ಆಲಿಸಸ್ ಅಡ್ವೆಂಚರ್ಸ್ ಇನ್ ವಂಡರ್ಲ್ಯಾಂಡ್
ಆಂಗ್ಲ ಕಾದಂಬರಿ / From Wikipedia, the free encyclopedia
ಆಲಿಸಸ್ ಅಡ್ವೆಂಚರ್ಸ್ ಇನ್ ವಂಡರ್ಲ್ಯಾಂಡ್ (ವಂಡರ್ಲ್ಯಾಂಡಿನಲ್ಲಿ ಅಲಿಸ್ನ ಸಾಹಸಗಳು) (ಸಾಮಾನ್ಯವಾಗಿ ಚಿಕ್ಕದಾಗಿ ಆಲಿಸ್ ಇನ್ ವಂಡರ್ಲ್ಯಾಂಡ್ ) ಚಾರ್ಲ್ಸ್ ಲುಟ್ವಿಡ್ಜ್ ಡಾಡ್ಜ್ಸನ್ ಎಂಬ ಆಂಗ್ಲಸಾಹಿತಿಯು ಲೂಯಿಸ್ ಕೆರಾಲ್ ಎಂಬ ಕಾವ್ಯನಾಮದಡಿಯಲ್ಲಿ 1865 ನೆಯ ಇಸವಿಯಲ್ಲಿ ಬರೆದ ಒಂದು ಕಾದಂಬರಿ.[1] ಆಲಿಸ್ ಹೆಸರಿನ ಹುಡುಗಿ ವಿಲಕ್ಷಣ ಮತ್ತು ಪರಿಸ್ಥಿತಿಯಿಂದಾಗಿ ಜೀವವಿಲ್ಲದ ಪ್ರಾಣಿಯಾಗಿ ಮೊಲದ ಬಿಲದಲ್ಲಿ ಬಿದ್ದು ಕಾಲ್ಪನಿಕ ಜಗತ್ತಿನಲ್ಲಿ ವಾಸವಾಗುವ ಕತೆಯುನ್ನು ಹೇಳುತ್ತದೆ. ಕತೆಯು ಡಾಡ್ಜ್ಸನ್ನ ಗೆಳೆಯರಿಗೆ ಹೇಳುವ ಪೂರ್ವಕತೆಗಳಿಂದ ತುಂಬಿದೆ. ಕತೆಯು ಅಂತ್ಯದವರೆಗೂ ತರ್ಕದ ಪಾತ್ರ ವಹಿಸುವುದರಿಂದ ಮಕ್ಕಳ ಜೊತೆ ದೊಡ್ಡವರಲ್ಲೂ ಪ್ರಸಿದ್ದಿ ಹೊಂದಿದೆ.[2] ಅಸಂಬದ್ಧ ಸಾಹಿತ್ಯದ ಪ್ರಕಾರದ [2][3] ಒಂದು ಅತ್ಯಂತ ವಿಶಿಷ್ಟವಾದ ಉದಾಹರಣೆ ಎಂದು ಪರಿಗಣಿಸಲ್ಪಟ್ಟಿದೆ. ಮತ್ತು ಇದರ ವಿವರಣಾ ಶೈಲಿ ಮತ್ತು ರಚನೆ ಅತ್ಯಂತ ಪರಿಣಾಮಕಾರಿಯಾದದ್ದು,[3] ವಿಶೇಷವಾಗಿ ಕಾಲ್ಪನಿಕ ಕತೆ ಪ್ರಕಾರದಲ್ಲಿ.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (November 2008) |