ಕ್ರಮಶಾಸ್ತ್ರವು ಒಂದು ಅಧ್ಯಯನ ಕ್ಷೇತ್ರಕ್ಕೆ ಅನ್ವಯಿಸಲಾದ ವಿಧಾನಗಳ ವ್ಯವಸ್ಥಿತ, ಸೈದ್ಧಾಂತಿಕ ವಿಶ್ಲೇಷಣೆ. ಇದು ಜ್ಞಾನದ ಒಂದು ಶಾಖೆಗೆ ಸಂಬಂಧಿಸಿದ ವಿಧಾನಗಳು ಮತ್ತು ತತ್ವಗಳ ಮಂಡಲದ ಸೈದ್ಧಾಂತಿಕ ವಿಶ್ಲೇಷಣೆಯನ್ನು ಒಳಗೊಳ್ಳುತ್ತದೆ. ಸಾಮಾನ್ಯವಾಗಿ, ಇದು ರೂಪಿಕೆ, ಸೈದ್ಧಾಂತಿಕ ಮಾದರಿ, ಹಂತಗಳು ಮತ್ತು ಪರಿಮಾಣಾತ್ಮಕ ಅಥವಾ ಗುಣಾತ್ಮಕ ಕಾರ್ಯವಿಧಾನಗಳಾಂತಹ ಪರಿಕಲ್ಪನೆಗಳನ್ನು ಒಳಗೊಳ್ಳುತ್ತದೆ.


ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕ್ರಮಶಾಸ್ತ್ರವು ಪರಿಹಾರಗಳನ್ನು ಒದಗಿಸಲು ಹೊರಡುವುದಿಲ್ಲ , ಆದ್ದರಿಂದ, ಇದು ವಿಧಾನಕ್ಕೆ ಸಮಾನವಲ್ಲ. ಬದಲಿಗೆ, ಕ್ರಮಶಾಸ್ತ್ರವು ಯಾವ ವಿಧಾನ, ವಿಧಾನಗಳ ವರ್ಗ, ಅತ್ಯುತ್ತಮ ಆಚರಣೆಗಳನ್ನು ಒಂದು ನಿರ್ದಿಷ್ಟ ಸಂದರ್ಭಕ್ಕೆ, ಉದಾಹರಣೆಗೆ, ಒಂದು ನಿರ್ದಿಷ್ಟ ಪರಿಣಾಮವನ್ನು ಕಂಡುಹಿಡಿಯಲು, ಅನ್ವಯಿಸಬಹುದು ಎಂದು ತಿಳಿಯಲು ಸೈದ್ಧಾಂತಿಕ ಆಧಾರವನ್ನು ನೀಡುತ್ತದೆ.

ಇದನ್ನು ಕೆಳಗಿನಂತೆಯೂ ವ್ಯಾಖ್ಯಾನಿಸಲಾಗಿದೆ:

  1. ಒಂದು ವಿಭಾಗದಿಂದ ಬಳಸಲ್ಪಟ್ಟ ವಿಧಾನಗಳು, ನಿಯಮಗಳು, ಮತ್ತು ಆಧಾರಸೂತ್ರಗಳ ತತ್ವಗಳ ವಿಶ್ಲೇಷಣೆ
  2. ಒಂದು ವಿಭಾಗದಲ್ಲಿ ಅನ್ವಯಿಸಲಾಗುವ, ಅನ್ವಯಿಸಬಲ್ಲ, ಅನ್ವಯಿಸಲ್ಪಟ್ಟ ವಿಧಾನಗಳ ಕ್ರಮಬದ್ಧವಾದ ಅಧ್ಯಯನ
  3. ವಿಧಾನಗಳ ಅಧ್ಯಯನ ಅಥವಾ ವಿವರಣೆ

ಕ್ರಮಶಾಸ್ತ್ರ, ಸಿದ್ಧಾಂತ, ರೂಪಿಕೆ, ಕ್ರಮಾವಳಿ ಮತ್ತು ವಿಧಾನದ ನಡುವಿನ ಸಂಬಂಧ

ಕ್ರಮಶಾಸ್ತ್ರವು ಸಂಶೋಧನೆಯನ್ನು ಕೈಗೊಳ್ಳಬೇಕಾದ ರೀತಿಯ ಸ್ಥೂಲವಿವರಣೆ ನೀಡುವ ಸಾಮಾನ್ಯ ಸಂಶೋಧನಾ ಕಾರ್ಯತಂತ್ರ, ಮತ್ತು ಇತರ ವಿಷಯಗಳ ಜೊತೆ, ಅದರಲ್ಲಿ ಬಳಸಬೇಕಾದ ವಿಧಾನಗಳನ್ನು ಗುರುತಿಸುತ್ತದೆ. ಕ್ರಮಶಾಸ್ತ್ರದಲ್ಲಿ ವಿವರಿಸಲಾದ ಈ ವಿಧಾನಗಳು, ದತ್ತ ಸಂಗ್ರಹಣೆಯ ಉಪಾಯಗಳು ಮತ್ತು ರೀತಿಗಳು, ಅಥವಾ, ಕೆಲವೊಮ್ಮೆ, ಒಂದು ನಿರ್ದಿಷ್ಟ ಪರಿಣಾಮವನ್ನು ಹೇಗೆ ಗಣಿಸಬೇಕು ಎಂಬುದನ್ನು ವ್ಯಾಖ್ಯಾನಿಸುತ್ತವೆ. ಕ್ರಮಶಾಸ್ತ್ರವು ನಿರ್ದಿಷ್ಟ ವಿಧಾನಗಳನ್ನು ವ್ಯಾಖ್ಯಾನಿಸುವುದಿಲ್ಲ, ಆದರೆ ಒಂದು ನಿರ್ದಿಷ್ಟವಾದ ಕಾರ್ಯವಿಧಾನದಲ್ಲಿ ಅಥವಾ ಒಂದು ಉದ್ದೇಶ ಸಾಧಿಸಲು, ಅನುಸರಿಸಬೇಕಾದ ಪ್ರಕ್ರಿಯೆಗಳ ಸ್ವರೂಪ ಮತ್ತು ರೀತಿಗಳಿಗೆ ಬಹಳಷ್ಟು ಗಮನಕೊಡಲಾಗುತ್ತದೆ.

ಕ್ರಮಶಾಸ್ತ್ರದ ಒಂದು ಅಧ್ಯಯನಕ್ಕೆ ಸೇರಿದಾಗ, ಇಂತಹ ಪ್ರಕ್ರಿಯೆಗಳು ಒಂದು ರಚನಾತ್ಮಕ ಜಾತಿವಾಚಕ ಚೌಕಟ್ಟನ್ನು ರಚಿಸುತ್ತವೆ, ಮತ್ತು ಆದ್ದರಿಂದ, ಇವನ್ನು ಉಪ ಪ್ರಕ್ರಿಯೆಗಳಾಗಿ ವಿಭಾಗಿಸಬಹುದು, ಅಥವಾ ಜೋಡಿಸಬಹುದು, ಅಥವಾ ಅವುಗಳ ಅನುಕ್ರಮವನ್ನು ಬದಲಾಯಿಸಬಹುದು.

ಒಂದು ರೂಪಿಕೆಯು ಕ್ರಮಶಾಸ್ತ್ರವನ್ನು ಹೋಲುತ್ತದೆ, ಏಕೆಂದರೆ ಅದು ಕೂಡ ಒಂದು ರಚನಾತ್ಮಕ ಚೌಕಟ್ಟು. ಸೈದ್ಧಾಂತಿಕ ವ್ಯಾಸಂಗದಲ್ಲಿ, ರೂಪಿಕೆಗಳ ಅಭಿವೃದ್ಧಿ ಕ್ರಮಶಾಸ್ತ್ರದ ಬಹುತೇಕ ಅಥವಾ ಎಲ್ಲ ಒರೆಗಲ್ಲುಗಳನ್ನು ಈಡೇರಿಸುತ್ತದೆ. ರೂಪಿಕೆಯಂತೆ ಕ್ರಮಾವಳಿ ಕೂಡ ರಚನಾತ್ಮಕ ಚೌಕಟ್ಟಿನ ಒಂದು ಬಗೆ, ಅಂದರೆ ರಚನೆಯು ಸಂಪರ್ಕಹೊಂದಿದ ಅಂಶಗಳ ಭೌತಿಕದ ಬದಲಾಗಿ, ತಾರ್ಕಿಕ ವ್ಯೂಹ.

ಒಂದು ನಿರ್ದಿಷ್ಟ ಪರಿಣಾಮದ ಗಣನೆಯ ಸಾಧನದ ಯಾವುದೇ ವಿವರಣೆ ಯಾವಾಗಲೂ ಒಂದು ವಿಧಾನದ ವಿವರಣೆಯಾಗಿರುತ್ತದೆ ಮತ್ತು ಎಂದಿಗೂ ಕ್ರಮಶಾಸ್ತ್ರದ ವಿವರಣೆಯಾಗಿರುವುದಿಲ್ಲ. ಹಾಗಾಗಿ, ಕ್ರಮಶಾಸ್ತ್ರವನ್ನು ವಿಧಾನ ಅಥವಾ ವಿಧಾನಗಳ ಮಂಡಲದ ಪರ್ಯಾಯ ಪದವಾಗಿ ಬಳಸುವುದನ್ನು ತಪ್ಪಿಸುವುದು ಮುಖ್ಯ. ಹೀಗೆ ಮಾಡುವುದರಿಂದ ಅದನ್ನು ಅದರ ನಿಜವಾದ ಜ್ಞಾನಮೀಮಾಂಸಾ ಅರ್ಥದಿಂದ ದೂರ ಸ್ಥಳಾಂತರಿಸುತ್ತದೆ, ಮತ್ತು ಅದನ್ನು ಕಾರ್ಯವಿಧಾನವಾಗಿ, ಅಥವಾ ಸಾಧನಗಳ ಸಮೂಹವಾಗಿ, ಅಥವಾ ಅದರ ಫಲಿತಾಂಶವಾಗಿರಬೇಕಾಗಿದ್ದ ಉಪಕರಣಗಳಾಗಿ ಇಳಿಸುತ್ತದೆ. ಕ್ರಮಶಾಸ್ತ್ರವು ಒಂದು ಕಾರ್ಯವಿಧಾನದ ಸಂಶೋಧನೆ ಅಥವಾ ಅಭಿವೃದ್ಧಿಯನ್ನು ಕೈಗೊಳ್ಳಲು ಬಳಸುವ ವಿನ್ಯಾಸ ಪ್ರಕ್ರಿಯೆ, ಮತ್ತು ಅದೇ ಸ್ವತಃ ಕೆಲಸಗಳನ್ನು ಮಾಡಲು ಬಳಸುವ ಉಪಕರಣ, ಅಥವಾ ವಿಧಾನ, ಅಥವಾ ಕಾರ್ಯವಿಧಾನ ಅಲ್ಲ.

ವಿಧಾನ ಮತ್ತು ಕ್ರಮಶಾಸ್ತ್ರ ಪರಸ್ಪರ ಬದಲಾಯಿಸಬಲ್ಲ ಶಬ್ದಗಳಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ, ಕ್ರಮಶಾಸ್ತ್ರವನ್ನು ವಿಧಾನ ಪದದ ಆಡಂಬರದ ಬದಲಿಯಾಗಿ ಬಳಸುವ ಪ್ರವೃತ್ತಿ ಕಂಡುಬಂದಿದೆ. ಕ್ರಮಶಾಸ್ತ್ರವನ್ನು ವಿಧಾನ ಅಥವಾ ವಿಧಾನಗಳ ಸಮೂಹದ ಪರ್ಯಾಯ ಪದವಾಗಿ ಬಳಸುವುದು ಗೊಂದಲ ಮತ್ತು ತಪ್ಪು ಗ್ರಹಿಕೆಗೆ ಕಾರಣವಾಗುತ್ತದೆ ಮತ್ತು ಸಂಶೋಧನೆಯನ್ನು ರೂಪಿಸಲು ಆಗಬೇಕಾದ ಸರಿಯಾದ ವಿಶ್ಲೇಷಣೆಯನ್ನು ದುರ್ಬಲಗೊಳಿಸುತ್ತದೆ.

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.