ಊಟದ ಶಿಷ್ಟಾಚಾರ
From Wikipedia, the free encyclopedia
ಊಟದ ಶಿಷ್ಟಾಚಾರಗಳು ತಿನ್ನುವ ಸಮಯದಲ್ಲಿ ಅನುಸರಿಸುವಂತಹ ಸಭ್ಯಾಚಾರದ ನಿಯಮಗಳು, ಇವುಗಳಲ್ಲಿ ಪಾತ್ರೆಗಳನ್ನು ಉಪಯೋಗಿಸುವ ಕ್ರಮವೂ ಒಳ ಗೊಂಡಿರಬಹುದು. ವಿವಿಧ ಸಂಸ್ಕೃತಿಗಳು ವಿವಿಧ ರೀತಿಯ ಊಟದ ಶಿಷ್ಟಾಚಾರ ನಿಯಮಗಳನ್ನು ಹೊಂದಿರುತ್ತವೆ. ಹಲವು ಊಟದ ಶಿಷ್ಟಾಚಾರಗಳು ಅಭ್ಯಾಸಗಳಿಂದ ಕೂಡಿ ರುತ್ತವೆ. ಉದಾಹರಣೆಗೆ, ಸಾಮಾನ್ಯವಾಗಿ ಮೇಜಿನ ಮೇಲೆ ಮೊಣಕೈಗಳನ್ನು ಊರಿ ಊಟಮಾಡುವುದು ಅಸಭ್ಯವೆನಿಸುತ್ತದೆ.[1] ಪ್ರತಿಯೊಂದು ಕುಟುಂಬ ಅಥವಾ ಪಂಗಡಗಳು ತಮ್ಮದೇ ಆದ ರೀತಿ-ರಿವಾಜು, ಸಂಸ್ಕಾರ-ಸಂಸ್ಕೃತಿ, ನೀತಿ-ನಿಯಮಗಳನ್ನು ಅನುಸರಿಸುತ್ತವೆ.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (June 2006) |