ಎಸ್.ಎಚ್. ರಾಝಾ
From Wikipedia, the free encyclopedia
ಸೈಯದ್ ಹೈದರ್ ರಾಝಾ ಅಲಿಯಾಸ್ ಎಸ್.ಎಚ್. ರಾಝಾ ,(ಜನನ ೨೨ ಫೆಬ್ರವರಿ ೧೯೨೨)[1] ಒಬ್ಬ ಶ್ರೇಷ್ಠ ಭಾರತೀಯ ಮೂಲದ ಕಲಾವಿದರೆನಿಸಿದ್ದಾರೆ. ಇವರು ೧೯೫೦ರಿಂದಲೂ ಫ್ರಾನ್ಸ್ ನಲ್ಲಿ ವಾಸಿಸುವುದರ ಜೊತೆಗೆ ಅಲ್ಲೇ ಕೆಲಸ ಮಾಡುತ್ತಿದ್ದಾರೆ; ಆದರೆ ಭಾರತದೊಂದಿಗೆ ಒಂದು ಬಲವಾದ ನಂಟನ್ನೂ ಉಳಿಸಿಕೊಂಡಿದ್ದಾರೆ.
S.H.Raza (ಎಸ್.ಎಚ್.ರಝಾ) | |
![]() ಸೈಯದ್ ಹೈದರ್ ರಝ | |
ಹುಟ್ಟು | ೧೯೨೨|೦೨|೨೨ |
ರಾಷ್ಟ್ರೀಯತೆ | ಭಾರತೀಯ |
ಕ್ಷೇತ್ರ | ಪೇಂಟರ್ |
ಪುರಸ್ಕಾರಗಳು | ಪದ್ಮಭೂಷಣ ೨೦೦೭ ಫೆಲೋಶಿಪ್ ಆಫ್ ದ ಲಲಿತ್ ಕಲಾ ಅಕಾಡೆಮಿ೧೯೮೧ |
ಅವರ ಕೃತಿಗಳು ಮುಖ್ಯವಾಗಿ ತೈಲವರ್ಣದೊಂದಿಗೆ ಅಥವಾ ಅಕ್ರಿಲಿಕ್ ನಿಂದ ಅಮೂರ್ತವಾಗಿರುತ್ತವೆ. ಜೊತೆಗೆ ವರ್ಣಗಳ ಸಮೃದ್ಧ ಬಳಕೆ, ಭಾರತೀಯ ಕಲ್ಪನೆಯ ಬ್ರಹ್ಮಾಂಡ ಹಾಗು ತತ್ತ್ವಶಾಸ್ತ್ರದ ಪ್ರತಿಮಾರೂಪಗಳೊಂದಿಗೆ ಸಾದೃಶ್ಯವಾಗಿರುತ್ತವೆ.[2][3] ಇವರಿಗೆ ೧೯೮೧ರಲ್ಲಿ ಪದ್ಮಶ್ರೀ ಹಾಗು ಲಲಿತಕಲಾ ಅಕ್ಯಾಡೆಮಿಯ ಫೆಲೋಶಿಪ್,[4] ಅದಲ್ಲದೇ ೨೦೦೭ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.[5]
ಅವರ ೮೮ ರ ಇಳಿ ವಯಸ್ಸಿನಲ್ಲಿ 'ಸೌರಾಷ್ಟ್ರ' ಎಂಬ ಮೂಲ ಕೃತಿಯು ಕ್ರಿಸ್ಟಿ ಹರಾಜಿನಲ್ಲಿ ೧೬.೪೨ ಕೋಟಿಗೆ ($೩,೪೮೬,೯೬೫) ಮಾರಾಟ ಕಂಡಿತು; ಹೀಗೆ ಜೂನ್ ೧೦ ರ ೨೦೧೦ರ ಹೊತ್ತಿಗೆ ನಡೆದ ಸಮೀಕ್ಷೆಯಂತೆ ಇವರು ಭಾರತದ ಅತ್ಯಮೂಲ್ಯ ಆಧುನಿಕ ಕಲಾವಿದರೆನಿಸಿಕೊಂಡಿದ್ದಾರೆ.