್ಡಧಾರಿಗಳು. ಹೆಂಗಸರು ಬಾಯ ಸುತ್ತ ಮೀಸೆಯೋಪಾದಿಯಲ್ಲಿ ಹಚ್ಚೆ ಹೊಯ್ಯಿಸಿಕೊಳ್ಳುತ್ತಾರೆ. ಮರದ ತೊಗಟೆ ಅಥವಾ ಪ್ರಾಣಿಯ ತೊಗಲು ಇವರ ಬಟ್ಟೆ. ಇದರ ಮೇಲೆ ಜ್ಯಾಮಿತಿಯ ಚಿತ್ತಾರ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.