ಏರ್ ಫೋರ್ಸ್ ಒನ್
From Wikipedia, the free encyclopedia
ಏರ್ ಫೋರ್ಸ್ ಒನ್ ಎಂಬುದು, ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಷ್ಟ್ರಾಧ್ಯಕ್ಷರು ಪ್ರಯಾಣಿಸುವ ಯಾವುದೇ ಅಮೆರಿಕಾ ಸಂಯುಕ್ತ ಸಂಸ್ಥಾನ ಏರ್ ಫೋರ್ಸ್ ವಿಮಾನದ ಅಧಿಕೃತ ವಾಯುಯಾನ ಸಂಚಾರ ನಿಯಂತ್ರಣಾ ಕರೆಯ ಸಂಕೇತವಾಗಿದೆ.[1] 1990ರಿಂದಲೂ, ಈ ರಾಷ್ಟ್ರಾಧ್ಯಕ್ಷರ ತಂಡ (ದಳ)ದಲ್ಲಿ, ವಿಶಿಷ್ಟವಾಗಿ ವಿನ್ಯಾಸವಾಗಿರುವ, ಬಹುಮಟ್ಟಿಗೆ 'ಹೇಳಿ-ಮಾಡಿಸಿದಂತಹ', 28000 ಮತ್ತು 29000ರ ಕ್ರಮಸಂಖ್ಯೆ ಹೊತ್ತ, ಏರ್ ಫೋರ್ಸ್ ಅಂಕಿತ VC-25A ಹೊಂದಿರುವ ಬೋಯಿಂಗ್ 747-200B ಸರಣಿಯ ಎರಡು ವಿಮಾನಗಳಿವೆ. ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಷ್ಟ್ರಾಧ್ಯಕ್ಷರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಮಾತ್ರ ಈ ವಿಮಾನಗಳು 'ಏರ್ ಫೋರ್ಸ್ ಒನ್' ಸಂಕೇತವನ್ನು ಹೊಂದಿದ್ದರೆ, ರಾಷ್ಟ್ರಾಧ್ಯಕ್ಷರಿಗಾಗಿಯೇ U.S. ಏರ್ ಫೊರ್ಸ್ (U.S. ವಾಯುಸೇನೆ) ಎರಡು ವಿಮಾನಗಳಲ್ಲಿ ಒಂದನ್ನು ಸಾಮಾನ್ಯವಾಗಿ ಬಳಸಿ ನಿರ್ವಹಣಾ ಕಾರ್ಯ ನಡೆಸುತ್ತದೆ. ಅಥವಾ ರಾಷ್ಟ್ರಾಧ್ಯಕ್ಷರು ಬಳಸುವ ಹೆಚ್ಚುವರಿ ವಾಯುಸೇನೆ ವಿಮಾನವೂ ಆಗಿರಬಹುದು.[2]
ಏರ್ ಫೋರ್ಸ್ ಒನ್ ಎಂಬುದು ಅಮೆರಿಕಾ ರಾಷ್ಟ್ರಾಧ್ಯಕ್ಷರ ಮತ್ತು ಅವರ ಅಧಿಕಾರದ ಪ್ರಮುಖ ಸಂಕೇತವಾಗಿದೆ.[3] ಈ ವಿಮಾನವು ವಿಶ್ವದ ಖ್ಯಾತ ವಿಮಾನಗಳಲ್ಲೊಂದು ಹಾಗೂ ಅತಿ ಹೆಚ್ಚು ಪ್ರಮಾಣದಲ್ಲಿ ಛಾಯಾಚಿತ್ರಣಕ್ಕೊಳಗಾಗುವ ವಿಮಾನವಾಗಿದೆ.[4]