From Wikipedia, the free encyclopedia
ಉಪಗ್ರಹ ವಾಹಕವೆಂದರೆ ಉಪಗ್ರಹವನ್ನು ಅಂತರಿಕ್ಷಕ್ಕೆ ಉಡ್ಡಯಣ (ಹೊತ್ತಯ್ಯುವ) ವಾಹಕ ರಾಕೆಟ್ ಎಂದರ್ಥ. ಪ್ರಪಂಚದಲ್ಲಿ ಅಮೇರಿಕ, ರಷ್ಯಾ, ಫ್ರಾನ್ಸ್,ಚೀನಾ,ಜಪಾನ್ ಮತ್ತು ಭಾರತ ದೇಶಗಳು ಮಾತ್ರ ಉಪಗ್ರಹ ಉಡ್ಡಯಣ ವಾಹಕಗಳನ್ನು ಹೊಂದಿವೆ. ಇವುಗಳ ಸಾಮರ್ಥ್ಯ ಹೆಚ್ಚು-ಕಮ್ಮಿ ಯಿರುತ್ತವೆ. ಸಾಮರ್ಥ್ಯವೆಂದರೆ ಕೊಂಡೊಯ್ಯಬಲ್ಲ ಉಪಗ್ರಹದ ತೂಕ ಮತ್ತು ಕಕ್ಷೆ .ಸಾಮರ್ಥ್ಯದ ಆಧಾರದ ಮೇಲೆ ಉಡ್ಡಯಣ ವಾಹಕಗಳನ್ನು ವಿಂಗಡಿಸಬಹುದು. [1]
ಇಸ್ರೋ ಸಂಸ್ಥೆಯು ಅಭಿವೃದ್ದಿಪಡಿಸಿರುವ ಉಡ್ಡಯಣ ವಾಹಕಗಳಲ್ಲಿ ಘನ ಮತ್ತು ದ್ರವ ಇಂಧನಗಳನ್ನು ಬಳಸುವ ವಿವಿಧ ತಂತ್ರಜ್ಞಾನಗಳನ್ನೊಳಗೊಂಡಿವೆ. ತಾನು ಅಭಿವೃದ್ದಿಪಡಿಸಿರುವ ದ್ರವ ಇಂಧನ ಬಳಸುವ ಇಂಜಿನ್ಗೆ (ಯಂತ್ರಕ್ಕೆ) ವಿಕಾಸ್ ಇಂಜಿನ್ ಎಂದು ಹೆಸರಿಸಿದೆ. ಇದು UDMH/UH-25 ಇಂದನವನ್ನು ಮತ್ತು N2O4 (ಸಾರಜನಕದ ಟೆಟ್ರಾ ಆಕ್ಸ್ಯ್ ಡ್) ದಹಕ (ಆಮ್ಲಜನಕವನ್ನು ಹೊಂದಿರುವ ವಸ್ತು) ವನ್ನು ಉಪಯೋಗಿಸುತ್ತದೆ. ಈ ಎರಡೂ ಇಂಧನಗಳು ವಿಷಯುಕ್ತ ರಾಸಾಯನಿಕಗಳಾಗಿವೆ. ಇವುಗಳನ್ನು ಬಹಳ ಜಾಗರುಕತೆಯಿಂದ ಉಪಯೋಗಿಸಲಾಗುತ್ತದೆ.[2]
ದೇಶ | ರಾಕೇಟ್ |
---|---|
ಪ್ರಾನ್ಸ್ | ಏರಿಯನ್-೫ |
ಅಮೇರಿಕ | ಡೆಲ್ಟಾ |
ಚೀನಾ | ಲಾಂಗ್ ಮಾರ್ಚ್ |
ರಷ್ಯಾ | ಪ್ರೋಟಾನ್ |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.