![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/0/02/Alcohol.png/640px-Alcohol.png&w=640&q=50)
ಆಲ್ಕೋಹಾಲ್
From Wikipedia, the free encyclopedia
ರೆಪ್ಪೆಗಳಿಗೆ ಲೇಪಿಸುವ ಪುಡಿ ಎಂಬ ಅರ್ಥವುಳ್ಳ ಅರ್ಯಾಬಿಕ್ ಮೂಲಪದದಿಂದ ಆಲ್ಕೋಹಾಲ್ ಪದ ನಿಷ್ಪನ್ನಗೊಂಡಿದೆ. ಕಾಲ ಕ್ರಮೇಣ ಶುದ್ಧ ಮದ್ಯಸಾರಗಳಿಗೆಲ್ಲ ಆಲ್ಕೋಹಾಲ್ ಪದವನ್ನು ಅನ್ವಯ ಮಾಡಲಾಯಿತು. ಕಾರ್ಬನ್ ಪರಮಾಣುವಿನ ಸಂಯೋಗಶಕ್ತಿ (ವೇಲೆನ್ಸಿ) ನಾಲ್ಕು ಅಂದರೆ, ಅದು ನಾಲ್ಕು ಹೈಡ್ರೊಜನ್ ಅಥವಾ ಇತರ ಪರಮಾಣುಗಳನ್ನು ಹೊರಬಲ್ಲುದು. ಅಂಥ ಸಾವಯವ ವಸ್ತುಗಳು ಪರ್ಯಾಪ್ತವಾಗಿವೆ ಈ ತರಹದ ಕೆಲವು ಹೈಡ್ರೊಕಾರ್ಬನ್ನುಗಳಿವೆ. ಅವುಗಳಲ್ಲಿ ಕಾರ್ಬನ್ ಪರಮಾಣುಗಳು ಸರಪಳಿಯಂತೆ ಒಂದಕ್ಕೊಂದು ಪೋಣಿಸಲ್ಪಟ್ಟಿರುತ್ತವೆ. ಈ ಪರಮಾಣುಗಳು ಚತುಸ್ಸಂಯೋಗಶಕ್ತಿಯನ್ನು ಸರಿದೂಗಿಸಲು ಅಗತ್ಯ ಸಂಖ್ಯೆಯ ಹೈಡ್ರೊಜನ್ ಪರಮಾಣುಗಳಿರುತ್ತವೆ. ಇವೇ ಪ್ಯಾರಫಿನ್ ಹೈಡ್ರೊಕಾರ್ಬನ್ಗಳು ಅಥವಾ ಆಲ್ಕೇನ್ಗಳು. ಪ್ಯಾರಫಿನ್ ಅಣುವಿನಲ್ಲಿರುವ ಒಂದು ಅಥವಾ ಹೆಚ್ಚು ಹೈಡ್ರೊಜನ್ ಪರಮಾಣುಗಳ ಬದಲು, ಅಷ್ಟೇ ಸಂಖ್ಯೆಯ ಹೈಡ್ರಾಕ್ಸಿಲ್ (–OH) ಗುಂಪುಗಳಿದ್ದರೆ ಆಗ ಅದು ಆಲ್ಕೊಹಾಲ್ ಎನಿಸಿಕೊಳ್ಳುತ್ತದೆ.[1][2] ಆದ್ದರಿಂದ ಆಲ್ಕೊಹಾಲ್ಗಳನ್ನು ಹೈಡ್ರಾಕ್ಸಿಪ್ಯಾರಫಿನ್ಗಳು ಎಂದು ಪರಿಗಣಿಸಬಹುದು. ಅವುಗಳ ಅಣುಸೂತ್ರ (CnH2n+1.OH) ಎಂದಾಯಿತು. ಆಲ್ಕೊಹಾಲಿನ ರಚನಾ ಸೂತ್ರವನ್ನು ಕೆಳಕಂಡಂತೆ ಸೂಚಿಸಬಹುದು.
| | | | -C-C-C-C-OH | | | |
![]() | ಈ ಲೇಖನ ಯಾವುದೇ ವಿಕಿಪೀಡಿಯ ಲೇಖನಕ್ಕೆ ಕೊಂಡಿಗಳನ್ನು (Interwiki links) ಹೊಂದಿಲ್ಲ. (ಜುಲೈ ೨೦೧೭) |
![](http://upload.wikimedia.org/wikipedia/commons/thumb/0/02/Alcohol.png/640px-Alcohol.png)