ಎಡ್ವರ್ಡ್ ಸರೋವರ
From Wikipedia, the free encyclopedia
From Wikipedia, the free encyclopedia
ಎಡ್ವರ್ಡ್ ಸರೋವರವು ಆಫ್ರಿಕಾದ ಮಹಾಸರೋವರಗಳ ಪೈಕಿ ಅತ್ಯಂತ ಚಿಕ್ಕದು. ಆಫ್ರಿಕಾದ ಬಿರುಕು ಕಣಿವೆಯ ಪಶ್ಚಿಮ ಭಾಗದಲ್ಲಿರುವ ಈ ಸರೋವರವು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಉಗಾಂಡ ರಾಷ್ಟ್ರಗಳ ಗಡಿಯಲ್ಲಿದೆ. ಈ ಸರಸ್ಸು ವಿಷುವದ್ರೇಖೆಗೆ ಹೊಂದಿಕೊಂಡಿದೆ. ಎಡ್ವರ್ಡ್ ಸರೋವರದ ಉದ್ದ ೭೭ ಕಿ.ಮೀ. ಮತ್ತು ಗರಿಷ್ಠ ಅಗಲ ೪೦ ಕಿ.ಮೀ.ಗಳು. ೨೩೨೫ ಚದರ ಕಿ.ಮೀ. ವಿಸ್ತಾರವಾಗಿರುವ ಈ ಸರಸ್ಸಿನ ಸರಾಸರಿ ಆಳ ೧೭ ಮೀ. ಆಗಿದ್ದು ಗರಿಷ್ಠ ಆಳ ೧೧೨ ಮೀ. ಆಗಿದೆ. ನೀರಿನ ಒಟ್ಟು ಪ್ರಮಾಣ ೩೯.೫ ಘನ ಕಿ.ಮೀ.ಗಳಷ್ಟಿದೆ.
ಎಡ್ವರ್ಡ್ ಸರೋವರ | |
---|---|
ನಿರ್ದೇಶಾಂಕಗಳು | 0°20′S 29°36′E |
ಪ್ರಾಥಮಿಕ ಒಳಹರಿವು | Nyamugasani Ishasha Rutshuru Rwindi Ntungwe Lubilia |
ಪ್ರಾಥಮಿಕ ಹೊರಹರಿವುಗಳು | ಸೆಮ್ಲಿಕಿ ನದಿ |
ಸಂಗ್ರಹಣಾ ಪ್ರದೇಶ | 12,096 km2 (4,670 sq mi) |
ಜಲಾನಯನ ಪ್ರದೇಶ ದೇಶಗಳು | Democratic Republic of Congo ಉಗಾಂಡ |
ಗರಿಷ್ಠ ಉದ್ದ | 77 km (48 mi) |
ಗರಿಷ್ಠ ಅಗಲ | 40 km (25 mi) |
ಮೇಲ್ಮೈ ಪ್ರದೇಶ | 2,325 km2 (898 sq mi) |
ಸರಾಸರಿ ಆಳ | 17 m (56 ft) |
ಗರಿಷ್ಠ ಆಳ | 112 m (367 ft) |
ನೀರಿನ ಪ್ರಮಾಣ | 39.5 km3 (9.5 cu mi) |
ಮೇಲ್ಮೈ ಎತ್ತರ | 912 m (2,992 ft) |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.