From Wikipedia, the free encyclopedia
ಈಸ್ಟರ್ ಕ್ರೈಸ್ತಧರ್ಮೀಯರ ಹಬ್ಬ. ಈಸ್ಟರ್ ಕ್ರೈಸ್ತ ಮತೀಯರ ಮುಖ್ಯ ಹಬ್ಬ. ಕ್ರಿಸ್ತನ ಪುನರುತ್ಥಾನದ ವಾರ್ಷಿಕ ಸ್ಮರಣೆಗಾಗಿ ಇದನ್ನು ಆಚರಿಸುತ್ತಾರೆ. ಹಬ್ಬ ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ 22ರಿಂದ ಏಪ್ರಿಲ್ 25ರ ಒಳಗೆ ಬರುತ್ತದೆ. ಹಬ್ಬಕ್ಕೆ ಮುನ್ನ 40 ದಿನಗಳು ಉಪವಾಸ ಮಾಡುತ್ತಾರೆ. ಶುಭ ಶುಕ್ರವಾರದ ಅನಂತರ ಬರುವ ಭಾನುವಾರವೇ ಈಸ್ಟರ್ ಹಬ್ಬ. ಆ ದಿನ ಮೇಣದಬತ್ತಿಗಳನ್ನು ಹಚ್ಚಿ, ಸಂತೋಷದಿಂದ ನಲಿಯುತ್ತಾರೆ. ವಿವಿಧ ರೀತಿಯಲ್ಲಿ ಅಲಂಕರಣಗೊಂಡ ಮೊಟ್ಟೆಗಳನ್ನು ಪರಸ್ಪರ ವಿನಿಮಯ ಮಾಡುವುದು ಒಂದು ರೂಢಿ.
ಹಬ್ಬಕ್ಕೆ ಹಿಂದಿನ ನಲವತ್ತು ದಿನಗಳ ವ್ರತೋಪವಾಸಗಳಿಗೆ (ಲೆಂಟ್) ಕ್ರೈಸ್ತರಲ್ಲಿ ಹೆಚ್ಚಿನ ಪ್ರಾಮುಖ್ಯವಿದೆ. ಲೆಂಟ್ ಎಂದರೆ ಇಂಗ್ಲಿಷ್ನಲ್ಲಿ ವಸಂತವೆಂದು ಅರ್ಥ. ಈ ಕಟ್ಟಳೆ ಅದೇ ಋತುವಿನಲ್ಲಿ ಬರುತ್ತದೆ. ಈ ವ್ರತ ಬಹಳ ಪ್ರಾಚೀನವಾದುದು. ಕ್ರಿಸ್ತ ತನ್ನ ಬಹಿರಂಗ ಜೀವನವನ್ನು ಆರಂಭಿಸುವುದಕ್ಕೆ ಮುನ್ನ ನಲವತ್ತು ದಿನಗಳು ಜಪ, ಧ್ಯಾನ, ಉಪವಾಸಗಳಲ್ಲಿ ಕಳೆದಿದೆನೆಂಬ ಹೊಸ ಒಡಂಬಡಿಕೆಯ ವರದಿಯೇ ಈ ಸಂಪ್ರದಾಯಕ್ಕೆ ಮುಖ್ಯ ಹಿನ್ನಲೆ. ಈ ಅವಧಿಯಲ್ಲಿ ಕ್ರೈಸ್ತರು ಪ್ರಾಯಶ್ಚಿತ್ತ ಮನೋಭಾವದಿಂದ ಉಪವಾಸ, ದೇಹದಂಡನೆ, ಮಾಂಸಾಹಾರ ವರ್ಜನೆ ಇತ್ಯಾದಿಗಳನ್ನು ಕೈಕೊಳ್ಳಬೇಕೆಂದು ರೋಮನ್ ಚರ್ಚ್ ಬೋಧಿಸುತ್ತದೆ. ಪ್ರಾಚೀನ ಕಾಲದಲ್ಲಿ ಈ ವ್ರತದ ವಿಧಿಗಳು ತುಂಬ ಕಟ್ಟುನಿಟ್ಟಾಗಿದ್ದವು; ಇತ್ತೀಚೆಗೆ ಆಧುನಿಕ ಸನ್ನಿವೇಶಗಳಿಗೆ ಹೊಂದಿಕೊಳ್ಳುವಂತೆ, ಅವನ್ನು ಸಡಿಲಿಸಲಾಗಿದೆ. ಈಗ ಉಪವಾಸ ಕೇವಲ ವಿಭೂತಿ ಬುಧವಾರ (ಆಷ್ ವೆಡ್ನೆಸ್ಡೆ) ಮತ್ತು ಶುಭ ಶುಕ್ರವಾರಗಳಿಗಷ್ಟೇ (ಗುಡ್ಫ್ರೈಡೆ) ಸೀಮಿತವಾಗಿದೆ. ಈ ವ್ರತದ ಅವಧಿಯ ಕೊನೆಯ ವಾರವನ್ನು ಪವಿತ್ರವಾರವೆಂದು ಪರಿಗಣಿಸಲಾಗಿದೆ.ಈಸ್ಟರ್ ಕುರಿತು ತಿಳಿಯುವುದಕ್ಕೂ ಮುನ್ನ ತಿಳಿಯಬೇಕಾದ ಮತ್ತೊಂದು ಮುಖ್ಯವಾದ ದಿನವೆಂದರೆ ಗುಡ್ ಫ್ರೈಡೆ ಇದು ಸೃಷ್ಟಿ ಡ್ರ್ಯಾಗನ್ ಸೃಷ್ಟಿ ಕೊಲ್ಲುವ ಮೂಲಕ ಹಾಲಿ ಜಾರ್ಜ್ ಸೃಷ್ಟಿಸಿದೆ ಮುಖ್ಯ ಸೃಷ್ಟಿಯ ಕಾಸ್ಮಿಕ್ ಮ್ಯಾನ್ ಇದು ಒಳಗೆ ಸೃಷ್ಟಿಸಿದೆ ದೇವರ ಜನ್ಮ ನೀಡುವ ಮಹಿಳೆ ಮತ್ತು ಗಂಡು ಮ್ಯಾನ್ ಮತ್ತು ಸ್ತ್ರೀ ವುಮನ್ ಮಕ್ಕಳನ್ನು ಸೃಷ್ಟಿಸುತ್ತದೆ ಮಹಿಳೆ ಗಿಫ್ಟ್ ಸೂರ್ಯಾಸ್ತದ ಆಗಮನವು ಚಂದ್ರನ ಕತ್ತಲೆಯ ರಾತ್ರಿ ಮತ್ತು ದೇಹದ ತ್ಯಾಗ ಆತ್ಮಹತ್ಯೆ ಆತ್ಮಹತ್ಯೆಗೆ ಪುರುಷ ಮತ್ತು ಹೆಣ್ಣುಮಕ್ಕಳು ಮತ್ತು ಗಾಡ್ ಜಾರ್ಜಿಯೊ ಸನ್ - ಮೂನ್ ಮಾನವರ ಆತ್ಮದ ಮತ್ತು ನಿದ್ರೆ ನಲ್ಲಿ ವಾಸಿಸುತ್ತಿದ್ದಾರೆ ಮತ್ತು ಪ್ರಕೃತಿಯಿಂದ ಮತ್ತು ಪರಿಸರದಿಂದ ಸಂವಹನ ನಡೆಸುತ್ತಾರೆ ಮತ್ತು ಮಾನವರ ಮತ್ತು ಇತರ ಪ್ರಾಣಿಗಳ ಜೀವಿಗಳ ನಡುವಿನ ಇತರ ಆಯಾಮಗಳಲ್ಲಿ ಆತ್ಮವನ್ನು ಸುತ್ತಾಡುತ್ತಾರೆ ಮತ್ತು ಸೂರ್ಯನ ಬೆಳಗಿನ ದಿನದ ಮುಂಜಾನೆ ಎಚ್ಚರಗೊಳ್ಳುವುದು. ಜೀವನ ನಾವು ನಮ್ಮ ದಿನಗಳನ್ನು ಹೊಂದಿರುವವರಾಗಿದ್ದೇವೆ ನಾವು ದೇವರ ಜಾರ್ಜ್ ಸನ್ - ಮೂನ್.
ಈಸ್ಟರ್ ಹಬ್ಬಕ್ಕೂ ಮುಂಚೆ ಬರುವ ಗುಡ್ ಫ್ರೈಡೆ ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರಿಗೂ ಅನ್ವಯಿಸುವಂಥದ್ದು. ಕಾರಣ ಹಿಂದಿನಿಂದಲೂ ಪಾಪಪ್ರಾಯಶ್ಚಿ ತ್ತಕ್ಕಾಗಿ ಒಂದು ಪ್ರಾಣಿಯನ್ನು ಬಲಿ ಕೊಡುವ ಪದ್ಧತಿ ಇಸ್ರೇಲ್ ಜನಾಂಗದಲ್ಲಿ ರೂಢಿಯಲ್ಲಿತ್ತು. ಆದರೆ ಮಾನವನ ಪಾಪಗಳಿಗೆ ಕೇವಲ ಒಂದು ಪ್ರಾಣಿಯ ರಕ್ತ ಮಾತ್ರ ಸಾಲದು. ಅದಕ್ಕೆ ಪರಿಶುದ್ಧವಾದ ರಕ್ತ ಸುರಿಯಬೇಕಿತ್ತು. ಅದೇ ತಂದೆಯಾದ ದೇವರ ಚಿತ್ತವಾಗಿತ್ತು. ಹಾಗೆ ತಂದೆಯ ಚಿತ್ತವನ್ನು ನೆರವೇರಿಸಲೆಂದೇ ದೇವರ ಒಬ್ಬನೇ ಮಗನಾದ ಯೇಸುಕ್ರಿಸ್ತನು ಭೂಮಿಗೆ ಮನುಷ್ಯಕುಮಾರನಾಗಿ ಬಂದನು. ತಂದೆಯಾದ ದೇವರ ಚಿತ್ತವನ್ನು ನೆರವೇರಿಸಲೆಂದೇ ತನ್ನ ಪರಿಶುದ್ಧವಾದ ರಕ್ತವನ್ನು ಕಲ್ವಾರಿ ಶಿಲುಬೆಯಲ್ಲಿ ಸುರಿಸಿ ತನ್ನನ್ನು ಮರಣಕ್ಕೆ ಒಪ್ಪಿಸಿದನು. ಅಂದು ನಡೆದ ಈ ಕಾರ್ಯದಿಂದ ಮನುಷ್ಯ ಪಾಪದಿಂದ ವಿಮೋಚನೆ ಹೊಂದಿದ್ದಾನೆ. ಅಂದರೆ ಯಾರ್ಯಾರು ಯೇಸು ಮಾಡಿದ ಈ ವಿಶೇಷ ಕಾರ್ಯವನ್ನು ನಂಬುತ್ತಾರೋ ಅವರೆಲ್ಲರೂ ಪಾಪಗಳಿಂದ ವಿಮೋಚಿಸಲ್ಪಟ್ಟು ದೇವರಿಗೆ ಮಕ್ಕಳಾಗುವ ಅಧಿಕಾರವನ್ನು ಯೇಸುಕ್ರಿಸ್ತನು ಕೊಟ್ಟಿದ್ದಾನೆ. ನಿಜವಾಗಿ ಆತನು ಶಿಲುಬೆಗೆ ಏರಿಸಲ್ಪಟ್ಟಿದ್ದರಿಂದಲೇ ಮನುಷ್ಯರ ಪಾಪವಿಮೋಚನೆಯಾಯಿತು. ಆದ್ದರಿಂದಲೇ ಈ ದಿನವನ್ನು ಗುಡ್ ಫ್ರೈಡೆ (ಶುಭ ಶುಕ್ರವಾರ) ಎನ್ನಲಾಗಿದೆ.
ತಂದೆಯಾದ ದೇವರ ಒಬ್ಬನೇ ಮಗನಾದ ಯೇಸು ಕ್ರಿಸ್ತನು ಮನುಷ್ಯರೊಂದಿಗೆ ಸದಾ ಕಾಲ ಜೀವಿಸುವುದಕ್ಕಾಗಿ ಪುನರುತ್ಥಾನ ಹೊಂದಿ ಬಂದ ದಿನವಾಗಿದೆ. ದೇವರಾದ ಯೇಸು ಕ್ರಿಸ್ತನನ್ನು ಶಿಲುಬೆಗೆ ಹಾಕಿದ ದಿನ ದೇಹವನ್ನು ಗುಹೆಯಲ್ಲಿ ನಿರ್ಮಿಸಿದ ಸಮಾಧಿಯಲ್ಲಿರಿಸಲಾಗಿತ್ತು, ಆದರೆ ಇಂದು ಖಾಲಿ ಸಮಾಧಿಯನ್ನು ಕಾಣಬಹುದು ಕಾರಣ ಯೇಸು ಮರಣವನ್ನು ಜಯಿಸಿ ಎದ್ದುಬಂದ ಯೂದಾ ರಾಜಸಿಂಹ. ಮರಣವು ಯೇಸುಕ್ರಿಸ್ತನನ್ನು ಕೊಲ್ಲಲಿಲ್ಲ, ಬದಲಾಗಿ ಯೇಸುಕ್ರಿಸ್ತನು ಮರಣವನ್ನು ಕೊಂದನು. ಅಂದರೆ ಮೂರು ದಿನಗಳ ಕಾಲ ಸಮಾಧಿಯಲ್ಲಿದ್ದ ಯೇಸುಕ್ರಿಸ್ತನು ತನ್ನ ತಂದೆಯಾದ ದೇವರ ಪ್ರಭಾವದಿಂದ ಎದ್ದುಬಂದನು. ಏಕೆಂದರೆ ಯೇಸುಕ್ರಿಸ್ತನ ದೇಹವನ್ನು ತಂದೆಯಾದ ದೇವರು ಪರಲೋಕದಲ್ಲಿಯೇ ಉಂಟು ಮಾಡಿದ್ದನು ಹಾಗೂ ಲೋಕಪಾಪಗಳನ್ನು ಹೊತ್ತುಕೊಂಡು ಹೋಗುವ ದೇವರ ಕುರಿಮರಿಯನ್ನಾಗಿ ಭೂಮಿಗೆ ಕಳುಹಿಸಿದ್ದನು. ಯೇಸುಕ್ರಿಸ್ತನು ತಂದೆ ವಹಿಸಿದ ಕಾರ್ಯವನ್ನು ಶಿಲುಬೆಯಲ್ಲಿ ಸಂಪೂರ್ಣ ಮಾಡಿದ ನಂತರ ಲೋಕಪಾಪವನ್ನು ತನ್ನೊಂದಿಗೆ ಸಮಾಧಿ ಮಾಡಿ ಪುನರುತ್ಥಾನ ಶಕ್ತಿಯೊಂದಿಗೆ ಎದ್ದು ಬಂದನು. ಯಾರ್ಯಾರು ಈ ಸಂಗತಿಗಳನ್ನು ಹೃದಯದಲ್ಲಿ ನಂಬಿ ಯೇಸುಕ್ರಿಸ್ತನನ್ನು ಅಂಗೀಕರಿಸುತ್ತಾರೋ ಅವರೇ ದೇವರ ಮಕ್ಕಳು. ಅವರನ್ನೇ ನಿಜವಾದ ಅರ್ಥದಲ್ಲಿ ಕ್ರೈಸ್ತರು ಎನ್ನಲಾಗುತ್ತದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.