![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/a/a4/Eminem_performing_live_at_dj_hero_party.jpg/640px-Eminem_performing_live_at_dj_hero_party.jpg&w=640&q=50)
ಎಮಿನೆಮ್
From Wikipedia, the free encyclopedia
ಎಮಿನೆಮ್ ಎಂದು ರಂಗ ಕ್ಷೇತ್ರದ ಹೆಸರಿನಿಂದ ಗುರುತಿಸಲ್ಪಡುವ ಮಾರ್ಶಲ್ ಬ್ರೂಸ್ ಮ್ಯಾಥರ್ಸ್ III (ಜನಿಸಿದ್ದು ಅಕ್ಟೋಬರ್ 17, 1972ರಂದು ),[1] ಎಮಿನೆಮ್ ಎಂದೇ ಬಹುಜನರಿಗೆ ಗೊತ್ತಿರುವ ಈತ ಒಬ್ಬ ಅಮೇರಿಕನ್ ರಾಪರ್, ಧ್ವನಿ ಮುದ್ರಿಕೆಗಳ ನಿರ್ಮಾಪಕ, ಗೀತ ರಚನೆಕಾರ ಮತ್ತು ನಟ. ಗ್ರಾಮಿ ಅವಾರ್ಡ್ ಫಾರ್ ಬೆಸ್ಟ್ ರಾಪ್ ಆಲ್ಬಮ್ ಎಂದು ತನ್ನ ಪ್ರಥಮ ಆಲ್ಬಮ್ ದಿ ಸ್ಲಿಮ್ ಶೇಡಿ LP ಗೆ ಪಡೆದ ಎಮಿನೆಮ್ 1999ರಲ್ಲಿ ಅತ್ಯಂತ ವೇಗವಾಗಿ ಜನಪ್ರಿಯಗೊಂಡ. ನಂತರ ಬಂದ ದಿ ಮಾರ್ಶಲ್ ಮ್ಯಾಥೆರ್ಸ್ LP ಎಂಬ ಆಲ್ಬಮ್ ಚರಿತ್ರೆಯಲ್ಲೇ ಅತ್ಯಂತ ವೇಗವಾಗಿ ಮಾರಾಟಗೊಂಡ ಹಿಪ್ ಹಾಪ್ ಆಲ್ಬಮ್ ಅದಾಯಿತು.[2] ತನ್ನ ಸ್ವಂತದ್ದಾದ ಶೇಡಿ ರೆಕಾರ್ಡ್ಸ್ ಜೊತೆಗೆ ಇದು ಜನಪ್ರಿಯತೆಯ ತುತ್ತತುದಿಗೆ ಎಮಿನೆಮ್ ಅನ್ನು ಕೊಂಡೊಯ್ದಿತು ಮತ್ತು ಅವನ ತಂಡದ D12 ಯೋಜನೆಯನ್ನು ಮುಖ್ಯವಾಹಿನಿಯಲ್ಲಿ ಗುರುತಿಸಲ್ಪಡುವುದಕ್ಕೆ ಅವಕಾಶವಾಯಿತು. ದಿ ಮಾರ್ಶಲ್ ಮ್ಯಾಥೆರ್ಸ್ LP ಮತ್ತವನ ಮೂರನೆಯ ಆಲ್ಬಮ್ ದಿ ಎಮಿನೆಮ್ ಶೋ ಕೂಡ ಗ್ರಾಮಿ ಪ್ರಶಸ್ತಿಯನ್ನು ಗೆದ್ದುಕೊಂಡಿತು, ಇದರಿಂದಾಗಿ ಎಮಿನೆಮ್ ಸತತ ಮೂರು LPಗಳಿಗೂ ಬೆಸ್ಟ್ ರಾಪ್ ಆಲ್ಬಮ್ ಪ್ರಶಸ್ತಿ ಪಡೆದ ಏಕೈಕ ಕಲಾವಿದನಾದ. 2010ರಲ್ಲಿ ರಿಲ್ಯಾಪ್ಸ್ ಎನ್ನುವ ತನ್ನ ಮತ್ತೊಂದು ಆಲ್ಬಮ್ಗೆ ಪ್ರಶಸ್ತಿಯನ್ನು ಪಡೆಯುವ ಮುಖಾಂತರ 11 ಗ್ರಾಮಿಯನ್ನು ಎಮಿನೆಮ್ ತನ್ನ ವೃತ್ತಿ ಬದುಕಿನಲ್ಲಿ ಪಡೆದಂತಾಯಿತು. 2002ರಲ್ಲಿ ತಾನೂ ಮುಖ್ಯ ನಟನಾಗಿ ನಟಿಸಿದ ಚಿತ್ರ 8 ಮೈಲ್ ಗೆ ಹಾಡಿದ "ಲೂಸ್ ಯುವರ್ಸೆಲ್ಫ್" ಹಾಡಿಗೆ ಅಕಾಡೆಮಿ ಅವಾರ್ಡ್ ಫಾರ್ ಬೆಸ್ಟ್ ಒರಿಜಿನಲ್ ಸಾಂಗ್ ಪ್ರಶಸ್ತಿ ಗೆದ್ದುಕೊಂಡ. "ಲೂಸ್ ಯುವರ್ಸೆಲ್ಫ್" ಎಂಬ ಏಕವ್ಯಕ್ತಿ ಹಾಡು(solo) ಅತ್ಯಂತ ದೀರ್ಘಕಾಲ #1 ಹಿಪ್-ಹಾಪ್ ಹಾಡಾಗಿ ಚಾಲ್ತಿಯಲ್ಲಿ ಉಳಿಯುತ್ತದೆ.[3] 2005ರಲ್ಲಿ ಪ್ರವಾಸದ ನಂತರ ಎಮಿನೆಮ್ ಹೈಯಾಟಸ್ (ವಿರಾಮ) ಗೆ ಹೋದ. 2004ರ ಎನ್ಕೋರ್ ನಂತರ ಮೊದಲ ಆಲ್ಬಮ್ ರಿಲ್ಯಾಪ್ಸ್ ಅನ್ನು ಮೇ 15, 2009ರಂದು ಬಿಡುಗಡೆ ಮಾಡಿದ. ಎಮಿನೆಮ್ ದಶಕದ ಅತ್ಯಂತ ಉತ್ತಮ ಮಾರಾಟದ ಕಲಾವಿದ,[4] ಮತ್ತು ಇವತ್ತಿಗೆ ವಿಶ್ವದಾದ್ಯಂತ 80 ದಶಲಕ್ಷ ಆಲ್ಬಮ್ ಗಳಿಗೂ ಹೆಚ್ಚು ಮಾರಾಟ ಆಗಿ, ಬೆಸ್ಟ್-ಸೆಲ್ಲಿಂಗ್ ಮ್ಯೂಸಿಕ್ ಆರ್ಟಿಸ್ಟ್ ಇನ್ ದಿ ವರ್ಳ್ಡ್ ಎನ್ನಿಸಿಕೊಂಡಿದ್ದಾನೆ.[5] ಎಮಿನೆಮ್ ಅನ್ನು ರೋಲ್ಲಿಂಗ್ ಸ್ಟೋನ್ ಪತ್ರಿಕೆಯವರು, ಸಾರ್ವಕಾಲಿಕ 100 ಶ್ರೇಷ್ಠ ಕಲಾವಿದರಲ್ಲಿ ಒಬ್ಬ ಎಂದು ಶ್ರೇಣೀಕರಿಸಿದ್ದಾರೆ.[6] ವೈಬ್ ಪತ್ರಿಕೆಯವರೂ ಸಹಾ ಎಮಿನೆಮ್ ಅನ್ನು ಎಂದಿಗೂ ಉತ್ತಮ ರಾಪರ್ ಎಂದು ಹೆಸರಿಸಿದ್ದಾರೆ.[7] D12 ಕಾರ್ಯವನ್ನು ಸೇರಿಸಿ ಎಮಿನೆಮ್ ಎಂಟು #1 ಆಲ್ಬಮ್ಗಳನ್ನು ಬಿಲ್ಬೋರ್ಡ್ ಟಾಪ್ 200 ಪಟ್ಟಿಯಲ್ಲಿ ಮತ್ತು ವಿಶ್ವದಾದ್ಯಂತ 12 ಪ್ರಥಮ ಏಕವ್ಯಕ್ತಿ ಹಾಡುಗಳ ಪಟ್ಟಿಯಲ್ಲಿ ಸೇರಿಸುವ ಸಾಧನೆಯನ್ನು ಮಾಡಿದ್ದಾನೆ. ಬಿಲ್ಬೋರ್ಡ್ ಮ್ಯಾಗಝೈನ್ ನವರಿಂದ ದಶಕದ ಉತ್ತಮ ಕಲಾವಿದ ಎಂದು ಡಿಸೆಂಬರ್ 2009ರಲ್ಲಿ ಕರೆಯಿಸಿಕೊಂಡಿದ್ದಾನೆ. ಬಿಲ್ ಬೋರ್ಡ್ ಪ್ರಕಾರ ಅತೀ ಹೆಚ್ಚು ಮಾರಾಟವಾಗಿರುವ ಶ್ರೇಷ್ಠ ಐದು ಆಲ್ಬಗಳಲ್ಲಿ ಎಮಿನೆಮ್ದೇ ಎರಡು ಆಲ್ಬಮ್ಗಳಿವೆ.
ಎಮಿನೆಮ್ | |
---|---|
![]() Eminem performing live at the "DJ Hero" Party in Los Angeles | |
ಹಿನ್ನೆಲೆ ಮಾಹಿತಿ | |
ಜನ್ಮನಾಮ | Marshall Bruce Mathers III |
ಅಡ್ಡಹೆಸರು | Slim Shady |
ಮೂಲಸ್ಥಳ | Detroit, Michigan, U.S. |
ಸಂಗೀತ ಶೈಲಿ | Hip hop |
ವೃತ್ತಿ | Rapper, record producer, actor, songwriter |
ಸಕ್ರಿಯ ವರ್ಷಗಳು | 1995–present |
Labels | Mashin' Duck Records Web Ent. Interscope Records Aftermath Ent. Shady Records Game Recordings |
Associated acts | D12, Bad Meets Evil, Dr. Dre, 50 Cent |
ಅಧೀಕೃತ ಜಾಲತಾಣ | www.eminem.com |