![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/8/89/IAF_Tejas_full_size_%252832941198511%2529.jpg/640px-IAF_Tejas_full_size_%252832941198511%2529.jpg&w=640&q=50)
ಎಚ್ಎಎಲ್ ತೇಜಸ್
From Wikipedia, the free encyclopedia
ಎಚ್ಎಎಲ್ ತೇಜಸ್ ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ (HAL) ಏರ್ಕ್ರಾಫ್ಟ್ ರಿಸರ್ಚ್ ಮತ್ತು ಡಿಸೈನ್ ಸೆಂಟರ್ (ARDC) ಸಹಯೋಗದೊಂದಿಗೆ ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ADA) ವಿನ್ಯಾಸಗೊಳಿಸಿದ ಭಾರತೀಯ ಮಲ್ಟಿರೋಲ್ ಲೈಟ್ ಫೈಟರ್ ಆಗಿದೆ. ಇದು ಲೈಟ್ ಕಾಂಬ್ಯಾಟ್ ಏರ್ಕ್ರಾಫ್ಟ್ (LCA) ಕಾರ್ಯಕ್ರಮದಿಂದ ಬಂದಿದೆ, ಇದು 1980 ರ ದಶಕದಿಂದ ಭಾರತದ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಳೆಯದಾದ MiG-21 ಯುದ್ಧವಿಮಾನಗಳನ್ನು ಬದಲಿಸುವ ಸಲುವಾಗಿ ಪ್ರಾರಂಭವಾಯಿತು.
2003 ರಲ್ಲಿ, LCA ಅನ್ನು ಅಧಿಕೃತವಾಗಿ "ತೇಜಸ್" ಎಂದು ಹೆಸರಿಸಲಾಯಿತು. ಸಮಕಾಲೀನ ಸೂಪರ್ಸಾನಿಕ್ ಯುದ್ಧ ವಿಮಾನದ ವರ್ಗದಲ್ಲಿ ಇದು ಚಿಕ್ಕದಾಗಿದೆ ಮತ್ತು ಹಗುರವಾಗಿದೆ.
ತೇಜಸ್ | |
---|---|
![]() | |
Tejas in flight | |
Role | Multirole light fighter |
National origin | ಭಾರತ |
Manufacturer | ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ |
Design group | Aeronautical Development Agency, Aircraft Research and Design Centre (HAL), Defence Research and Development Organisation, National Aerospace Laboratories |
First flight | 4 January 2001[1] |
Introduction | 17 January 2015[2] |
Status | In service[3] |
Primary user | ಭಾರತೀಯ ವಾಯುಸೇನೆ |
Produced | 2001–present |
Number built | 33[N 1] |
Program cost | ₹೧೧,೦೯೬ ಕೋಟಿ (ಯುಎಸ್$೨.೪೬ ಶತಕೋಟಿ)(LCA total in March 2020)[6] |
Unit cost | |
Developed into | HAL Tejas Mk2 |
ಎಚ್.ಎ.ಎಲ್ ತೇಜಸ್ (ಸಂಸ್ಕೃತದಲ್ಲಿ ತೇಜಸ್ ಅಂದರೆ "ಪ್ರಕಾಶಮಾನವಾದ" ಎಂದು, ಇದು ಭಾರತದಲ್ಲಿ ತಯಾರಾಗುತ್ತಿರುವ ಎರಡು ರೀತಿಯಲ್ಲಿ ಉಪಯೋಗಿಸಬಹುದಾದ ಹಗುರವಾದ ಕದನ/ಯುದ್ದ ವಿಮಾನ. ಇದಕ್ಕೆ ಬಾಲವಿಲ್ಲ,[10] ಒಂದು ಎಂಜಿನ್ನಿಂದ ನಡೆಯುವಂತೆ ಡೆಲ್ಟಾ ರೆಕ್ಕೆಗಳನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನು ಮೂಲತಃ ಲೈಟ್ ಕಂಬ್ಯಾಟ್ ಏರ್ಕ್ರಾಫ್ಟ್ (ಎಲ್ಸಿಎ) ಎನ್ನುವರು, ಈ ಹೆಸರು ನಿರಂತರ ಬಳಕೆಯಲ್ಲಿ ಜನಪ್ರಿಯವಾಯಿತು- ೦೪ ಮೇ ೨೦೦೩ರಂದು ಆಗಿನ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ ಯವರಿಂದ ಈ ವಿಮಾನವು "ತೇಜಸ್ "[11] ಎಂದು ಅಧಿಕೃತವಾಗಿ ನಾಮಕರಣಗೊಂಡಿತು.[12] ತೇಜಸ್ ನ ಸೀಮಿತ ಸರಣಿಯ ಉತ್ಪಾದನೆ ೨೦೦೭ರಲ್ಲಿ ಪ್ರಾರಂಭವಾಯಿತು. ಎರಡು ಆಸನದ ಟ್ರೇನರ್ ವೇರಿಯಂಟ್ ನ್ನು ಸಹ ವಿಕಾಸ ಗೊಳಿಸಲಾಗುತ್ತಿದೆ (ನವೆಂಬರ್ ೨೦೦೮ರಲ್ಲಿ ಉತ್ಪಾದನೆಯ ಕೆಲಸ ಮುಗಿದಿದೆ), ಏಕೆಂದರೆ ಅದು ನೇವಲ್ ವೇರಿಯಂಟ್ನಂತೆ ಭಾರತೀಯ ನೌಕಾಪಡೆಯ ವಿಮಾನ ವಾಹಕಗಳಿಂದ ಕಾರ್ಯ ನಿರ್ವಹಿಸಲು ಯೋಗ್ಯವಾಗಿದೆ. ೨೦೦ ಏಕ-ಆಸನದ ಮತ್ತು ೨೦ ಎರಡು-ಆಸನದ ರೂಪಾಂತರ ಟ್ರೇನರ್ಗಳನ್ನೂ ಹೊಂದುವ ಅವಶ್ಯಕತೆ ಇದೆ ಎಂದು ಐಎಎಫ್ ಹೇಳಿದೆ, ಭಾರತೀಯ ನೌಕಾಪಡೆ ಅದರ ಸೀ ಹರಿಯರ್ ಎಫ್ ಆರ್ ಎಸ್.51 ಮತ್ತು ಹರಿಯರ್ ಟಿ.60 ಗಳನ್ನು ಬದಲಾಯಿಸಲು ೪೦ ಏಕ-ಆಸನಗಳವರೆಗೆ ಆರ್ಡರ್ ಕೊಡಬಹುದು.[13] ಎಲ್ ಸಿಎ ನೇವಲ್ ವೇರಿಯಂಟ್ ನ್ನು ೨೦೦೯ರಲ್ಲಿ ಉಡಾವಣೆ ಮಾಡಲು ನಿರೀಕ್ಷಿಸಲಾಗಿದೆ.[14] ವಿಮಾನವನ್ನು ೨೦೧೦ರ ಕೊನೆಯಲ್ಲಿ ಅಥವಾ ೨೦೧೧ರ ಪ್ರಾರಂಭದಲ್ಲಿ ಭಾರತೀಯ ವಾಯು ಸೇನೆಯ ಸ್ವಾಧೀನಕ್ಕೆ ಕೊಡಲಾಗುವುದು ಎಂದು ಇತ್ತೀಚಿನ ಬೆಳವಣಿಗೆಗಳು ತಿಳಿಸುತ್ತವೆ.[15] ೨೦೦೯ರಲ್ಲಿ ಸಮುದ್ರದಲ್ಲಿ ಇದರ ಗೋವಾದ ಪರೀಕ್ಷಾ ಉಡಾವಣೆಯ ಸಮಯದಲ್ಲಿ, ತೇಜಸ್ ಘಂಟೆಗೆ ೧.೩೫೦ ಕಿಲೋಮೀಟರ್ ಗಿಂತ ಅಧಿಕ ವೇಗವನ್ನು ದಾಖಲಿಸಿದೆ, ಇದರಿಂದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅವರಿಂದ ಸ್ಥಳೀಯವಾಗಿ ತಯಾರಾಗುತ್ತಿರುವ ಮೊದಲ ಧ್ವನಿ ವೇಗಾಧಿಕ (ಸೂಪರ್ಸೋನಾರ್) ಕದನ ವಿಮಾನ ಇದಾಗಿದೆ.[16]