ಆನ್ ಹ್ಯಾಥ್ವೇ (ನಟಿ)
ಅಮೇರಿಕಾದ ಚಲನಚಿತ್ರ ನಟಿ / From Wikipedia, the free encyclopedia
'ಆನ್ ಜಾಕ್ವೆಲಿನ್ ಹ್ಯಾಥ್ವೇ (1982ರ ನವೆಂಬರ್ 12ರಲ್ಲಿ ಜನಿಸಿದಳು )ಒಬ್ಬಳು ಅಮೆರಿಕದ ನಟಿ, ಈಕೆ ಮೊದಲ ಬಾರಿಗೆ 1999ರಲ್ಲಿ ದೂರದರ್ಶನ ಸರಣಿ ಕಾರ್ಯಕ್ರಮ ಗೆಟ್ ರಿಯಲ್ ನಲ್ಲಿ ನಟಿಸಿದಳು. ಇದು ರದ್ದುಗೊಂಡ ನಂತರ ಡಿಸ್ನಿ ಕೌಟುಂಬಿಕ ಹಾಸ್ಯ ದ ಪ್ರಿನ್ಸೆಸ್ ಡೈರೀಸ್ (2001)ನಲ್ಲಿ ಮಿಯಾ ಥರ್ಮೋಪೋಲಿಸ್ ಪಾತ್ರದಲ್ಲಿ ನಟಿಸಿದಳು, ಇದರಿಂದ ಅವಳ ವೃತ್ತಿಜೀವನಕ್ಕೆ ಚಾಲನೆ ಸಿಕ್ಕಿತು. ನಂತರದ ಮೂರು ವರ್ಷಗಳಲ್ಲಿ, ಅದರ ಉತ್ತರಭಾಗದ ಪಾತ್ರದಲ್ಲಿ ಪುನರಾವರ್ತನೆಗೊಳ್ಳುವ ಮೂಲಕ ಹಾಗೂ ಎಲ್ಲಾ ಎನ್ಚಾನ್ಟೆಡ್ 'ನಲ್ಲಿ ಚಿತ್ರದ ಹೆಸರನ್ನೇ ಹೊಂದಿರುವ ಪಾತ್ರದಲ್ಲಿ ನಟಿಸುವ ಮೂಲಕ (ಎರಡೂ 2004) ಹ್ಯಾಥ್ವೇ ಕೌಟುಂಬಿಕ ಚಿತ್ರಗಳಲ್ಲಿ ಅಭಿನಯಿಸುವುದನ್ನು ಮುಂದುವರಿಸಿದಳು. ಇತರ ಯೋಜನೆಗಳಲ್ಲಿ ಆಸಕ್ತಿ ಇದ್ದುದರಿಂದ ಹ್ಯಾಥ್ವೇ ಹ್ಯಾವೋಕ್ ಮತ್ತು ಬ್ರೋಕ್ಬ್ಯಾಕ್ ಮೌಂಟೈನ್ (ಎರಡೂ 2005) ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುವುದರೊಂದಿಗೆ ತನ್ನ ವೃತ್ತಿಜೀವನದಲ್ಲಿ ಬದಲಾವಣೆಯನ್ನು ತಂದುಕೊಂಡಳು. ಆನಂತರ ಅವಳು ದ ಡೆವಿಲ್ ವೇರ್ಸ್ ಪ್ರಾಡ (2006) ಚಿತ್ರದಲ್ಲಿ ಮೆರಿಲ್ ಸ್ಟ್ರೀಪ್ಳೊಂದಿಗೆ ಸಹ-ನಟಿಯಾಗಿ ಹಾಗೂ ಬಿಕಮಿಂಗ್ ಜೇನ್ (2007)ಯಲ್ಲಿ ಜೇನ್ ಆಸ್ಟೆನ್ ಹೆಸರಿನ ಲೇಖಕಿಯಾಗಿ ಅಭಿನಯಿಸಿದಳು. 2008ರಲ್ಲಿ ಅವಳು ರಾಚೆಲ್ ಗೆಟ್ಟಿಂಗ್ ಮ್ಯಾರೀಡ್ ಚಿತ್ರಕ್ಕಾಗಿ ಬಹುವ್ಯಾಪಕವಾಗಿ ವಿಮರ್ಶಾತ್ಮಕ ಪ್ರಶಂಸೆಗಳನ್ನು ಗಳಿಸಿದಳು, ಅಲ್ಲದೆ ಈ ಚಿತ್ರಕ್ಕಾಗಿ ಆಕೆ ಅಸಂಖ್ಯಾತ ಉದ್ಯಮ ಪ್ರಶಸ್ತಿಗಳನ್ನು ಗೆದ್ದಳು ಹಾಗೂ ಅತ್ಯುತ್ತಮ ನಟನೆಗಾಗಿ ಅಕಾಡೆಮಿ ಪ್ರಶಸ್ತಿಗೂ ನಾಮನಿರ್ದೇಶನಗೊಂಡಳು. ಹ್ಯಾಥ್ವೇಳ ನಟನಾ ಶೈಲಿಯನ್ನು ಜ್ಯೂಡಿ ಗಾರ್ಲ್ಯಾಂಡ್ ಮತ್ತು ಆಡ್ರೆ ಹೆಪ್ಬರ್ನ್[1]ರೊಂದಿಗೆ ಹೋಲಿಸಲಾಗುತ್ತದೆ ಹಾಗೂ ಹೆಪ್ಬರ್ನ್ಳನ್ನು ಅವಳ ಅಚ್ಚುಮೆಚ್ಚಿನ ನಟಿಯರಲ್ಲಿ ಒಬ್ಬಳೆಂದು[2] ಮತ್ತು ಸ್ಟ್ರೀಪ್ಳನ್ನು ವರ್ಚಸ್ವಿ ಎಂದು ಅವಳು ಉಲ್ಲೇಖಿಸಿದ್ದಾಳೆ.[3] ಪೀಪಲ್ ನಿಯತಕಾಲಿಕವು ಅದರ 2001ರ ಜನಪ್ರಿಯ ನಟಿಯರಲ್ಲಿ ಇವಳೂ ಒಬ್ಬಳು ಎಂದು ಹೇಳಿದೆ[4] ಮತ್ತು ಪ್ರಪಂಚದ 50 ಅತಿಹೆಚ್ಚು ಸುಂದರ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಬಾರಿಗೆ 2006ರಲ್ಲಿ ಕಾಣಿಸಿಕೊಂಡಳು.[5]