ಇಂಡಿಯನ್ನರು, ಉತ್ತರ ಅಮೆರಿಕದ
From Wikipedia, the free encyclopedia
ಉತ್ತರ ಅಮೆರಿಕದ ಮೂಲ ನಿವಾಸಿಗಳು. ಯೂರೋಪಿಯನ್ನರು ಉತ್ತರ ಅಮೆರಿಕಕ್ಕೆ ವಲಸೆ ಬರುವುದಕ್ಕೆ ಮುಂಚಿನಿಂದಲೂ ಇವರು ಅಲ್ಲಿ ವಾಸಿಸುತ್ತಿದ್ದಾರೆ. ಅಮೆರಿಕವನ್ನು ಮೊದಲ ಬಾರಿ ಕಂಡ ಕೊಲಂಬಸ್ ತಾನು ಇಂಡಿಯದ ಪೂರ್ವತೀರವನ್ನು ತಲಪಿದ್ದನೆಂದು ಭಾವಿಸಿದ್ದರಿಂದ ಅಲ್ಲಿ ವಾಸಿಸುತ್ತಿದ್ದ ಜನರನ್ನು ಇಂಡಿಯನ್ನರೆಂದು ಕರೆದ. ಇವರು ಅಮೆರಿಕದವರಾದ್ದರಿಂದ ಇವರಿಗೆ ಈ ಹೆಸರು ಬಂತು. ಇವರ ಪೂರ್ವಿಕರು ಏಷ್ಯಾದ ಈಶಾನ್ಯಭಾಗದಿಂದ ಬೇರಿಂಗ್ ಜಲಸಂಧಿಯ ಮೂಲಕ ವಲಸೆ ಬಂದವರು ಎಂಬುದು ಈಗ ಬಹಳ ಮಟ್ಟಿಗೆ ಖಚಿತವಾಗಿದೆ. ಇವರು ಅಲೆ ಅಲೆಯಾಗಿ ಬಂದು ಬೇರೆ ಬೇರೆಡೆಗಳಲ್ಲಿ ನೆಲೆಸಿದ್ದರಿಂದ ಇವರಲ್ಲಿ ಅನೇಕ ಭಾಷಾವರ್ಗಗಳಿವೆ. (ನೋಡಿ- ಅಮೆರಿಕದ-ಇಂಡಿಯನರ-ಭಾಷೆಗಳು)[1]ನೆಲೆಸಿದ ಪ್ರದೇಶದ ಭೂಸ್ಥಿತಿ, ವಾಯುಗುಣ ಮುಂತಾದವುಗಳಿಗೆ ಅನುಗುಣವಾಗಿ ಇವರ ನಾಗರಿಕತೆಯಲ್ಲೂ ವೈವಿಧ್ಯವುಂಟಾಯಿತು. (ನೋಡಿ- ಅಮೆರಿಕದ-ಆದಿವಾಸಿಗಳು)
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯) |