ಆಲ್ಡಿಹೈಡುಗಳು
From Wikipedia, the free encyclopedia
ಆಲ್ಡಿಹೈಡುಗಳು ಕೀಟೋನ್ಗಳಿಗೆ ಸಂಬಂಧಿಸಿದ ಕಾರ್ಬೊನಿಲ್ (C=0) ಪುಂಜವನ್ನುಳ್ಳ ಸಾವಯವ ಸಂಯಕ್ತಗಳು. ಇವನ್ನು R−CH=O ಎಂಬ ಸಾಮಾನ್ಯ ಅಣುಸೂತ್ರದಿಂದ ನಿರೂಪಿಸಬಹುದು.[1] ಈ ಸಂಯುಕ್ತಗಳಲ್ಲಿ R ಹೈಡ್ರೊಜನ್, ಆಲ್ಕೈಲ್, ಅರೈಲ್, ಹೋಮೋಸೈಕ್ಲಿಕ್ ಅಥವಾ ಹೆಟೆರೋಸೈಕ್ಲಿಕ್ ಪುಂಜವಾಗಿರಬಹುದು. ಹೆಟೆರೋಸೈಕ್ಲಿಕ್ ಪುಂಜದ ಆಲ್ಡಿಹೈಡುಗಳಲ್ಲಿ ಕಾರ್ಬೊನಿಲ್ ಪುಂಜಕ್ಕೆ ಕೂಡಿಕೊಂಡಿರುವ ಅಣು ಕಾರ್ಬನ್ನೇ ಆಗಿರಬೇಕು. ಈ ಗುಂಪಿನ ಅತಿ ಸರಳ ಸಂಯುಕ್ತವಾದ ಫಾರ್ಮಾಲ್ಡಿಹೈಡಿನಲ್ಲಿ R ಹೈಡ್ರೊಜನ್ ಆಗಿದೆ. ಪಾಲಿಮರ್ ಮತ್ತು ಸುಗಂಧ ಉತ್ಪನ್ನಗಳಿಗಾಗಿ ಆಲ್ಡಿಹೈಡುಗಳು ಬಲು ಜನಜೀವನಕ್ಕೆ ಉಪಯೋಗಕಾರಿಗಳಾಗಿವೆ.