![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/3/3c/Glutathione-3D-vdW.png/640px-Glutathione-3D-vdW.png&w=640&q=50)
ಉತ್ಕರ್ಷಣ ನಿರೋಧಕ
From Wikipedia, the free encyclopedia
ಇತರ ಪರಮಾಣುಗಳ ಉತ್ಕರ್ಷಣವನ್ನು ನಿಧಾನಿಸುವ ಅಥವಾ ನಿಯಂತ್ರಿಸಲು ಸಮರ್ಥವಾದ ಒಂದು ಪರಮಾಣುವನ್ನು ಉತ್ಕರ್ಷಣ ನಿರೋಧಕ (ಆಯ್೦ಟಿಆಕ್ಸಿಡೆಂಟ್) ಎನ್ನುತ್ತಾರೆ. ಉತ್ಕರ್ಷಣ ಒಂದು ರಾಸಾಯನಿಕ ಪ್ರಕ್ರಿಯೆಯಾಗಿದ್ದು, ಅದು ವಿದ್ಯುತ್ಕಣಗಳನ್ನು ಒಂದು ವಸ್ತುವಿನಿಂದ ಒಂದು ಆಕ್ಸಿಡೀಕರಣ ಏಜೆಂಟ್ಗೆ ವರ್ಗಾಯಿಸುತ್ತದೆ. ಆಕ್ಸಿಡೀಕರಣ ಪ್ರಕ್ರಿಯೆಗಳು ಮುಕ್ತ ಮೂಲಸ್ವರೂಪಗಳನ್ನು ಉತ್ಪಾದಿಸಲಬಹುದಾಗಿದ್ದು, ಅದು ಸರಪಳಿ ಪ್ರಕ್ರಿಯೆಗಳನ್ನು ಆರಂಭಿಸುವ ಮೂಲಕ ಕೋಶಗಳಿಗೆ ಹಾನಿಮಾಡಬಹುದು. ಉತ್ಕರ್ಷಣ ನಿರೋಧಕಗಳು ಈ ಸರಪಳಿ ಪ್ರಕ್ರಿಯೆಗಳನ್ನು ಮುಕ್ತ ಮೂಲಸ್ವರೂಪಗಳನ್ನು ತೆಗೆಯುವುದರ ಮೂಲಕ ಕೊನೆಗೊಳಿಸುತ್ತವೆ, ಮತ್ತು ಅವುಗಳು ಸ್ವತಹ ಆಕ್ಸಿಡೀಕರಣವಾಗುವುದರೊಂದಿಗೆ ಇತರ ಆಕ್ಸಿಡೀಕರಣ ಪ್ರಕ್ರಿಯೆಗಳನ್ನು ತಡೆಯುತ್ತವೆ. ಇದರ ಫಲಿತಾಂಶವಾಗಿ, ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿ ಥಿಯೊಲ್ಗಳು, ಸ್ಕರ್ವಿಹರ ಆಮ್ಲ ಅಥವಾ ಪಾಲಿಫೆನೊಲ್ಗಳಂತಹ ಅಪಕರ್ಷಣಕಾರಿಗಳಾಗಿ ಬದಲಾಗುತ್ತವೆ.[1] ಆಕ್ಸಿಡೀಕರಣ ಪ್ರಕ್ರಿಯೆಗಳು ಜೀವಕ್ಕೆ ನಿರ್ಣಾಯಕವಾದರೂ, ಅವುಗಳು ಹಾನಿಕಾರಕ ಸಹ ಆಗಿರುತ್ತದೆ; ಆದ್ದರಿಂದ ಸಸ್ಯಗಳು ಮತ್ತು ಪ್ರಾಣಿಗಳು ಆನೇಕ ವಿಧಗಳ ಉತ್ಕರ್ಷಣ ನಿರೋಧಕಗಳ ಸಂಯುಕ್ತ ವ್ಯವಸ್ಥೆಯನ್ನು ಪಾಲಿಸಿಕೊಂಡು ಬರುತ್ತವೆ. ಅವುಗಳೆಂದರೆ ಗ್ಲುಟಾಥಿಯೋನ್, ವಿಟಮಿನ್ C, ಮತ್ತು ವಿಟಮಿನ್ E. ಹಾಗೆಯೇ ಕಿಣ್ವಗಳಾದ ಕೆಟಲೇಸ್, ಸೂಪರಾಕ್ಸೈಡ್ ಡಿಸ್ಮುರ್ಟೇಸ್ ಮತ್ತು ವಿಭಿನ್ನ ಪೆರಾಕ್ಸಿಡೇಸ್ಗಳು. ಕಡಿಮೆ ಮಟ್ಟದ ಉತ್ಕರ್ಷಣ ನಿರೋಧಕಗಳು, ಅಥವಾ ಆಕ್ಸಿಡೀಕರಣ ಕಿಣ್ವಗಳ ವಿರೋಧ/ಪ್ರತಿಬಂಧ, ಉತ್ಕರ್ಷಣಶೀಲ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಕೋಶಗಳನ್ನು ಹಾನಿ ಮಾಡಬಹುದು ಅಥವಾ ಸಾಯಿಸಬಹುದು. ಉತ್ಕರ್ಷಣಶೀಲ ಒತ್ತಡವು ಹಲವು ಮಾನವ ಖಾಯಿಲೆಗಳ ಒಂದು ಮುಖ್ಯ ಭಾಗವಾಗಿರಬಹುದು. ಉತ್ಕರ್ಷಣ ನಿರೋಧಕದ ಉಪಯೋಗವನ್ನು ಔಷಧ ಶಾಸ್ತ್ರದಲ್ಲಿ ಆಳವಾಗಿ ಅಧ್ಯಯನ ಮಾಡಲಾಗಿದೆ. ನಿರ್ದಿಷ್ಟವಾಗಿ ಲಕ್ವ ಮತ್ತು ನರಗಳು ನಾಶವಾಗುವ ಖಾಯಿಲೆಗಳ ಚಿಕಿತ್ಸೆಗಳ ಬಗ್ಗೆ. ಆದರೆ, ಉತ್ಕರ್ಷಣಶೀಲ ಒತ್ತಡವು ಖಾಯಿಲೆಗಳಿಗೆ ಕಾರಣ ಅಥವಾ ಫಲ ಹೌದೋ ಅಲ್ಲವೋ ಎಂದು ತಿಳಿದಿಲ್ಲ. ಆರೋಗ್ಯವನ್ನು ಕಾಪಾಡಿಕೊಳ್ಳುವ ಮತ್ತು ಖಾಯಿಲೆಗಳಾದ ಕ್ಯಾನ್ಸರ್ ಮತ್ತು ಪರಧಮನಿ ಹೃದಯ ಕಾಯಿಲೆಗಳನ್ನು ನಿಯಂತ್ರಿಸುವ ಭರವಸೆಯಿಂದ ಉತ್ಕರ್ಷಣ ನಿರೋಧಕಗಳನ್ನು ಆಹಾರ ಕ್ರಮಗಳ ಪೂರಕಗಳಲ್ಲಿ ಘಟಕಗಳ ರೀತಿಯಲ್ಲಿ ವ್ಯಾಪಕವಾಗಿ ಬಳಸಲಾಗಿದೆ. ಉತ್ಕರ್ಷಣ ನಿರೋಧಕ ಪೂರಕಗಳು ಆರೋಗ್ಯವನ್ನು ಉತ್ತಮಗೊಳಿಸಬಹುದು ಎಂದು ಆರಂಭಿಕ ಅಧ್ಯಯನಗಳು ಸೂಚಿಸಿವೆಯಾದರೂ, ನಂತರ ವಿಸ್ತಾರವಾದ ಚಿಕಿತ್ಸಾಲಯ ಪ್ರಯೋಗಗಳು ಯಾವುದೇ ಪ್ರಯೋಜನವನ್ನು ಪತ್ತೆಹಚ್ಚಲಿಲ್ಲ, ಬದಲಾಗಿ ಅಧಿಕ ಪೂರೈಕೆ ಕೆಡುಕುಂಟು ಮಾಡಬಹುದು ಎಂದು ಸೂಚಿಸುತ್ತದೆ.[2] ಔಷಧಿಯಲ್ಲಿ ಸ್ವಾಭಾವಿಕ ಉತ್ಕರ್ಷಣ ನಿರೋಧಕಗಳ ಈ ಉಪಯೋಗಗಳ ಜೊತೆಗೆ, ಈ ಸಂಯುಕ್ತಗಳು ಹಲವು ಕೈಗಾರಿಕಾ ಉಪಯೋಗಗಳನ್ನು ಹೊಂದಿವೆ. ಅವುಗಳು ಆಹಾರ ಮತ್ತು ಪ್ರಸಾಧನಗಳಲ್ಲಿ ಸಂರಕ್ಷಕಗಳು ಮತ್ತು ರಬ್ಬರ್ ಮತ್ತು ಗ್ಯಾಸೋಲಿನ್ ಕೆಡದಂತೆ ತಡೆಯುತ್ತದೆ.
![Thumb image](http://upload.wikimedia.org/wikipedia/commons/thumb/3/3c/Glutathione-3D-vdW.png/640px-Glutathione-3D-vdW.png)