ಸಂಕೋಚನದ ವಿರುದ್ಧ ಬಲ From Wikipedia, the free encyclopedia
ಭೌತಶಾಸ್ತ್ರದಲ್ಲಿ, ಎಳೆತವನ್ನು (ಕರ್ಷಣ) ದಾರ, ತಂತಿ, ಸರಪಳಿ, ಅಥವಾ ಹೋಲುವ ಏಕ ಆಯಾಮದ ಅಖಂಡ ವಸ್ತು, ಅಥವಾ ಕೋಲು, ಆಸರೆಕಟ್ಟಿನ ಸದಸ್ಯ, ಅಥವಾ ಹೋಲುವ ಮೂರು ಆಯಾಮದ ವಸ್ತುವಿನ ಪ್ರತಿ ತುದಿಯ ಮೂಲಕ ಅಕ್ಷೀಯವಾಗಿ ಪ್ರಸಾರವಾಗುವ ಎಳೆಯುವ ಬಲವೆಂದು ವಿವರಿಸಬಹುದು; ಎಳೆತವನ್ನು ಮೇಲೆ ಹೇಳಿದ ಘಟಕಗಳ ಪ್ರತಿ ತುದಿಯಲ್ಲೂ ಕಾರ್ಯಮಾಡುವ ಬಲಗಳ ಕ್ರಿಯೆ-ಪ್ರತಿಕ್ರಿಯೆ ಜೋಡಿ ಎಂದೂ ವಿವರಿಸಬಹುದು.[1] ಎಳೆತವು ಸಂಕೋಚನದ ವಿರುದ್ಧಾರ್ಥಕ ಪದವಾಗಿರಬಹುದು.
ಪರಮಾಣು ಸ್ತರದಲ್ಲಿ, ಪರಮಾಣುಗಳು ಅಥವಾ ಅಣುಗಳನ್ನು ಪರಸ್ಪರವಾಗಿ ಬೇರೆಬೇರೆ ಮಾಡಿ ಎಳೆಯಲಾದಾಗ ಅವು ಅಂತಸ್ಥ ಶಕ್ತಿಯನ್ನು ಪಡೆಯುತ್ತವೆ ಆದರೆ ಒಂದು ಮರುಸ್ಥಾಪನ ಬಲವು ಆಗಲೂ ಇರುತ್ತದೆ. ಈ ಮರುಸ್ಥಾಪನ ಬಲವು ಎಳೆತವೆಂದು ಕರೆಯಲ್ಪಡುವ ಬಲವನ್ನು ಸೃಷ್ಟಿಸಬಹುದು. ಅಂತಹ ಎಳೆತ/ಕರ್ಷಣವನ್ನು ಹೊಂದಿರುವ ತಂತಿ ಅಥವಾ ದಂಡದ ಪ್ರತಿ ತುದಿಯು, ಆ ತಂತಿ/ದಂಡವನ್ನು ಅದರ ವಿಶ್ರಾಂತ ಲಂಬಕ್ಕೆ ತರಲು ಅದು ಜೋಡಣೆಗೊಂಡಿರುವ ವಸ್ತುವನ್ನು ಎಳೆಯಬಹುದು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.