ಇಂಟರ್ನೆಟ್ ಇತಿಹಾಸ
From Wikipedia, the free encyclopedia
ಇಂಟರ್ನೆಟ್ವರ್ಕಿಂಗ್ ವ್ಯವಸ್ಥೆಯ ಬಳಕೆಯು ವ್ಯಾಪಕವಾಗಿ ಹರಡುವುದಕ್ಕೂ ಮುಂಚೆ ಇದ್ದ ನೆಟ್ವರ್ಕಿಂಗ್ ವ್ಯವಸ್ಥೆಯು ಇಂಟರ್ನೆಟ್ (=ಅಂತರಜಾಲ) ಉಗಮಕ್ಕೆ ಕಾರಣವಾಯಿತು. ಮೊದಲು ಹೆಚ್ಚಿನ ಸಂವಹನ ನೆಟ್ವರ್ಕ್ಗಳು ತಮ್ಮದೇ ಆದ ಮಿತಿಗಳನ್ನು ಹೊಂದಿದ್ದು, ಸ್ಥಳೀಯ ನೆಟ್ವರ್ಕ್ಗಳಲ್ಲಿ ಎರಡು ಸ್ಥಳಗಳ (ಕೇಂದ್ರ) ನಡುವೆ ಸಂವಹನ ನಡೆಸಲು ಮಾತ್ರ ಅವುಗಳು ಅನುವು ಮಾಡಿಕೊಡುತ್ತಿತ್ತು. ಪ್ರಮುಖ ಕಂಪ್ಯೂಟರ್ ನೆಟ್ವರ್ಕಿಂಗ್ ವಿಧಾನಗಳು ಕೇಂದ್ರೀಯ ಮೇನ್ಫ್ರೇಮ್ ಕಂಪ್ಯೂಟರ್ ಮಾದರಿಯನ್ನು ಆಧರಿಸಿದೆ. ಭೌತಿಕವಾಗಿ ಪ್ರತ್ಯೇಕವಾಗಿರುವ ನೆಟ್ವರ್ಕ್ಗಳ ನಡುವೆ ನೆಟ್ವರ್ಕಿಂಗ್ ತತ್ವಗಳನ್ನು ಅನ್ವೇಷಿಸಲು ಹಲವು ಸಂಶೋಧನಾ ಕಾರ್ಯಕ್ರಮಗಳು ಪ್ರಾರಂಭವಾದವು. ಇದು ಡಿಜಿಟಲ್ ನೆಟ್ವರ್ಕಿಂಗ್ನ ಪಾಕೇಟ್ ಸ್ವಿಚಿಂಗ್ ಮಾದರಿಯ ನೆಟ್ವರ್ಕಿಂಗ್ ಅಭಿವೃದ್ಧಿಗೆ ಕಾರಣವಾಯಿತು. ಡೊನಾಲ್ಡ್ ಡೇವಿಸ್ (NPL), ಪೌಲ್ ಬ್ಯಾರನ್ (RAND ಕಾರ್ಪೊರೇಷನ್), ಮತ್ತು MIT ಮತ್ತು UCLAಯಲ್ಲಿರುವ ಲಿಯೊನಾರ್ಡ್ ಕ್ಲೀನ್ರಾಕ್ ಪ್ರಯೋಗಾಲಯಗಳಲ್ಲಿನ ಸಂಶೋಧನಾ ಶ್ರಮವೂ ಇದರಲ್ಲಿ ಒಳಗೊಂಡಿತ್ತು. ಇದರಿಂದಾಗಿ ೧೯೬೦ ಮತ್ತು ೧೯೭೦ರ ದಶಕದ ಉತ್ತರಾರ್ಧದಲ್ಲಿ [1]ಅರ್ಪಾನೆಟ್ ಮತ್ತು X.25 ಪ್ರೋಟಕಾಲ್ಗಳು ಸೇರಿದಂತೆ ಹಲವು ಪಾಕೆಟ್-ಸ್ವಿಚ್ಡ್ ನೆಟ್ವರ್ಕಿಂಗ್ ಮಾದರಿಗಳನ್ನು ಅಭಿವೃದ್ಧಿಪಡಿಸಲು ಕಾರಣವಾಯಿತು. ಜೊತೆಗೆ ಯುನಿಕ್ಸ್ನಿಂದ ಯುನಿಕ್ಸ್ಗೆ ಪ್ರತಿಮಾಡುವುದು (UUCP) ಮತ್ತು ಫಿಡೋನೆಟ್ಗಳು ಸಾರ್ವಜನಿಕನಿಕರಿಗೆ ನಿಲುಕುವಂತಾದದ್ದು ಮತ್ತು ಹವ್ಯಾಸಿ ನೆಟ್ವರ್ಕಿಂಗ್ ವ್ಯವಸ್ಥೆಯ ಜನಪ್ರಿಯತೆಯು ಹೆಚ್ಚಾಗಿತ್ತು. ಆದರೂ ಸಂಪರ್ಕ ರಹಿತ ಪ್ರತ್ಯೇಕ ನೆಟ್ವರ್ಕ್ಗಳು ಮಿತ ಪ್ರಮಾಣದ ಗೇಟ್ವೇಗಳ ಮೂಲಕ ನೆಟ್ವರ್ಕ್ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಇಂಟರ್ನೆಟ್ವರ್ಕಿಂಗ್ಗೆ ಹೊಂದುವ ಪ್ರೋಟಕಾಲ್ ಅಭಿವೃದ್ಧಿಸಲು ಪಾಕೇಟ್ ಸ್ವಿಚಿಂಗ್ ಅನ್ವಯವನ್ನು ರಚಿಸುದು ಇದರಿಂದಾಗಿ ಅಗತ್ಯವೆನಿಸಿತು.ಹೀಗಾಗಿ ವಿವಿಧ ನೆಟ್ವರ್ಕ್ಗಳನ್ನು ಒಂದು ಶ್ರೇಷ್ಠ ಚೌಕಟ್ಟಿನಲ್ಲಿ ಬಂಧಿಸುವುದು ಸಾಧ್ಯವಾಯಿತು. ಇಂಟರ್ನೆಟ್ ಪ್ರೋಟಕಾಲ್ ಸೂಟ್ ಅನ್ನು ಸಾಮಾನ್ಯ ನೆಟ್ವರ್ಕ್ ವ್ಯವಸ್ಥೆಯೆಂದು ಗೊತ್ತುಪಡಿಸುವುದರಿಂದ, ನೆಟ್ವರ್ಕ್ನ ಪರಿಕಲ್ಪನೆಯು ತನ್ನ ಭೌತಿಕ ಕಾರ್ಯನಿರ್ವಹಣೆಯಿಂದ ಬೇರ್ಪಡಿಸಬಹುದಾಗಿದೆ. ಇಂಟರ್ನೆಟ್ವರ್ಕಿಂಗ್ ವಿಕಸನವು ಜಾಗತಿಕ ನೆಟ್ವರ್ಕ್ ಕಲ್ಪನೆಯೊಂದಿಗೆ ಪ್ರಾರಂಭವಾಯಿತು. ಇದನ್ನೇ ಇಂಟರ್ನೆಟ್ ಎಂದು ಕರೆಯಲಾಗಿತ್ತು. ಪ್ರಮಾಣಿತ ಪ್ರೋಟಕಾಲ್ಗಳನ್ನು ಆಧರಿಸಿದ ಇಂಟರ್ನೆಟ್ ಅನ್ನು ೧೯೮೨ರಲ್ಲಿ ಅಧಿಕೃತವಾಗಿ ಅನುಷ್ಠಾನಕ್ಕೆ ತರಲಾಯಿತು. ಪಾಶ್ಚಾತ್ಯ ದೇಶಗಳ ಆಧುನಿಕ ದೂರಸಂಪರ್ಕ ನೆಟ್ವರ್ಕ್ಗಳಲ್ಲಿ ಇದರ ಅಳವಡಿಕೆ ಮತ್ತು ಅಂತರ್ಸಂಪರ್ಕಗೊಳಿಸುವ ಕಾರ್ಯ ತ್ವರಿತವಾಗಿ ಮಾಡಲಾಯಿತು. ಜಾಗತಿಕ ನೆಟ್ವರ್ಕ್ಗೆ ಡಿ-ಫ್ಯಾಕ್ಟೊ ಅಂತರರಾಷ್ಟ್ರೀಯ ಮಾಪನ ದೊರೆಯುತ್ತಿದ್ದಂತೆ, ಈ ಕಾರ್ಯವು ವಿಶ್ವದ ಇತರೆಡೆಗಳಲ್ಲಿ ವ್ಯಾಪಿಸಲು ಆರಂಭವಾಯಿತು. ಆದರೂ, ಡಿಜಿಟಲ್ ವಿಂಗಡಣೆಗೆ ಕಾರಣವಾಗಿರುವ ಮುಂದುವರಿದ ದೇಶಗಳು ಮತ್ತು ತೃತೀಯ ಜಗತ್ತಿಗೆ ಸೇರಿದ ದೇಶಗಳ ನಡುವಿನ ಅಭಿವೃದ್ಧಿಯಲ್ಲಿನ ವ್ಯತ್ಯಾಸವನ್ನು ಇಂದು ಕಾಣಬಹುದಾಗಿದೆ. ೧೯೮೦ನೇ ದಶಕದಲ್ಲಿ ಈ ಕ್ಷೇತ್ರಕ್ಕೆ ಖಾಸಗಿ ಇಂಟರ್ನೆಟ್ ಸೇವೆ ಪೂರೈಕೆದಾರರ ಪ್ರವೇಶವಾಯಿತು ಮತ್ತು ಇಂಟರ್ನೆಟ್ ಅನ್ನು ವಾಣಿಜ್ಯೋದ್ದೇಶಕ್ಕೆ ಎಳೆಯಲಾಯಿತು. ೧೯೯೦ನೇ ದಶಕದಲ್ಲಿ ಭರಪೂರ ಬಳಕೆಯಿಂದಾಗಿ ಇಂಟರ್ನೆಟ್ ವಿಕಸನಗೊಂಡಿತು.ಇಂಟರ್ನೆಟ್ನ ವ್ಯಾಪಕ ಬಳಕೆಯು ಸಂಸ್ಕೃತಿ ಮತ್ತು ವ್ಯಾಪಾರ ವ್ಯಹಾರದ ಮೇಲೆ ತೀವ್ರ ಪರಿಣಾಮ ಬೀರಿತು. ಆ ಹೊತ್ತಿಗೆ ಇಮೇಲ್ (=ವಿದ್ಯುನ್ಮಾನ ಅಂಚೆ) (), ಪಠ್ಯಗಳಿಂದ ಕೂಡಿದ ಚರ್ಚಾ ವೇದಿಕೆಗಳು ಮತ್ತು ವರ್ಲ್ಡ್ ವೈಡ್ ವೆಬ್ನಿಂದ ತ್ವರಿತ ಸಂವಹನದ ಉಗಮವನ್ನು ಇಂಟರ್ನೆಟ್ ಒಳಗೊಂಡಿತ್ತು. ಈ ಅನ್ವೇಷಣೆಗಳಿಂದಾಗಿ ವ್ಯಾಪಾರೋದ್ಯಮದಲ್ಲಿ ಹೂಡಿಕೆದಾರನ ಊಹಾತ್ಮಕ ಮಾರುಕಟ್ಟೆಯೊಂದು ಹುಟ್ಟಿ ಅದು ಹಣದುಬ್ಬರಕ್ಕೆ ಇಂಬು ನೀಡಿತು, ಜೊತೆಗೆ ಉಕ್ಕೇರಿ ಬೆಳೆದಿದ್ದ ಡಾಟ್-ಕಾಮ್ ಕ್ಷೇತ್ರ ಕುಸಿತ ಕಂಡಿತು. ಈ ಎಲ್ಲ ಹಿನ್ನೆಲೆಯ ನಡುವೆಯೂ ಇಂಟರ್ನೆಟ್ ಪ್ರಗತಿಯತ್ತ ಮುಖ ಮಾಡಿತು.
ಕಂಪ್ಯೂಟರಿನ ಇತಿಹಾಸ |
ಹಾರ್ಡ್ವೇರ್ ೧೯೬೦ಕ್ಕೂ ಹಿಂದೆ |
ಹಾರ್ಡ್ವೇರ್ ೧೯೬೦ ರಿಂದ ಇಂದಿನವರೆಗೆ |
Hardware in Soviet Bloc countries |
Artificial intelligence |
Computer science |
Operating systems |
Programming languages |
Software engineering |
Graphical user interface |
Internet |
Personal computers |
Laptops |
Video games |
World Wide Web |
Timeline of computing
|
More... |
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (May 2009) |