ಆರ್ಚ್ ಲಿನಕ್ಸ್
From Wikipedia, the free encyclopedia
ಆರ್ಚ್ ಲಿನಕ್ಸ್(Arch Linux) x೮೬-೬೪ ಪ್ರೊಸೆಸರ್ ಹೊಂದಿರುವ ಕಂಪ್ಯೂಟರ್ಗಳಿಗಾಗಿರುವ ಒಂದು ಲಿನಕ್ಸ್ ವಿತರಣೆ. [4] ಇದು ಐದು ತತ್ವಗಳಿಗೆ ಬದ್ಧವಾಗಿದೆ. ಈ ತತ್ವಗಳು ಸರಳತೆ, ಆಧುನಿಕತೆ, ವಾಸ್ತವಿಕವಾದ, ಬಳಕೆದಾರ ಕೇಂದ್ರೀಕರಣ, ಹಾಗು ಬಹುಮುಖತೆ. ಪ್ರಾಯೋಗಿಕವಾಗಿ ಇದರ ಅರ್ಥ ಕನಿಷ್ಠ ವಿತರಣೆ-ನಿರ್ದಿಷ್ಟ ಬದಲಾವಣೆಗಳು, ನವೀಕರಣಗಳೊಂದಿಗೆ ಕನಿಷ್ಠ ಒಡೆಯುವಿಕೆ, ಬಳಕೆದಾರ ಸ್ನೇಹಪರತೆ. [5]
ಡೆವಲಪರ್ಗಳು | ಲೆವೆಂಟೆ ಪಾಲಿಯಾಕ್ ಮತ್ತು ಇತರರು |
---|---|
ಆಪರೇಟಿಂಗ್ ಸಿಸ್ಟಮ್ ಕುಟುಂಬ | ಯುನಿಕ್ಸ್ ತರಹ |
ಕೆಲಸದ ಸ್ಥಾನ | ಪ್ರಸ್ತುತ |
ಮೂಲ ಮಾದರಿ | ಮುಕ್ತ ಸಂಪನ್ಮೂಲ |
ಆರಂಭಿಕ ಬಿಡುಗಡೆ | 11 ಮಾರ್ಚ್ 2002; 8160 ದಿನ ಗಳ ಹಿಂದೆ (2002-೦೩-11) |
ಇತ್ತೀಚಿನ ಸ್ಥಿರ ಆವೃತ್ತಿ | ರೋಲಿಂಗ್ ಬಿಡುಗಡೆ / 2020.08.01[1] |
ಮಾರುಕಟ್ಟೆ ಗುರಿ | ಸಾಮಾನ್ಯ ಉದ್ದೇಶ |
ಪ್ಯಾಕೇಜ್ ಮ್ಯಾನೇಜರ್ | ಪ್ಯಾಕ್ಮನ್, ಲಿಬಳ್ಪಮ್ (ಬ್ಯಾಕ್-ಎಂಡ್) [2] |
ಲೈಸೆನ್ಸ್ | ಉಚಿತ ಸಾಫ್ಟ್ವೇರ್ (GNU GPL ಮತ್ತು ಇತರ ಪರವಾನಗಿಗಳು)[3] |
ಅಧಿಕೃತ ಜಾಲತಾಣ | https://www.archlinux.org/ |
ಆರ್ಚ್ ಲಿನಕ್ಸ್ ಗಾಗೈಯೇ ಬರೆದಿರುವ "ಪ್ಯಾಕ್ಮನ್".[6] ಎಂಬ ಪ್ಯಾಕೇಜ್ ಮ್ಯಾನೇಜರನ್ನು ಬಳಸಿ ಹಲವಾರು ಸಾಫ್ಟ್ವೇರಗಳನ್ನು ಸ್ಥಾಪಿಸಿ ಬಹುದು, ನವೀಕರಿಸಬಹುದು ಹಾಗು ತೆಗೆಯ ಬಹುದು. ಆರ್ಚ್ ಲಿನಕ್ಸ್ ರೋಲಿಂಗ್ ಬಿದುಗಡೆಯನ್ನು ಉಪಯೊಗಿಸುತ್ತದೆ.[7]
ಅಂದರೆ ಇದರಲ್ಲಿ ಯಾವುದೇ ಪ್ರಮುಖ ಬಿಡುಗಡೆಗಳು ಇರುವುದಿಲ್ಲ. ನಿಯಮಿತ ಸಿಸ್ಟಮ್ ನವೀಕರಣದಿಂದ ನಯವಾದ ಆರ್ಚ್ ಲಿನಕ್ಸ್ ಸೊಫ಼್ಟವೇರ್ ಗಳನ್ನು ಪಡೆಯಬಹುದು. ಆರ್ಚ್ ತಂಡವು ಪ್ರತಿ ತಿಂಗಳು ಬಿಡುಗಡೆ ಮಾಡುವ ಅನುಸ್ಥಾಪನಾ ಚಿತ್ರಗಳು ಕೇವಲ ಮುಖ್ಯ ಸಿಸ್ಟಮ್ ಘಟಕಗಳ ನವೀಕೃತ ಸ್ನ್ಯಾಪ್ಶಾಟ್ಗಳಾಗಿವೆ.
ಆರ್ಚ್ ಲಿನಕ್ಸ್ ಸಮಗ್ರ ದಸ್ತಾವೇಜನ್ನು ಹೊಂದಿದೆ, ಇದರಲ್ಲಿ "ಆರ್ಚ್ ವಿಕಿ" ಎಂದು ಕರೆಯಲ್ಪಡುವ ಸಮುದಾಯ ವಿಕಿ ಒಳಗೊಂಡಿದೆ.[8][9][10]