![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/3/38/Ikebana_-_Yoshiko_Nakamura_01B.jpg/640px-Ikebana_-_Yoshiko_Nakamura_01B.jpg&w=640&q=50)
ಇಕೆಬಾನ
From Wikipedia, the free encyclopedia
ಇಕೆಬಾನ ((生け花?, "arranging flowers") ಎನ್ನುವುದು ಹೂವುಗಳನ್ನು ಜೋಡಿಸಿ ವಿನ್ಯಾಸಗೊಳಿಸುವ ಒಂದು ಜಪಾನಿ ಕಲೆ[1]. ಇದಕ್ಕೆ ಕಡೊ (華道?, the "way of flowers") ಎಂದೂ ಹೇಳುತ್ತಾರೆ. ಈ ಕಲೆಯು ಪ್ರಾರಂಭ ೭ನೇ ಶತಮಾನದಲ್ಲಿಯೇ ಆಯಿತು. ಇದು ಬೌದ್ಧ ಗುರುಗಳ ಪ್ರಭಾವದಿಂದ ೧೬ನೆಯ ಶತಮಾನದಲ್ಲಿ ಪರಾಕಾಷ್ಠೆ ತಲುಪಿತು. ನೂರಾರು ವರ್ಷಗಳಿಂದ ಈ ಕಲೆಯು ಬೆಳೆದು ಬಂದಿದ್ದು ಜಪಾನ್ ಮತ್ತು ವಿಶ್ವದ ಹಲವು ಕಡೆಗಲಲ್ಲಿ ಸಾವಿರಕ್ಕೂ ಹೆಚ್ಚು ಇಕೆಬಾನ ಶಾಲೆಗಳಿವೆ. ಅವುಗಳಲ್ಲಿ ಪ್ರಸಿದ್ಧವಾದುವೆಂದರೆ ಇಕೆನೊಬೊ, ಒಹರ-ರ್ಯು ಮತ್ತು ಸೊಗೆಟ್ಸು-ರ್ಯು.
![Thumb image](http://upload.wikimedia.org/wikipedia/commons/thumb/3/38/Ikebana_-_Yoshiko_Nakamura_01B.jpg/640px-Ikebana_-_Yoshiko_Nakamura_01B.jpg)