![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/a/a6/ElbowStand.jpg/640px-ElbowStand.jpg&w=640&q=50)
ಆಕ್ರೊ ನೃತ್ಯ
From Wikipedia, the free encyclopedia
ಆಕ್ರೊ ನೃತ್ಯ ವು ನೃತ್ಯದ ಒಂದು ಶೈಲಿಯಾಗಿದ್ದು, ಶಾಸ್ತ್ರೀಯ ನೃತ್ಯದ ತಂತ್ರವನ್ನು ನಿಖರ ಆಕ್ರೊಬಾಟಿಕ್(ದೊಂಬರಾಟದ ಕಸರತ್ತು) ಅಂಶಗಳಿಂದ ಸಂಯೋಜಿಸಿದೆ. ಇದನ್ನು ಅದರ ಅಥ್ಲೆಟಿಕ್ ಲಕ್ಷಣದಿಂದ ವ್ಯಾಖ್ಯಾನಿಸಬಹುದು. ಅದರ ವಿಶಿಷ್ಟ ನೃತ್ಯನಿಯೋಜನೆಯು ನಯವಾಗಿ ನೃತ್ಯ ಮತ್ತು ಆಕ್ರೋಬ್ಯಾಟಿಕ್ಸ್ನ್ನು ಒಂದುಗೂಡಿಸುತ್ತದೆ ಮತ್ತು ನೃತ್ಯದ ಸಂದರ್ಭದಲ್ಲಿ ದೊಂಬರಾಟದ ಕಸರತ್ತುಗಳ ಬಳಕೆಯ ಲಕ್ಷಣದಿಂದ ಕೂಡಿದೆ.[1] ಇದು ಹವ್ಯಾಸಿ ಸ್ಪರ್ಧಾತ್ಮಕ ನೃತ್ಯದಲ್ಲಿ ಮತ್ತು ವೃತ್ತಿಪರ ನೃತ್ಯ ರಂಗಮಂದಿರದಲ್ಲಿ ಹಾಗೂ ಸರ್ಕ್ ಡು ಸೊಲೈಲ್ ಮುಂತಾದವರ ಸಮಕಾಲೀನ ಸರ್ಕಸ್ ತಯಾರಿಕೆಗಳಲ್ಲಿ ಜನಪ್ರಿಯ ನೃತ್ಯ ಶೈಲಿಯಾಗಿದೆ. ಇದು ಲಯಬದ್ಧ ಮತ್ತು ಕಲಾತ್ಮಕ ಜಿಮ್ನಾಸ್ಟಿಕ್ಸ್ಗೆ ತದ್ವಿರುದ್ಧವಾಗಿದೆ. ಅವು ಕ್ರೀಡೆಯಾಗಿದ್ದು, ಜಿಮ್ನಾಸ್ಟಿಕ್ಸ್ ಸಂದರ್ಭದಲ್ಲಿ ನೃತ್ಯದ ಅಂಶಗಳನ್ನು ಬಳಸಿಕೊಳ್ಳುತ್ತದೆ. ಪ್ರತಿಯೊಂದನ್ನೂ ಆಡಳಿತ ನಿರ್ವಹಿಸುವ ಜಿಮ್ನಾಸ್ಟಿಕ್ಸ್ ಸಂಘಟನೆ ಮತ್ತು ಕೋಡ್ ಆಫ್ ಪಾಯಿಂಟ್ಸ್ ನಿಯಂತ್ರಿಸುತ್ತದೆ. ಆಕ್ರೋ ನೃತ್ಯವು ಆಕ್ರೋಬ್ಯಾಟಿಕ್ ನೃತ್ಯ ಮತ್ತು ಜಿಮ್ನಾಸ್ಟಿಕ್ ನೃತ್ಯ ಸೇರಿದಂತೆ ವಿವಿಧ ಹೆಸರುಗಳಿಂದ ಪರಿಚಿತವಾಗಿದೆ. ಆದರೂ ಇದನ್ನು ಸಾಮಾನ್ಯವಾಗಿ ನರ್ತಕರು ಮತ್ತು ವೃತ್ತಿನಿರತ ನರ್ತಕರು ಸರಳವಾಗಿ ಆಕ್ರೊ ಎಂದು ಉಲ್ಲೇಖಿಸುತ್ತಾರೆ.
![Thumb image](http://upload.wikimedia.org/wikipedia/commons/thumb/a/a6/ElbowStand.jpg/640px-ElbowStand.jpg)
ಆಕ್ರೋ ವಿಶೇಷವಾಗಿ ಸವಾಲಿನ ನೃತ್ಯ ಶೈಲಿಯಾಗಿದ್ದು, ನರ್ತಕರಿಗೆ ನೃತ್ಯ ಮತ್ತು ಆಕ್ರೋಬ್ಯಾಟಿಕ್ ಕೌಶಲ್ಯಗಳು ಎರಡರಲ್ಲೂ ತರಬೇತಿ ಪಡೆಯುವ ಅಗತ್ಯವಿರುತ್ತದೆ. ಆಕ್ರೊ ನರ್ತಕರು ಉತ್ತಮ ದೈಹಿಕ ಆರೋಗ್ಯ ಸ್ಥಿತಿಯಿಂದ ಕೂಡಿರಬೇಕು, ಏಕೆಂದರೆ ಆಕ್ರೊ ದೈಹಿಕವಾಗಿ ಬೇಡಿಕೆಯ ಚಟುವಟಿಕೆಯಾಗಿದೆ. ಆಕ್ರೊ ಜನಪ್ರಿಯ ನೃತ್ಯ ಶೈಲಿಯಾಗಿದ್ದರೂ, ಅನೇಕ ನೃತ್ಯ ಶಾಲೆಗಳು ಅದನ್ನು ಬೋಧಿಸುವುದಿಲ್ಲ. ಏಕೆಂದರೆ ಸಾಮಾನ್ಯವಾಗಿ ಆಕ್ರೋಬ್ಯಾಟಿಕ್ ತರಬೇತಿಗೆ ಅಗತ್ಯವಾದ ಸೌಲಭ್ಯಗಳು ಅಥವಾ ತಜ್ಞತೆಯ ಕೊರತೆಯನ್ನು ಅವು ಹೊಂದಿರುತ್ತವೆ.