![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/8/87/Wfm_area_51_landsat_geocover_2000.jpg/640px-Wfm_area_51_landsat_geocover_2000.jpg&w=640&q=50)
ಏರಿಯಾ 51
From Wikipedia, the free encyclopedia
ಏರಿಯಾ 51 ಎಂಬುದು ಪಶ್ಚಿಮ ಸಂಯುಕ್ತ ಸಂಸ್ಥಾನಗಳಲ್ಲಿನ ನೆವಡಾ ಪ್ರದೇಶದ ದಕ್ಷಿಣ ಭಾಗದಲ್ಲಿ (ವ್ಯಾಪಾರಿ ಕೇಂದ್ರವಾದ ಲಾಸ್ ವೇಗಾಸ್ ನಗರದ ಉತ್ತರ ವಾಯುವ್ಯಕ್ಕೆ 83 ಮೈಲುಗಳಷ್ಟು ದೂರವಿರುವುದು) ನೆಲೆಗೊಂಡಿರುವ ಸೇನಾ ನೆಲೆಗೆ ಇಡಲಾಗಿರುವ ಅಡ್ಡಹೆಸರು ಅಥವಾ ಉಪನಾಮ. ಗ್ರೂಮ್ ಸರೋವರದ ದಕ್ಷಿಣ ದಂಡೆಯ ಮೇಲೆ ನೆಲೆಗೊಂಡಿರುವ ಇದರ ಕೇಂದ್ರಭಾಗದಲ್ಲಿ ಬೃಹತ್ತಾದ ಒಂದು ರಹಸ್ಯ ಸೇನಾ ವಿಮಾನ ನಿಲ್ದಾಣವಿದೆ. ಪ್ರಾಯೋಗಿಕ ವಿಮಾನಗಳು ಮತ್ತು ಶಸ್ತ್ರಾಸ್ತ್ರಗಳ ವ್ಯವಸ್ಥೆಗಳ ಅಭಿವೃದ್ಧಿ ಹಾಗೂ ಪರೀಕ್ಷಾ ಕಾರ್ಯಗಳಿಗೆ ಬೆಂಬಲ ನೀಡುವುದು ಈ ನೆಲೆಯ ಪ್ರಾಥಮಿಕ ಉದ್ದೇಶ.[1][2]
Area 51 | |||
---|---|---|---|
![]() | |||
This satellite image of Area 51 shows dry Groom Lake just north of the site. | |||
IATA: none – ICAO: KXTA | |||
Summary | |||
Airport type | Military | ||
Operator | United States Air Force | ||
Location | Southern Nevada, ![]() | ||
Elevation AMSL | ೪,೪೬೨ ft / ೧,೩೬೦ m | ||
Coordinates | 37°14′06″N 115°48′40″W | ||
Runways | |||
Direction | Length | Surface | |
ft | m | ||
14L/32R | ೧೨,೦೦೦ | ೩,೬೫೮ | Asphalt |
12/30 | ೫,೪೨೦ | ೧,೬೫೨ | Asphalt |
09L/27R | ೧೧,೪೪೦ | ೩,೪೮೯ | Salt |
09R/27L | ೧೧,೪೪೦ | ೩,೪೮೯ | Salt |
03L/21R | ೧೦,೦೩೦ | ೩,೦೫೭ | Salt |
03R/21L | ೧೦,೦೩೦ | ೩,೦೫೭ | Salt |
14R/32L | ೨೩,೨೭೦ | ೭,೦೯೩ | Closed |
ಸಂಯಕ್ತ ಸಂಸ್ಥಾನಗಳ ವಾಯುಪಡೆಯ ವಿಶಾಲವಾದ ನೆವಡಾ ಪರೀಕ್ಷಾ ಮತ್ತು ತರಬೇತಿ ಶ್ರೇಣಿಪ್ರದೇಶದಲ್ಲಿ ಈ ನೆಲೆಯು ಸ್ಥಿತವಾಗಿದೆ. ನೆಲ್ಲಿಸ್ ವಾಯುಪಡೆಯ ನೆಲೆಯಲ್ಲಿರುವ 99ನೇ ವಾಯುನೆಲೆ ವಿಭಾಗದಿಂದ ಈ ಶ್ರೇಣಿಪ್ರದೇಶದ ಸೌಕರ್ಯಗಳು ನಿರ್ವಹಿಸಲ್ಪಡುತ್ತಿವೆಯಾದರೂ, ಎಡ್ವರ್ಡ್ಸ್ ವಾಯುಪಡೆ ನೆಲೆಯಲ್ಲಿನ ಏರ್ಫೋರ್ಸ್ ಫ್ಲೈಟ್ ಟೆಸ್ಟ್ ಸೆಂಟರ್ (AFFTC)ನ ಅಧೀನದಲ್ಲಿ ತರಬೇತಿ ವ್ಯವಸ್ಥೆಯು ನಡೆಯುತ್ತಿರುವಂತೆ ಕಾಣುತ್ತದೆ. ಗ್ರೂಮ್ ಸರೋವರದ [6]ನೈರುತ್ಯ ಭಾಗವನ್ನು ಆವರಿಸಿರುವ ಮೊಜಾವೆ ಮರುಭೂಮಿಯಲ್ಲಿ ನೆಲೆಗೊಂಡಿರುವ ಈ ನೆಲೆಯು ವಾಯುಪಡೆಯ ವಿಮಾನ ಪರೀಕ್ಷಾ ಕೇಂದ್ರ (ತುಕಡಿ 3) ಎಂದೇ ಗುರುತಿಸಲ್ಪಟ್ಟಿದೆ. [7][8]
ಈ ತರಬೇತಿ ಪ್ರದೇಶವನ್ನು ಇನ್ನೂ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ. ಅವುಗಳೆಂದರೆ, ಡ್ರೀಮ್ಲ್ಯಾಂಡ್ , ಪ್ಯಾರಡೈಸ್ ರಾಂಚ್ ,[3][4] ಹೋಮ್ ಬೇಸ್ , ವಾಟರ್ಟೌನ್ ಸ್ಟ್ರಿಪ್ , ಗ್ರೂಮ್ ಲೇಕ್ [5]. ಹೋಮ್ ಏರ್ಪೋರ್ಟ್ [6] ಎನ್ನುವುದು ಇದರ ತೀರಾ ಇತ್ತೀಚಿನ ಹೆಸರು. ಈ ಪ್ರದೇಶವು ನೆಲ್ಲಿಸ್ ಸೇನಾ ಕಾರ್ಯಾಚರಣೆಗಳ ಪ್ರದೇಶದ ಅಂಗವಾಗಿದೆ ಮತ್ತು ಆ ಕ್ಷೇತ್ರವನ್ನು ಸುತ್ತುವರೆದಿರುವ ನಿರ್ಬಂಧಿತ ವಾಯುಪ್ರದೇಶವನ್ನು (R-4808N[7]) ಎಂದು ಉಲ್ಲೇಖಿಸಲಾಗುತ್ತದೆ. ಈ ಪ್ರದೇಶದಲ್ಲಿನ ಸೇನಾ ವಿಮಾನ ಚಾಲಕರುಗಳಿಂದಾಗಿ ಈ ಪ್ರದೇಶವು "ದಿ ಬಾಕ್ಸ್ " ಎಂದೇ ಜನಜನಿತವಾಗಿದೆ.
ಈ ನೆಲೆಯನ್ನು ಸುತ್ತುವರೆದಿರುವ ತೀವ್ರ ಗೌಪ್ಯತೆಯನ್ನು U.S. ಸರ್ಕಾರವು ಅಲ್ಲಗಳೆಯುತ್ತಾದರೂ, ಸದರಿ ಗೌಪ್ಯತೆಯಿಂದಾಗಿ ಇದೊಂದು ಪಿತೂರಿಯ ಸಿದ್ಧಾಂತಗಳಿಗೆ ಸಂಬಂಧಿಸಿದ ನಿರಂತರ ಚರ್ಚಾವಸ್ತುವಾಗಿ ಮತ್ತು ಹಾರುವ ತಟ್ಟೆಗಳ (UFO) ಕುರಿತಾದ ಪರಂಪರಾನುಗತ ನಂಬಿಕೆಗಳ ಕೇಂದ್ರಭಾಗವಾಗಿ ಮಾರ್ಪಟ್ಟಿದೆ.[4]