From Wikipedia, the free encyclopedia
ಎಸ್.ಎಸ್.ರಾಜಮೌಳಿ ತೆಲಗು ಸಿನೆಮಾ ರಂಗದಲ್ಲಿ ಕೆಲಸ ಮಾಡುವ ನಿರ್ದೇಶಕ .ನಿರ್ದೇಶಕ ಕೆ.ರಾಘವೇಂದ್ರ ರಾವ್, ರಾಜಮೌಳಿ ಅವರನ್ನು ನಿರ್ದೇಶಕರಾಗಿ ಪರಿಚಯಿಸಿದರು. ಅವರ ಮಾರ್ಗದರ್ಶನದಲ್ಲಿ ಟೆಲಿ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ೨೦೦೧ರಲ್ಲಿ ತೆರೆಗೆ ಬಂದ ಅವರ ಮೊದಲ ಸೂಪರ್ ಹಿಟ್ ಚಿತ್ರ ತೆಲುಗಿನ ಸ್ಟೂಡೆಂಟ್ ನಂಬರ್ ೧ . ಅವರು ನಿರ್ದೇಶಿಸಿರುವ ಮಗಧೀರ ಹಾಗು ಈಗಾ ಚಲನಚಿತ್ರದ ಅತ್ಯುತ್ತಮ ದೃಶ್ಯಗಳಿಗೆ ರಾಷ್ಟ್ರಿಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ,[1].
ಕೆ.ವಿ. ವಿಜಯೇಂದ್ರ ಪ್ರಸಾದ್ ಅವರ ಪುತ್ರ.ಇವರು ಇವರು.ಪಕ್ಕಆಂಧ್ರಪ್ರದೇಶ ದವರು
ರಾಜಮೌಳಿ ಇವರು ಆಂದ್ರಪ್ರದೇಶದದಲ್ಲಿ ಇವರು ಕೆಲವ ಕೆಲವ ದಿನಗಳು ಮಾತ್ರ , ಮಾನವಿ ತಾಲೂಕು,ರಾಯಚೂರುನಲ್ಲಿ ೧೯೭೩ ಅಕ್ಟೋಬರ್ ೧೦ ರಂದು ಜನಿಸಿದರು. ಅವರು ೪ನೇಯ ತರಗತಿಯವರೆಗೆ ಕೊವ್ವೂರ್ನಲ್ಲಿ ಶಿಕ್ಷಣವನ್ನು ಪಡೆದರು. ಅವರು ಬಾಲ್ಯದಲ್ಲಿ, ತಂದೆ ಹಾಗೂ ಚಿಕ್ಕಪ್ಪಂದಿರ ನಿರ್ಮಾಣದ ಚಿತ್ರದಲ್ಲಿ ಕೃಷ್ಣನ ಪಾತ್ರದಲ್ಲಿ ಅಭಿನಯಿಸಿದರು. ಅವರು ಚಲನಚಿತ್ರ ಸಂಕಲನಕಾರ ಕೋಟಗಿರಿ ವೆಂಕಟೇಶ್ವರ ರಾವ್ಅವರ ಜೊತೆಗೆ ಸ್ವಲ್ಪ ಕಾಲ ಸಹಾಯಕ ವೃತ್ತಿಯಲ್ಲಿ ತೂಡಗಿದರು. ನಂತರ, ಅವರು ಎ.ವಿ.ಮ್ ರೆಕಾರ್ಡಿಂಗ್ ರಂಗಭೂಮಿಯಲ್ಲಿ ಕೆಲಸ ಮಾಡಿದರು. ಅನಂತರ, ಅವರು ಸುಮಾರು ಆರು ವರ್ಷಗಳ ಕಾಲ ತನ್ನ ತಂದೆಯವರಿಗೆ ಸಹಾಯಕರಾಗಿ ಕಾರ್ಯನಿರ್ವಯಿಸಿದರು. ಆ ಸಮಯದಲ್ಲಿ, ಅವರು ಹಲವಾರು ನಿರ್ದೇಶಕರಿಗೆ ತಮ್ಮ ಕಥೆಗಳನ್ನು ನಿರೂಪಣೆ ಮಾಡುತ್ತಿದ್ದರು. ಎಸ್ ಎಸ್ ರಾಜಮೌಳಿ ಮತ್ತು ಜೂನಿಯರ್ ಎನ್.ಟಿ.ಆರ್ ಟಾಲಿವುಡ್ ಉದ್ಯಮದಲ್ಲಿ ಅತ್ಯುತ್ತಮ ಸ್ನೇಹಿತರು.
ಎಸ್ಎಸ್ ರಾಜಮೌಳಿಯವರ ಕುಟುಂಬದ ಅನೇಕರು ತೆಲುಗು ಚಲನಚಿತ್ರದಲ್ಲಿ ಖ್ಯಾತಿ ಹೊಂದಿದ್ದಾರೆ. ಅವರು ನಿರ್ದೇಶಕ ಹಾಗೂ ಚಿತ್ರಕಥಾ ಕೆ.ವಿ. ವಿಜಯೇಂದ್ರ ಪ್ರಸಾದ್ ಅವರ ಪುತ್ರ. ಅವರು ಹಲವಾರು ವರ್ಷಗಳಿಂದ ಚಿತ್ರಕಥೆಗಾರರಾಗಿ ಕೆಲಸ ಮಾಡಿದ್ದಾರೆ. ರಾಜಮೌಳಿಯವರ ಚಿಕ್ಕಪ್ಪ ಶಿವ ದತ್ತ ಸಹ ಕೆಲವು ಚಿತ್ರಗಳಿಗೆ ಸಲಹೆಗಳನ್ನು ನೀಡಿದ್ದಾರೆ. ಎಂ.ಎಂ ಕೀರವಾಣಿ, ಕಲ್ಯಾಣಿ ಮಲ್ಲಿಕ್, ಎಸ್.ಎಸ್ ನಾಗ ಮತ್ತು ಎಸ್.ಎಸ್ ಕಂಚಿ ಅವರ ಸೋದರರು.
ಎಸ್. ಎಸ್.ರಾಜಮೌಳಿಯವರು ರಮ ಅವರನ್ನು ವಿವಾಹವಾಗಿದ್ದಾರೆ. ಅವರ ಮಕ್ಕಳು ಎಸ್.ಎಸ್.ಕಾರ್ತಿಕೇಯ ಮತ್ತು ಎಸ್.ಎಸ್.ಮಯೋಕ್ಯ. ರಮ ರಾಜಮೌಳಿ ಅವರು ರಾಜಮೌಳಿ ಚಿತ್ರಗಳಿಗೆ ವಸ್ತ್ರವಿನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ.
ಎಸ್.ಎಸ್. ರಾಜಮೌಳಿ, ಕೆ.ರಾಘವೇಂದ್ರ ರಾವ್ ಅವರ ಮಾರ್ಗದರ್ಶನದಲ್ಲಿ ಶಾಂತಿ ನಿವಾಸಂ ಎಂಬ ತೆಲುಗು ಧಾರಾವಹಿಯನ್ನು ನಿರ್ದೇಶಿಸುವುದರ ಮೂಲಕ ಈನಾಡು ಚಾನಲ್ ದೂರದರ್ಶನದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.ಅವರ ಮೊದಲ ಚಿತ್ರ ಸ್ಟೂಡೆಂಟ್ ನಂ 1.ಭಾರಿ ಯಶಸ್ಸನ್ನು ಪಡೆಯಿತು. "ಈಗ" ಚಿತ್ರ ಅವರ ವೃತ್ತಿಜೀವನದಲ್ಲಿ ಅತ್ಯಂತ ಸವಾಲಿನ ಹಾಗೂ ಅತ್ಯಂತ ಲಾಭದಾಯಕ ಚಿತ್ರವಾಗಿದೆ. ಅವರು ಪ್ರಸ್ತುತ ಬಾಹುಬಲಿ ಚಿತ್ರವು ಕೂಡ ಬಹಳ ಹೆಸರನ್ನು ಮಾಡಿತು.[2]
ವರ್ಷ | ಚಲನಚಿತ್ರ | ನಟರು | ಸ್ಟುಡಿಯೋ |
---|---|---|---|
೨೦೦೧ | ಸ್ಟೂಡೆಂಟ್ ನಂಬರ್ 1 | ||
೨೦೦೩ | ಸಿಂಹಾದ್ರಿ | ||
೨೦೦೪ | ಸೈ | ||
೨೦೦೫ | ಛತ್ರಪತಿ | ||
೨೦೦೬ | ವಿಕ್ರಮಾರ್ಕುಡು | ||
೨೦೦೭ | ಯಮದೊಂಗ | ||
೨೦೦೯ | ಮಗಧೀರ | ರಾಮ್ ಚರಣ್ | ಗೀತಾ ಆರ್ಟ್ಸ್ |
೨೦೧೦ | ಮರ್ಯಾದಾ ರಾಮಣ್ಣ | ||
೨೦೧೧ | ರಾಜಣ್ಣ | ||
೨೦೧೨ | ಈಗ | ಸುದೀಪ್ ನಾಣಿ | ವಾರಾಹಿ ಚಲನಚಿತ್ರಮ್ |
೨೦೧೫ | ಬಾಹುಬಲಿ | ಪ್ರಭಾಸ್ ರಾಣ ದಗ್ಗುಬಾಟಿ | ಅರ್ಕ ಮೀಡಿಯಾ ವರ್ಕ್ಸ್ |
೨೦೧೭ | ಬಾಹುಬಲಿ೨:ದಿ ಕನ್ಕ್ಲೂಜನ್ | ಪ್ರಭಾಸ್ ರಾಣ ದಗ್ಗುಬಾಟಿ | ಅರ್ಕ ಮೀಡಿಯಾ ವರ್ಕ್ಸ್ |
೨೦೨೨ | ರೌದ್ರಂ ರಣಂ ರುಧಿರಂ | ಜ.ಎನ್.ಟಿ.ಆರ್ ರಾಮ್ ಚರಣ್ ಅಜಯ್ ದೇವಗನ್ | ಡಿವಿವಿ ದಾನಯ್ಯ ಎಂಟರ್ಟೇನ್ಮೆಂಟ್ಸ್ |
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು - ಉತ್ತಮ ತೆಲುಗು ಚಿತ್ರ "ಈಗ"
ನಂದಿ ಪ್ರಶಸ್ತಿಗಳು - ಉತ್ತಮ ನಿರ್ದೇಶಕ "ಮಗಧೀರ"
ದಕ್ಷಿಣ ಭಾರತೀಯ ಫಿಲಂಫೇರ್ ಪ್ರಶಸ್ತಿ - ಉತ್ತಮ ತೆಲುಗು ನಿರ್ದೇಶಕ "ಮಗಧೀರ"
ಸಿನಿ"ಮಾ" ಪ್ರಶಸ್ತಿಗಳು - ಉತ್ತಮ ನಿರ್ದೇಶಕ "ಮಗಧೀರ"
ಇತರ ಪ್ರಶಸ್ತಿಗಳು - ಸ್ಟಾರ್ ವರ್ಲ್ಡ್ ಇಂಡಿಯಾ - ಉತ್ತಮ ಚಿತ್ರ "ಈಗ"
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.