ಇಡುಕ್ಕಿ ಜಿಲ್ಲೆ
ಭಾರತದ ಕೇರಳ ರಾಜ್ಯದ ಒಂದು ಜಿಲ್ಲೆ From Wikipedia, the free encyclopedia
ಭಾರತದ ಕೇರಳ ರಾಜ್ಯದ ಒಂದು ಜಿಲ್ಲೆ From Wikipedia, the free encyclopedia
ಇಡುಕ್ಕಿ (ಮಲಯಾಳಂ:ഇടുക്കി) ಇದು ಭಾರತದ ಕೇರಳ ರಾಜ್ಯದ 14 ಜಿಲ್ಲೆಗಳಲ್ಲಿ ಒಂದಾಗಿದೆ. ಇಡುಕ್ಕಿ ಜಿಲ್ಲೆ ಎರಡು ಪುರಸಭೆ ಪಟ್ಟಣಗಳನ್ನು ಒಳಗೊಂಡಿದೆ - ಕಟ್ಟಪ್ಪನ ಮತ್ತು ತೊಡುಪುಳ. ಜಿಲ್ಲೆ ಪ್ರಸ್ತುತ ಐದು ತಾಲ್ಲೂಕುಗಳನ್ನು ಒಳಗೊಂಡಿದೆ.[3][4]
ಇಡುಕ್ಕಿ ಜಿಲ್ಲೆ ഇടുക്കി ജില്ല Idukki District | |
---|---|
Nickname: ಕೇರಳದ ಮಸಾಲೆ ಉದ್ಯಾನ | |
Coordinates: 9.85°N 76.94°E | |
ದೇಶ | ಭಾರತ |
ರಾಜ್ಯ | ಕೇರಳ |
Area | |
• Total | ೪,೩೫೮ km೨ (೧,೬೮೩ sq mi) |
Elevation | ೧,೨೦೦ m (೩,೯೦೦ ft) |
Population (2018)[1] | |
• Total | ೧೦,೯೩,೧೫೬ |
• Density | ೨೫೧/km೨ (೬೫೦/sq mi) |
ಭಾಷೆಗಳು | |
• ಅಧಿಕೃತ | ಮಲಯಾಳಂ, ಇಂಗ್ಲಿಷ್[2] |
Time zone | UTC+5:30 (ಭಾರತದ ನಿರ್ದಿಷ್ಟ ಕಾಲಮಾನ) |
Website | www |
2018 ರಲ್ಲಿ, ಕೇರಳದಲ್ಲಿ 100 ವರ್ಷಗಳಲ್ಲಿ ಅತ್ಯಂತ ಭೀಕರವಾದ ಪ್ರವಾಹ ಸಂಭವಿಸಿತ್ತು, ಇದರಲ್ಲಿ ಇಡುಕ್ಕಿ ಜಿಲ್ಲೆ ಹೆಚ್ಚು ಹಾನಿಗೊಳಗಾಗಿತ್ತು. ಜಿಲ್ಲೆಯ ಹೆಚ್ಚಿನ ಭೂಪ್ರದೇಶವು ಪಶ್ಚಿಮ ಘಟ್ಟಗಳಲ್ಲಿದೆ ಮತ್ತು ಹೆಚ್ಚಿನ ಭಾಗವು ಅರಣ್ಯದಿಂದ ಆವೃತವಾಗಿದೆ.
ಇಡುಕ್ಕಿ ಜಿಲ್ಲೆಯು ಕಡಿದಾದ ಪರ್ವತ ಪ್ರದೇಶ, ಹಲವಾರು ನದಿ ಕಣಿವೆಗಳು ಮತ್ತು ಆಳವಾದ ಕಮರಿಗಳನ್ನು ಹೊಂದಿರುವ ಎತ್ತರದ ಪ್ರಸ್ಥಭೂಮಿಯನ್ನು ರೂಪಿಸುತ್ತದೆ.[5] ಜಿಲ್ಲೆಯ ಸಂಪೂರ್ಣ ಉತ್ತರ ಭಾಗವು ಜಿಲ್ಲೆಯ ಉಳಿದ ಭಾಗಗಳಿಗಿಂತ ಎತ್ತರದ ಉಪ ಪ್ರಸ್ಥಭೂಮಿಯನ್ನು ರೂಪಿಸುತ್ತದೆ, ಈ ಪ್ರದೇಶವು ಆನಮುಡಿಯಂತಹ ಅತಿ ಎತ್ತರದ ಶಿಖರಗಳನ್ನು ಒಳಗೊಂಡಿದೆ.
ಡಿಜಿಟಲ್ ಇಂಡಿಯಾ ಅಭಿಯಾನದ ಭಾಗವಾಗಿ ಇಡುಕ್ಕಿ ಜಿಲ್ಲೆಯು ಭಾರತದಲ್ಲಿ ಮೊದಲ ಬಾರಿಗೆ ಸೂಪರ್-ಫಾಸ್ಟ್ ಬ್ರಾಡ್ ಬ್ಯಾಂಡ್ ಸಿಸ್ಟಮ್ಗೆ ಸಂಪರ್ಕ ಪಡೆದಿದೆ ಇದು ಇಡೀ ದೇಶದಲ್ಲಿ ಬಿಎಸ್ಎನ್ಎಲ್ 4ಜಿ ಪಡೆಯುವಲ್ಲಿ ಮೊದಲನೆಯದು, ವೊಡಾಫೋನ್ ಐಡಿಯಾ ಲಿಮಿಟೆಡ್, ಜಿಯೋ ಮತ್ತು ಭಾರ್ತಿ ಏರ್ಟೆಲ್ ಸೇರಿದಂತೆ ಜಿಲ್ಲೆಯಲ್ಲಿ 4ಜಿ ಆಪರೇಟರ್ಗಳ ಸಂಖ್ಯೆಯನ್ನು ನಾಲ್ಕಕ್ಕೆ ತೆಗೆದುಕೊಂಡಿತು.
ಇಡುಕ್ಕಿಯಲ್ಲಿನ ಸಂಸ್ಕೃತಿಯು ಮಿಶ್ರಿತವಾಗಿದೆ ಏಕೆಂದರೆ ಇದು ಕೇರಳದ ಇತರ ಭಾಗಗಳಿಂದ ವಲಸೆ ಬಂದ ಜನರು ಮತ್ತು ಸ್ಥಳೀಯ ಬುಡಕಟ್ಟು ಜನರನ್ನು ಒಳಗೊಂಡಿದೆ . ಹೆಚ್ಚಿನ ಸಂಖ್ಯೆಯ ಬುಡಕಟ್ಟು ಜನಸಂಖ್ಯೆಯ ಉಪಸ್ಥಿತಿಯು ಇಡುಕ್ಕಿ ಜಿಲ್ಲೆಗೆ ವಿಶಿಷ್ಟವಾಗಿದೆ. ಇಡುಕ್ಕಿಯ ಕಟ್ಟಪ್ಪನ ಬಳಿಯಿರುವ ಕೋವಿಲ್ಮಲಾ, ಭಾರತದಲ್ಲಿ ಇನ್ನೂ ಆಳುತ್ತಿರುವ ಬುಡಕಟ್ಟು ರಾಜರಲ್ಲಿ ಒಬ್ಬರಾದ ಕೋವಿಲ್ಮಲ ರಾಜ ಮನ್ನನ್ ಅವರ ನೆಲೆಯಾಗಿದೆ. ಕೋವಿಲ್ಮಲಾ ಮನ್ನನ್ ಸಮುದಾಯದ ಪ್ರಧಾನ ಕಛೇರಿಯಾಗಿದ್ದು, ಕೆಲವು ಪದ್ಧತಿಗಳು, ಸಂಪ್ರದಾಯಗಳು ಮತ್ತು ಆಡಳಿತದ ಸ್ವರೂಪವನ್ನು ಸಂರಕ್ಷಿಸುತ್ತದೆ ಮತ್ತು ಅವರನ್ನು ಒಂದು ಅನನ್ಯ ಬುಡಕಟ್ಟು ಘಟಕವನ್ನಾಗಿ ಮಾಡುತ್ತದೆ.[6]
ಕೇರಳದ ಸುಮಾರು 66% ವಿದ್ಯುತ್ ಅಗತ್ಯವು ಇಡುಕ್ಕಿ ಜಿಲ್ಲೆಯ ವಿವಿಧ ಜಲವಿದ್ಯುತ್ ಯೋಜನೆಗಳಿಂದ ಬರುತ್ತದೆ. ಕೇರಳದ ಮೊದಲ ಮತ್ತು ಹಳೆಯ ಅಣೆಕಟ್ಟು ಮುಲ್ಲಪೆರಿಯಾರ್ ಅಣೆಕಟ್ಟು ಇದನ್ನು 1895 ರಲ್ಲಿ ಉದ್ಘಾಟಿಸಲಾಯಿತು. ಕೇರಳದ ಅತಿದೊಡ್ಡ ಅಣೆಕಟ್ಟು ಇಡುಕ್ಕಿ ಅಣೆಕಟ್ಟು, ಇದು ಏಷ್ಯಾದ ಅತಿದೊಡ್ಡ ಕಮಾನು ಅಣೆಕಟ್ಟುಗಳಲ್ಲಿ ಒಂದಾಗಿದೆ ಇದನ್ನು 1955 ರಲ್ಲಿ ನಿರ್ಮಿಸಲಾಯಿತು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.